Billava Warriors – Billava News Portal
Friday, 30 October 2026
Advertiser
Advertisement · 728×90 px
General News

ಮಾಣಿ ಯುವವಾಹಿನಿಯ ಮನೆಮನೆಗೆ ಗುರುತತ್ವ ಸಂಚಾರದ ಸಂಪನ್ನ ಸಂಭ್ರಮ

27 Nov 2023
ಮಾಣಿ ಯುವವಾಹಿನಿಯ ಮನೆಮನೆಗೆ ಗುರುತತ್ವ ಸಂಚಾರದ ಸಂಪನ್ನ ಸಂಭ್ರಮ
Advertiser
Advertisement · 728×90 px

" ಜಗತ್ತಿನ ವೈಚಾರಿಕತೆಯ ಬೆಳಕು, ಸಾಮಾಜಿಕ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಾರ್ವಕಾಲಿಕ ಮೌಲ್ಯವುಳ್ಳದ್ದು. ಸಂಘಟನೆಗಳ ಸಮಾಜಮುಖಿ ಕಾರ್ಯಗಳು ಸರ್ವರನ್ನೂ ಒಳಗೊಳ್ಳುವ ಒಲವು ಹೊಂದಿರಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ (ರಿ.) ಮಾಣಿ ಘಟಕವು ಹಮ್ಮಿಕೊಂಡಿರುವ ಮನೆಮನೆಗೆ ಗುರುತತ್ವ ಸಂಚಾರ ಕಾರ್ಯಕ್ರಮವು ಸರ್ವಸ್ಪರ್ಶಿ ಉದ್ದೇಶವನ್ನು ಹೊಂದಿದ್ದು ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಪೂರಕವಾಗಿವೆ " ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಂ ಕೆ.ಬಿ.ನುಡಿದರು.ಯುವವಾಹಿನಿ (ರಿ.) ಕೇಂದ್ರ ಸಮಿತಿಯ ವಿಶುಕುಮಾರ್ ದತ್ತಿ ನಿಧಿಯ ಸಂಚಾಲಕರಾದ ಶಶಿಧರ್ ಕಿನ್ನಿಮಜಲು ಸಂಪನ್ನ ಕಾರ್ಯಕ್ರಮದ ಗುರುತತ್ವ ಉಪನ್ಯಾಸ ನೀಡಿ, ನಾರಾಯಣ ಗುರುಗಳ ಸರಳ ಜೀವನ ಮಾದರಿಯ ಅನ್ವಯ ಹಾಗೂ ಅಗತ್ಯತೆಯ ಬಗ್ಗೆ ವಿಶದೀಕರಿಸಿದರು.

ಘಟಕದ ಅಧ್ಯಕ್ಷರಾದ ಪ್ರಶಾಂತ್ ಅನಂತಾಡಿ ಹತ್ತು ಗ್ರಾಮವ್ಯಾಪ್ತಿಯಲ್ಲಿ ಗುರುತತ್ವ ಸಂಚಾರ ನಡೆದುಬಂದ ರೀತಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಕೊಂಡ ಮನೆಯವರಿಗೆ ಕೃತಜ್ಞತೆ ಸಲ್ಲಿಸಿದರು.

ಯುವವಾಹಿನಿ (ರಿ.) ಮಾಣಿ ಘಟಕವು ಕಳೆದ ಒಂದು ತಿಂಗಳಿನಿಂದ ಅನಂತಾಡಿ, ಮಾಣಿ, ಬರಿಮಾರು, ನೆಟ್ಲಮುಡ್ನೂರು, ಕೆದಿಲ,ಕಡೇಶಿವಾಲಯ, ಬಿಳಿಯೂರು,ಪೆರಾಜೆ ಗ್ರಾಮವ್ಯಾಪ್ತಿಗಳ ಹದಿಮೂರು ಕಡೆಗಳಲ್ಲಿ ಮನೆಮನೆಗೆ ಗುರುತತ್ವ ಸಂಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನೂರೈವತ್ತಕ್ಕಿಂತಲೂ ಹೆಚ್ಚು ಮನೆಗಳನ್ನು ಸಂಪರ್ಕಿಸುವ ಮೂಲಕ ಗುರುತತ್ವ ಅಭಿಯಾನವನ್ನು ಯಶಸ್ಸುಗೊಳಿಸಿದೆ. ಈ ಅಭಿಯಾನದಲ್ಲಿ ಗುರುತತ್ವ ಉಪನ್ಯಾಸ ನೀಡಿದ ಶ್ರೀಮತಿ ತ್ರಿವೇಣಿ ರಮೇಶ್, ಶ್ರೀಮತಿ ರೇಣುಕಾ ಕಣಿಯೂರು, ದಿನಕರ್ ಅಂಚನ್, ರಾಜೇಶ್ ಬಲ್ಯ ಹಾಗೂ ಗುರುತತ್ವ ಸಂಚಾರದ ಸಂಚಾಲಕರಾದ ಜನಾರ್ದನ ಕೊಡಂಗೆ ಇವರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾನಿಧಿ ಮತ್ತು ಸ್ಪಂದನ ಯೋಜನೆಗಳ ಬಲವರ್ಧನೆಗಾಗಿ ಆಯೋಜಿಸಿದ ಸಹಾಯಧನ ಕೂಪನಿನ ಬಹುಮಾನವನ್ನು ವಿತರಿಸಲಾಯಿತು ಮತ್ತು ಸ.ಕಿ.ಪ್ರಾ.ಶಾಲೆ,ಬಂಟ್ರಿಂಜ ಇದರ ಕಟ್ಟಡ ಮತ್ತು ಮೇಲ್ಛಾವಣಿ ದುರಸ್ತಿಗೆ ಘಟಕದ ವತಿಯಿಂದ ಸ್ಪಂದನ ಯೋಜನೆಯಡಿ 5000 ರೂಪಾಯಿಯನ್ನು ಶಾಲೆಯ ಎಸ್.ಡಿ.ಎಂ.ಸಿ ಸಮಿತಿಯ ಸದಸ್ಯೆಯಾದ ಶೋಭ ರವರ ಮೂಲಕ ನೀಡಲಾಯಿತು.

ಯುವವಾಹಿನಿ ಕೇಂದ್ರ ಸಮಿತಿಯ ಎರಡನೇ ಉಪಾಧ್ಯಕ್ಷರಾದ ರಾಜೇಶ್ ಬಂಟ್ವಾಳ,ಸತೀಶ್ ಬಾಯಿಲ, ಘಟಕದ ಗೌರವ ಸಲಹೆಗಾರರಾದ ಜಯಂತ ಬರಿಮಾರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ,ಪೇರಮೊಗೆರು ಇದರ ಗೌರವ ಅಧ್ಯಕ್ಷರಾದ ಮಾರಪ್ಪ ಸುವರ್ಣ, ಘಟಕದ ನಿರ್ದೇಶಕರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಭಾಗವಹಿಸಿದ್ದರು.ಶ್ರೀದುರ್ಗಾ ನಿಲಯದ ಶ್ರೀಮತಿ ಶೋಭಾ ರಾಜೇಶ್ ದಂಪತಿಗಳು ಹಾಗೂ ಮನೆಯ ಸದಸ್ಯರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಘಟಕದ ಕಾರ್ಯದರ್ಶಿಯಾದ ರಾಜೇಶ್ ಎಸ್ ಬಲ್ಯ ರವರು ಸ್ವಾಗತಿಸಿದರು. ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಜರ್ನಾದನ ಪೂಜಾರಿ ಕೊಡಂಗೆ ವಂದಿಸಿದರು. ವ್ಯಕ್ತಿತ್ವ ವಿಕಸನ ನಿರ್ದೇಶಕಿ ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

ಘಟಕದ ಉಪಾಧ್ಯಕ್ಷರುಗಳಾದ ಸುಜಿತ್ ಅಂಚನ್,ರವಿಚಂದ್ರ ಬಾಬನಕಟ್ಟೆ, ನಿಕಟಪೂರ್ವ ಕಾರ್ಯದರ್ಶಿ ಶಿವರಾಜ್ ಪಿ.ಆರ್, ಮಾಜಿ ಸಲಹೆಗಾರರಾದ ಬಾಲಕೃಷ್ಣ ದೇಲಬೆಟ್ಟು, ಸಂಘಟನಾ ಕಾರ್ಯದರ್ಶಿ ಕಿರಣ್ ಗೋಳಿಕಟ್ಟೆ, ಸತೀಶ್ ಕೊಪ್ಪರಿಗೆ, ಮಾಜಿ ಕೋಶಾಧಿಕಾರಿ ವಿಶ್ವನಾಥ್ ಮುಜಲ, ಬಾಲಕೃಷ್ಣ ಮುಜಲ, ಪ್ರವೀಣ್ ಮಿತ್ತೂರು ಅತಿಥಿಗಳನ್ನು ಗೌರವಿಸಿದರು.

ವೇದಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಮಾಣಿ ಇದರ ಅಧ್ಯಕ್ಷರಾದ ಸುರೇಶ್ ಸೂರ್ಯ,ಸಲಹಾ ಸಮಿತಿಯ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಕಲೆ,ಸಾಹಿತ್ಯ, ಸಾಂಸ್ಕೃತಿಕ ನಿರ್ದೇಶಕರಾದ ಹರೀಶ್ ಪೂಜಾರಿ ಬಾಕಿಲ, ನಿಕಟಪೂರ್ವ ಅಧ್ಯಕ್ಷರಾದ ರಮೇಶ್ ಮುಜಲ, ಮನೆಯ ಯಜಮಾನರಾದ ರಾಜೇಶ್ ಬಾಬನಕಟ್ಟೆ ಉಪಸ್ಥಿತರಿದ್ದರು. ಯುವವಾಹಿನಿ (ರಿ.)ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ. ಶುಭಹಾರೈಸಿದರು.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್