Billava Warriors – Billava News Portal
Friday, 30 October 2026
Advertiser
Advertisement · 728×90 px
General News

ಭವಿಷ್ಯದ ನಾಯಕ ಪನಾಮಾಕಾರ್ಪೋರೇಷನ್" ನ ಮಾಲಕರು ವಿವೇಕ್ ರಾಜ್ ಪೂಜಾರಿ"

27 Nov 2023
ಭವಿಷ್ಯದ ನಾಯಕ ಪನಾಮಾಕಾರ್ಪೋರೇಷನ್" ನ ಮಾಲಕರು  ವಿವೇಕ್ ರಾಜ್ ಪೂಜಾರಿ"
Advertiser
Advertisement · 728×90 px

"ಭವಿಷ್ಯದ ನಾಯಕ ವಿವೇಕ್ ರಾಜ್ ಪೂಜಾರಿ"

ಕೆಲವರ ಪ್ರಬುದ್ಧತೆ  ಅವರ ವಯಸ್ಸನ್ನೂ ಮೀರಿ ಬೆಳೆದಿರುತ್ತದೆ. ಅಂತಹ ವ್ಯಕ್ತಿಗಳ ಸಾಲಲ್ಲಿ ಬರುತ್ತಾರೆ "ಪನಾಮಾಕಾರ್ಪೋರೇಷನ್" ನ ಮಾಲಕರು "ವಿವೇಕ್ ರಾಜ್ ಪೂಜಾರಿ".

ಕೊರೊನಾ ಎರಡನೇ ಅಲೆಯು ಹೆಚ್ಚಾದ ದಿನದಿಂದ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಹೆಚ್ಚಿನ ಕುಟುಂಬಗಳು ಸಂಕಷ್ಟದಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ 3000ಕ್ಕೂ ಹೆಚ್ಚು ಅಗತ್ಯ ವಸ್ತುಗಳ  ಕಿಟ್ ಮಾನವೀಯತೆಯನ್ನುಮೆರೆದಿದ್ದಾರೆ ಒಂದು ಕಿಟ್ ನಲ್ಲಿ ಸುಮಾರು 800 ರೂ. ವರೆಗಿನ ಅಗತ್ಯ ವಸ್ತುಗಳಿದ್ದು ಒಂದು ಮನೆಯವರಿಗೆ 15 ದಿನಗಳವರೆಗೆಬಳಸಬಹುದು. ಯಾರೇ ಆಗಲಿ ಕಿಟ್ ನ ಅಗತ್ಯವಿದ್ದಲ್ಲಿ ಯಾವುದೇ ಸಂಕೋಚವಿಲ್ಲದೆ ನನ್ನನ್ನು ನೇರವಾಗಿ ಸಂಪರ್ಕಿಸಬಹುದುಎಂದು ಹೇಳಿದ್ದಾರೆ. ಕಳೆದ ವರ್ಷದ ಲಾಕ್ ಡೌನ್ ಸಂದರ್ಭದಲ್ಲೂ 10000ಕ್ಕಿಂತ ಹೆಚ್ಚು ಕಿಟ್ ಹಾಗೂ 1000 ವಲಸೆ ಕಾರ್ಮಿಕರಿಗೆಅಗತ್ಯ ವಸ್ತುಗಳನ್ನು ವಿತರಿಸಿದ್ದಾರೆ. ಅಷ್ಟೇ ಅಲ್ಲದೆ ಬೀದಿ ಬದಿ ವ್ಯಾಪಾರಿಗಳಿಗೆ ಮಳೆ ಮತ್ತು ಬಿಸಿಲಿನಿಂದ ರಕ್ಷಣೆಗೆ ಛತ್ರಿ, ತಳ್ಳುಗಾಡಿಗಳನ್ನು  ನೀಡುವುದರ ಜೊತೆಗೆ ನೈರ್ಮಲ್ಯ ಮತ್ತು ಸುರಕ್ಷತೆಯ ಬಗ್ಗೆ ತಿಳುವಳಿಕೆ,  ಮತ್ತು ತಮ್ಮ ತಳ್ಳುಗಾಡಿಗಳನ್ನುನಿಗದಿಪಡಿಸಿದ ಜಾಗದಲ್ಲಿ ನಿಲ್ಲಿಸಿ ವಾಹನ ಸಂಚಾರ ಮತ್ತು ದಾರಿಹೋಕರಿಗೆ ಅನುಕೂಲವಾಗುವಂತೆ ಮಾಡುವ ಬಗ್ಗೆ ಮಾಹಿತಿಯನ್ನುನೀಡಿದ್ದಾರೆ.

ಯುವಕರಾದರೂ ಇವರ ವಿನಯತೆ, ಸೇವಾ ಮನೋಭಾವ, ನೊಂದ ಹೃದಯಗಳಿಗೆ ಸ್ಪಂದಿಸುವ ರೀತಿ ನಿಜಕ್ಕೂ ಅದ್ಭುತ. ರಾಜಕೀಯ ಪಕ್ಷವನ್ನು ಕೇವಲ ಸೇವೆಯ ವೇದಿಕೆಯಾಗಿ ಕಾಣುವ ಇವರು ಯಾವುದೇ ಧರ್ಮ, ಜಾತಿ ನೋಡದೆ ಪಕ್ಷಾತೀತವಾಗಿ ಈಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಚಾರಕ್ಕೆ ವಿಮುಖರಾಗಿ ಜನರ ಸೇವೆ ಮಾಡುತ್ತಾ ಬಂದಿದ್ದಾರೆ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್