Billava Warriors – Billava News Portal
Friday, 30 October 2026
Advertiser
Advertisement · 728×90 px
General News

ಜೀವನದ ಸುದೀರ್ಘ ವರ್ಷಗಳನ್ನು ಕಾರಿನಲ್ಲಿ ಚಾಲಕನಾಗಿ ಕಳೆದ ವೇಣೂರಿನ ಭೈರಣ್ಣನಿಗೊಂದು ನುಡಿ ನಮನ...

27 Nov 2023
ಜೀವನದ ಸುದೀರ್ಘ ವರ್ಷಗಳನ್ನು  ಕಾರಿನಲ್ಲಿ  ಚಾಲಕನಾಗಿ ಕಳೆದ ವೇಣೂರಿನ ಭೈರಣ್ಣನಿಗೊಂದು ನುಡಿ ನಮನ...
Advertiser
Advertisement · 728×90 px

ಹುಟ್ಟಿದ್ದು ಗುರುಪುರದಲ್ಲಿ. ಜೀವನದ ಸುದೀರ್ಘ ವರ್ಷಗಳನ್ನು  ಚಾಲಕನಾಗಿ ಕಳೆದದ್ದು ವೇಣೂರಿನಲ್ಲಿ. ಸರಿ ಸುಮಾರು 56 ವರ್ಷಗಳ ನಿರಂತರ ಚಾಲಕನಾಗಿ ಸೇವೆ ಸಲ್ಲಿಸಿದ್ದು ವೇಣೂರಿನ ಮಹಾಜನತೆಗೆ !

ಭೈರಣ್ಣನೇ ಹೇಳುವಂತೆ ಅವರು ವೇಣೂರಿಗೆ ಬಂದದ್ದು ಎಪ್ರಿಲ್ 9 , 1967 ರಂದು.  ವೇಣೂರಿನ ಖ್ಯಾತ ವರ್ತಕರಾದ   "ಕಿಟ್ಟೆರ್"  ಎಂದೇ ಖ್ಯಾತರಾದ  ಶ್ರೀ ಖಂಡಿಗ ನರಸಿಂಹ ಪೈ ( ಕೆ.ಎನ್. ಪೈ)ಯವರ ಚಾಲಕನಾಗಿ. ವೇಣೂರಿಗೆ ಬಂದ ಮೇಲೆ ಮತ್ತೆ ಗುರುಪುರಕ್ಕೆಮರಳಲು ಮನಸಾಗದೆ ವೇಣೂರಿನಲ್ಲೇ ಕಾರು ಚಾಲಕನಾಗಿ ನೆಲೆಯಾದವರು ಭೈರಣ್ಣ.

ಕಿಟ್ಟರ ಕಾರಿನ ಬಳಿಕ ಶ್ರೀ ನಾರಾಯಣ ಹೆಗ್ಡೆಯವರ ಕಾರಿನಲ್ಲಿ ಡ್ರೈವರ್ ಆಗಿ, ನಂತರ 1970 ರಿಂದ 1974 ರ ವರೆಗೆ  ಕೆಳಗಿನಪೇಟೆಯ ಸಹನಾ ಟೆಕ್ಸ್ ಟೈಲ್ಸ್ ನ  ಮಾಲೀಕರಾದ ಶ್ರೀಸಂಜೀವ ಸಾಲ್ಯಾನ್ ರ ಚಾಲಕರಾಗಿದ್ದ ಭೈರಣ್ಣ ನಂತರ ಸ್ವಂತ ಕಾರು ಖರೀದಿಸಿಬಾಡಿಗೆಗೆ ಕಾರು ಓಡಿಸಲು ಆರಂಭಿಸಿದರು.

ಭೈರಣ್ಣ ಕಲಿತದ್ದು ಎರಡನೇ ತರಗತಿಯವರೆಗೆ ಮಾತ್ರ. ಮನೆಯಲ್ಲಿ ಬಡತನವಿದ್ದ ಕಾರಣ ಮೊದಲು ಕೂಲಿ ಕೆಲಸ, ಬಳಿಕವಾಮಂಜೂರಿನಲ್ಲಿ ಸ್ವಲ್ಪ ಸಮಯ ಜೊಕಿಂ ಸೆರಾವೊ ಅವರಲ್ಲಿ ಕೆಲಸ, ಮಂಗಳೂರಿನ ಕೊಟ್ಟಾರದಲ್ಲಿ ಮಾಲಿಂಗ ಶೆಟ್ಟಿಯವರಮನೆಯಲ್ಲಿ ಕಾರು ತೊಳೆದು ಅದನ್ನು ಓಡಿಸಲು ಅಭ್ಯಾಸ ಮಾಡಿ ಪರಿಣತಿ ಪಡೆದವರು.

ಭೈರಣ್ಣ ಹೇಳುವಂತೆ ಅವರು ಹುಟ್ಟಿದ್ದು 1938ನೇ ವರ್ಷದ ಮಾಯಿಡ್ ಪದಿಮೂಜಿ ಪೋಯಿನಾನಿ. ತಂದೆ ಫಕೀರ ಪೂಜಾರಿ. ತಾಯಿ ಗೌರಿ. ಈ ದಂಪತಿಗಳ ನಾಲ್ವರು ಮಕ್ಕಳಲ್ಲಿ ಭೈರಣ್ಣ ಒಬ್ಬರು.  ಗುರುಪುರದಲ್ಲಿ ಒಂದೂಕಾಲು ಎಕರೆ ಜಾಗ ಅವರ ತಂದೆಗಿದ್ದಆಸ್ತಿ.

ಭೈರಣ್ಣ ವೇಣೂರಿಗೆ ಬಂದ ಮೇಲೆ ಅನೇಕ ಮಂದಿಯ ಪ್ರಾಣವನ್ನು ಉಳಿಸಿದ ಕೀರ್ತಿ ಅವರದು. 1970 ರಿಂದ 1990 ರ  ಕಾಲದಲ್ಲಿವೇಣೂರಿನಲ್ಲಿ ಬಾಡಿಗೆ ಕಾರು ಅಂದರೆ ಅದು ಭೈರಣ್ಣನ ಕಾರು ಅನ್ನುವಷ್ಟು ಪ್ರಸಿದ್ಧರಾಗಿದ್ದವರು ಅವರು. ಅತ್ಯಂತ ವಿನಯಶೀಲ, ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಯಾವುದೇ ಹೊತ್ತಿನಲ್ಲಿ ಹೋಗಿ ಕರೆದರೂ ಸೇವೆಗೆ ಸದಾ ಸಿದ್ಧರಾಗಿದ್ದ ಭೈರಣ್ಣ ಯಾರೊಂದಿಗೂಸಿಡುಕಿದವರಲ್ಲ. ಎಷ್ಟೋ ಮಂದಿಯ ಮದುವೆ ದಿಬ್ಬಣ, ಆಫೀಸು ಕೆಲಸ, ಪುಣ್ಯಕ್ಷೇತ್ರ ದರ್ಶನ, ಕಾಜೂರು ಉರೂಸ್, ಅತ್ತೂರುಚರ್ಚ್ ಜಾತ್ರೆಗೆ ಜನರನ್ನು ಕರೆದೊಯ್ಯುವ ಕಾರ್ಯ,ಹಲವಾರು ಮಂದಿ ಗರ್ಭಿಣಿಯರನ್ನು ಹಾಗೂ ಅನಾರೋಗ್ಯ ಪೀಡಿತರನ್ನುಸಕಾಲಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕಾಪಾಡಿದ ಕೀರ್ತಿ ಭೈರಣ್ಣನದ್ದು.

ಕೆಲವೊಮ್ಮೆ ಭೈರಣ್ಣನ ಅಂಬಾಸಿಡರ್ ಕಾರ್ ನಿಧಾನವಾಗಿ ಹೋಗುತ್ತಿದೆಯೆಂದರೆ ಯಾರಿಗೋ ಏನೋ ಆಗಿದೆಯೆಂದೋ, ಮಣಿಪಾಲ ಆಸ್ಪತ್ರೆಗೆ ಹೊರಟಿದೆಯೆಂದೋ ಒಂದು ರೀತಿಯ ಅನೂಹ್ಯ ಭಯವೂ ಅಗುವುದಿತ್ತು!

ಕಳೆದ ಕೆಲವು ವರ್ಷಗಳಿಂದ ಕುಟುಂಬದವರು ಬಂದು ವಾರ್ಧಕ್ಯದ  ಸಮಯದಲ್ಲಿ ಗುರುಪುರದ ಮನೆಗೆ ಬರುವಂತೆಕೇಳಿಕೊಂಡರೂ ಅತ್ತ ಹೋಗಲು ಮನಸಾಗದೇ ವೇಣೂರಿನಲ್ಲಿ  ಶ್ರೀ ಕೇಶವ ಕಾಮತರ ಅಂಗಡಿಯ ಮೇಲಿದ್ದ ರೂಮಿನಲ್ಲೇವಾಸವಿದ್ದರು. ಶ್ರೀ ಕೇಶವ ಕಾಮತರ ಸುಪುತ್ರ ಶ್ರೀ ವೆಂಕಟರಮಣ ಕಾಮತರು ಕೊನೆಯವರೆಗೂ ಅವರಿಗೆ ಆಶ್ರಯವಿತ್ತುಸಹೃದಯತೆಯನ್ನು ತೋರಿದವರು. ಭೈರಣ್ಣನ ಶಿಷ್ಯರಾದ ಇಬ್ರಾಹಿಂರವರು ಭೈರಣ್ಣನನ್ನು ಅನಾರೋಗ್ಯದ ಸಮಯದಲ್ಲಿನೋಡಿಕೊಂಡು ಗುರುಭಕ್ತಿಯನ್ನು ಮೆರೆದಿದ್ದಾರೆ.

ಅವಿವಾಹಿತರಾಗಿಯೇ ಉಳಿದಿದ್ದ ಭೈರಣ್ಣ ಕೊನೆಯ ತನಕವೂ ವೇಣೂರಿನಲ್ಲಿಯೇ ಯಾರಿಗೂ ಹೊರೆಯಾಗದಂತೆ ಉಳಿದು   ಜೂನ್ 9, 2023ರಂದು ತಮ್ಮ 85 ನೇ ವಯಸ್ಸಿನಲ್ಲಿ ಭಗವಂತನ ಪಾದವನ್ನು ಸೇರಿದರು.

ವೇಣೂರಿನಲ್ಲಿ 56 ವರ್ಷಗಳ ಕಾಲ ಜನರಿಗೆ ಕಾರಿನ ಮೂಲಕ ಸೇವೆಯನ್ನು ನೀಡಿದ ಭೈರಣ್ಣನನ್ನು ಯಾವುದೇ ಸಂಘಸಂಸ್ಥೆಗಳಾಗಲೀ, ಶಾರದೋತ್ಸವ, ಗಣೇಶೋತ್ಸವ ಸಮಿತಿಯವರಾಗಲೀ ಗುರುತಿಸಿ ಗೌರವಿಸದೇ ಇದ್ದುದ್ದು ಮಾತ್ರ ವಿಷಾದನೀಯ.

ವೇಣೂರಿನ ಸ್ಮರಣೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಭೈರಣ್ಣನಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಡಾ. ಸುಬ್ರಹ್ಮಣ್ಯ ಭಟ್, ಕಜೆ ಮನೆ ವೇಣೂರು

ಮಾಹಿತಿ ಆಧಾರ:

೧. 23-09-2022 ರಂದು ನಾನು ನಡೆಸಿದ ಮೌಖಿಕ ಸಂದರ್ಶನದ ದಾಖಲಾತಿ

೨. ಶ್ರೀಮತಿ ಶಶಿಪ್ರಭಾ ಟೀಚರ್ ಅವರ ಮೌ

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್