Billava Warriors – Billava News Portal
Friday, 30 October 2026
Advertiser
Advertisement · 728×90 px
General News

ಪಾರ್ಲೆ ಜಿ ಪ್ಯಾಕೆಟ್​ನಲ್ಲಿರುವ ಮಗು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

27 Nov 2023
ಪಾರ್ಲೆ ಜಿ ಪ್ಯಾಕೆಟ್​ನಲ್ಲಿರುವ ಮಗು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ
Advertiser
Advertisement · 728×90 px

ಜೀವನದಲ್ಲಿ ಒಮ್ಮೆಯಾದರೂ ನೀವು ಪಾರ್ಲೆ ಜಿ ಬಿಸ್ಕತ್ತನ್ನು ತಿಂದೇ ಇರ್ತೀರಾ..! ಆದರೆ ಈ ಬಿಸ್ಕತ್ತಿಗೆ ಪಾರ್ಲೆ ಜಿ ಎಂಬ ಹೆಸರು ಹೇಗೆ ಬಂತು ಅಂತಾ ಎಂದಾದರೂ ಯೋಚನೆ ಮಾಡಿದ್ದೀರಾ..?‌ ಈ ಬಿಸ್ಕತ್ತು ತಯಾರಿಕೆಯ ಕಾರ್ಯವನ್ನು ಮುಂಬೈನ ವಿಲೇ ಪಾರ್ಲೆಯಲ್ಲಿ ಆರಂಭಿಸಲಾಯ್ತು.

ಇದೇ ಕಾರಣಕ್ಕೆ ಪಾರ್ಲೆ ಎಂಬ ಪದವನ್ನು ಬಳಕೆ ಮಾಡಲಾಯ್ತು. ಆದರೆ ಪಾರ್ಲೆ ಜಿ ಯಲ್ಲಿರುವ 'ಜಿ' ಅಂದರೆ ಏನು..? ಆ ಪ್ಯಾಕೆಟ್​ನಲ್ಲಿರುವ ಮಗು ಯಾರು..? ಎಂಬ ಪ್ರಶ್ನೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಪಾರ್ಲೆ ಉತ್ಪನ್ನಗಳು 1929ರಿಂದ ಆರಂಭವಾದವು. ಮೊದಲು ಈ ಕಾರ್ಖಾನೆಯಲ್ಲಿ ಕೆಲಸ ಮಾಡ್ತಾ ಇದ್ದದ್ದು ಕೇವಲ 12 ಮಂದಿ ಮಾತ್ರ. ಆಗ ಈ ಬಿಸ್ಕತ್ತಿನ ಹೆಸರು ಪಾರ್ಲೆ - ಗ್ಲುಕೋ ಎಂದಾಗಿತ್ತು. 80 ದಶಕದ ಆರಂಭದವರೆಗೂ ಅದೇ ಹೆಸರನ್ನು ಮುಂದುವರಿಸಲಾಗಿತ್ತು. ಆದರೆ 1981ರಲ್ಲಿ ಕಂಪನಿಯು ಗ್ಲುಕೋ ಎಂಬ ಪದವನ್ನು ಶಾರ್ಟ್ ಮಾಡಿ ಪಾರ್ಲೆ ಜಿ ಎಂದು ಬದಲಾಯಿಸಿದೆ. 80 ದಶಕದಲ್ಲಿ ಈ ಬಿಸ್ಕತ್ತು ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರ ಫೇವರಿಟ್​ ಆಗಿ ಬದಲಾಗಿತ್ತು. ಮಕ್ಕಳಿಗೆ ಈ ಬಿಸ್ಕತ್ತು ಇಷ್ಟವಾದ ಬಳಿಕ ಪಾರ್ಲೆ ಜಿ ಯಲ್ಲಿದ್ದ ಜಿಯನ್ನು ಜೀನಿಯಸ್​ ಎಂದು ಬದಲಾಯಿಸಲಾಯ್ತು. ಆದರೂ ಪ್ಯಾಕೆಟ್​ ಮೇಲೆ ಜಿ ಎಂದೇ ಬರೆಯಲಾಗಿತ್ತು.

 

ಪಾರ್ಲೆ ಜಿ ಬಿಸ್ಕತ್ತಿನ ಪ್ಯಾಕೆಟ್​ನಲ್ಲಿರುವ ಮಗು ಯಾರು..?

 

ಪಾರ್ಲೆ ಜಿ ಬಿಸ್ಕತ್ತಿನ ಪ್ಯಾಕೆಟ್​ನಲ್ಲಿರುವ ಮಗು ಯಾರು ಎಂಬದು ಒಂದು ಮಿಲಿಯನ್​ ಡಾಲರ್ ಪ್ರಶ್ನೆಯಾಗಿದೆ. ಹಲವು ದಶಕಗಳೇ ಕಳೆದರೂ ಸಹ ಈ ಮಗು ಯಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ.

ಆದರೆ ಮೂರು ಹೆಸರುಗಳನ್ನು ಸಾಮಾನ್ಯವಾಗಿ ಹೇಳಲಾಗುತ್ತೆ. ನೀರು ದೇಶಪಾಂಡೆ, ಸುಧಾ ಮೂರ್ತಿ ಹಾಗೂ ಗುಂಜನ್​ ಗುಂಡಾನಿಯಾ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಈ ಮೂವರಲ್ಲಿ ಒಬ್ಬರ ಬಾಲ್ಯದ ಪೋಟೋ ಇದು ಎಂದು ಅನೇಕರು ಹೇಳುತ್ತಾರೆ.ಅದರಲ್ಲೂ ನೀರೂ ದೇಶಪಾಂಡೆ ಹೆಸರು ಹೆಚ್ಚಾಗಿ ಕೇಳಲಾಗುತ್ತಿದೆ.

ಹಲವು ಪತ್ರಿಕೆಗಳಲ್ಲಿ ನೀರು ದೇಶಪಾಂಡೆ ಅವರ ಫೋಟೋ ಸಹಿತ ಸುದ್ದಿ ಪ್ರಕಟವಾಗಿತ್ತು. ಈ ಚಿತ್ರವು ನಾಗ್ಪುರದ ನಿವಾಸಿ 65 ವರ್ಷದ ನೀರು ಅವರ ಬಾಲ್ಯದ ಚಿತ್ರ ಎಂದು ಹಲವಾರು ಮಾಧ್ಯಮ ವರದಿಗಳು ಹೇಳಿವೆ. ನೀರೂ ಅವರ ಈ ಚಿತ್ರವನ್ನು ಆಕೆ 4 ವರ್ಷದವಳಿದ್ದಾಗ ತೆಗೆದದ್ದು ಎಂದು ಸುದ್ದಿಯಲ್ಲಿ ಹೇಳಲಾಗಿತ್ತು. ಅವರ ತಂದೆ ವೃತ್ತಿಪರ ಛಾಯಾಗ್ರಾಹಕ ಅಲ್ಲ, ಆದ್ದರಿಂದ ಅವರು ಸುಮ್ಮನೇ ಒಂದು ಫೋಟೋ ತೆಗೆದಿದ್ದರು. ಆ ಫೋಟೊ ಎಷ್ಟು ಚೆನ್ನಾಗಿ ಬಂದಿತ್ತು ಅಂದರೆ ಅದೇ ಫೋಟೋವನ್ನು ಪಾರ್ಲೆ ಜಿ ಪ್ಯಾಕಿಂಗ್​​ಗೆ ಆಯ್ಕೆ ಮಾಡಿಕೊಂಡಿತು ಎಂದು ಹೇಳಲಾಗುತ್ತದೆ.

ಈ ಸುದ್ದಿ ವೈರಲ್​ ಆಗುತ್ತಿದ್ದಂತೆಯೇ ಪಾರ್ಲೆ ಪ್ರಾಡಕ್ಟ್​ನಿಂದ ಸ್ಪಷ್ಟನೆ ನೀಡಲಾಗಿದೆ. ಎಲ್ಲಾ ವದಂತಿಗಳಿಗೆ ಪೂರ್ಣವಿರಾಮ ಹಾಕಿದ ಗ್ರೂಪ್​​ನ ಪ್ರಾಡಕ್ಟ್​ ಮ್ಯಾನೇಜರ್​ ಮಯಂಕ್​ ಷಾ, ಪ್ಯಾಕೆಟ್​ನಲ್ಲಿ ಕಂಡುಬರುವ ಮಗು ಒಂದು ಇಲ್ಯೂಸ್ಟ್ರೇಷನ್​ ಆಗಿದೆ. ಇದನ್ನು 60ರ ದಶಕದಲ್ಲಿ ಮಾಡಲಾಗಿದೆ. ಇಲ್ಲಿ ಯಾವುದೇ ಮಗುವಿನ ಫೋಟೋವನ್ನು ಕಂಪನಿ ಬಳಕೆ ಮಾಡಿಲ್ಲ. ಈ ಚಿತ್ರವನ್ನು ಎವರೆಸ್ಟ್​​ ಕ್ರಿಯೇಟಿವ್​ ಏಜೆನ್ಸಿ ಸಿದ್ದಪಡಿಸಿದೆ ಎಂದು ಹೇಳಿದ್ದಾರೆ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್