Billava Warriors – Billava News Portal
Friday, 30 October 2026
Advertiser
Advertisement · 728×90 px
General News

ಮಂಗಳೂರು ಏರ್‌ಪೋರ್ಟ್‌ಗೆ ಕೋಟಿ ಚೆನ್ನಯರ ಹೆಸರಿಡಬೇಕು' - ವಿಧಾನಸಭೆಯಲ್ಲಿ ಧ್ವನಿಯೆತ್ತಿದ ಶಾಸಕ ಉಮಾನಾಥ್ ಕೋಟ್ಯಾನ್

27 Nov 2023
ಮಂಗಳೂರು ಏರ್‌ಪೋರ್ಟ್‌ಗೆ ಕೋಟಿ ಚೆನ್ನಯರ ಹೆಸರಿಡಬೇಕು' - ವಿಧಾನಸಭೆಯಲ್ಲಿ ಧ್ವನಿಯೆತ್ತಿದ ಶಾಸಕ ಉಮಾನಾಥ್ ಕೋಟ್ಯಾನ್
Advertiser
Advertisement · 728×90 px

ಮಂಗಳೂರು: ''ಅಂತರ್‌ ರಾಷ್ಟ್ರೀಯ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕು'' ಎಂದು ವಿಧಾನಸಭೆಯಲ್ಲಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಧ್ವನಿ ಎತ್ತಿದ್ದಾರೆ.

''ಈ ನಾಡಿನಲ್ಲಿ ಜನ್ಮತಳೆದು ತಮ್ಮ ಬದುಕು ಮತ್ತು ಸಾಧನೆಯಿಂದ ವೀರ ಪುರುಷರಾದವರು, ದೈವಿಕ ಶಕ್ತಿ ಗಳಿಸಿಕೊಂಡವರು ಅನೇಕರು ಇದ್ದಾರೆ. ಅವರಲ್ಲಿ ವೀರ ಪುರುಷರು ಎನಿಸಿಕೊಂಡು, ತಮ್ಮ ಜನ ಸೇವೆಯಿಂದ, ವೀರಗಾಥೆಯಿಂದ, ಅಸಮಾನ್ಯ ನಡೆನುಡಿಗಳಿಂದ ದೈವತ್ವಕ್ಕೆ ಏರಿದ ಅಮರರಾದವರಲ್ಲಿ ಕೋಟಿ ಚೆನ್ನಯರ ಹೆಸರು ನಿಜವಾಗಿಯು ಎಲ್ಲರಿಗೂ ತಿಳಿದಿದೆ. ವೀರ ಪುರುಷರಾದ ಕೋಟಿ ಚೆನ್ನಯರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬೇಕು. ವೀರ ಪುರುಷ ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಎಂದು ನಾಮಕರಣ ಮಾಡಬೇಕು'' ಎಂದು ಶಾಸಕ ಉಮಾನಾಥ್ ಕೋಟ್ಯಾನ್ ವಿಧಾನಸಭೆಯಲ್ಲಿ ಒ‌ತ್ತಾಯಿಸಿದ್ದಾರೆ.

''ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಈಗಾಗಲೇ ಮಂಗಳೂರಿನಲ್ಲಿ ಕೋಟಿ ಚೆನ್ನಯರ ಹೆಸರು ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಪ್ರತಿಭಟನೆ, ರ್‍ಯಾಲಿಗಳನ್ನು ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ಜನಾಭಿಪ್ರಾಯಕ್ಕೆ ಮನ್ನಣೆಯನ್ನು ಕೊಟ್ಟು ವೀರ ಪುರುಷ ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಎಂದು ಹೆಸರು ಇಡಬೇಕು'' ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್