Billava Warriors – Billava News Portal
Friday, 30 October 2026
Advertiser
Advertisement · 728×90 px
General News

ಕರಾಟೆ ಪಟುವಿನಿಂದ ಆಧ್ಯಾತ್ಮಿಕ ಪಥದೆಡೆಗೆ - ಬಿಲ್ಲವ ಸಮಾಜದ ಶ್ರೀ ಬ್ರಹ್ಮಋಷಿ ಉಮಾಮಹೇಶ್ವರ ಸ್ವಾಮೀಜಿ ಜೀವನಗಾಥೆ

27 Nov 2023
ಕರಾಟೆ ಪಟುವಿನಿಂದ ಆಧ್ಯಾತ್ಮಿಕ ಪಥದೆಡೆಗೆ - ಬಿಲ್ಲವ ಸಮಾಜದ ಶ್ರೀ ಬ್ರಹ್ಮಋಷಿ ಉಮಾಮಹೇಶ್ವರ ಸ್ವಾಮೀಜಿ ಜೀವನಗಾಥೆ
Advertiser
Advertisement · 728×90 px

ಸಮಾಜದಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ಭಗವಂತನಿಗೆ ಎಲ್ಲರೂ ಸಮಾನರೆ. ಪರಸ್ಪರ ಸಹಾಯ ಮಾಡುವುದೇ ನಿಜವಾದ ಮಾನವೀಯತೆ ಎಂದು ನಂಬಿರುವವರೆ ಕಾರ್ಕಳದ ಕಲ್ಯಾ ಗ್ರಾಮದ ತ್ರಯಂಬಕೇಶ್ವರ ಅನ್ಮಪೂರ್ಣ ಮಠದ ಶ್ರೀ ಶ್ರೀ ಶ್ರೀ ಬ್ರಹ್ಮ ಋಷಿ ಉಮಾಮಹೇಶ್ವರ ಸ್ವಾಮೀಜಿ.

(Copyrights owned by: billavawarriors.com )

ಮೂಲತಃ ಅಜೆಕಾರು ಹೆರ್ಮುಂಡೆ ಗ್ರಾಮದ ಬೊಬ್ಬರ್ಯ ಬಾಕ್ಯಾರ್ ಎಂಬ ಕೃಷಿ ಕುಟುಂಬದ ನಾರಾಯಣ ಪೂಜಾರಿ ಹಾಗು ಸುಂದರಿ ಪೂಜಾರಿ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಯರ್ಲಪಾಡಿ ಗ್ರಾಮದಲ್ಲಿ ಬೆಳೆದರು. ಬಾಲ್ಯದಲ್ಲಿ ಬಹಳ ಚೇಷ್ಟೆ ಸ್ವಭಾವದವರಾಗಿದ್ದು ಐದನೇ ತರಗತಿಯವರೆಗಿನ ಶಿಕ್ಷಣ ಪಡೆದಿದ್ದಾರೆ.

(Copyrights owned by: billavawarriors.com )

ಪೂರ್ವಶ್ರಮದಲ್ಲಿ ಉಮೇಶ್ ಕರ್ಕೇರ ಎಂಬ ಹೆಸರುಳ್ಳ ಇವರಿಗೆ ಆಧ್ಯಾತ್ಮಿಕ ಜೀವನಕ್ಕೆ ಸ್ಪೂರ್ತಿಯಾದವರು ಹಾಗು ಇವರಲ್ಲಿರುವ ಜ್ಞಾನದ ಶಕ್ತಿಯನ್ನು ಹೊರ ಹೊಮ್ಮುವಂತೆ ಮಾಡಿದವರು ಇವರ ಗುರುಗಳಾದ ಸುಂಕದಕಟ್ಟೆಯ ನಿರಂಜನ ಸ್ವಾಮೀಜಿಯವರು. ಮುಂಬಯಿಯಲ್ಲಿ ಉಮೇಶ ಕರ್ಕೇರವರು ನಿರಂಜನ ಸ್ವಾಮೀಜಿಯವರಿಂದ ದೀಕ್ಷೆ ಪಡೆದರು. ಮಹಾರಾಷ್ಟ್ರದಿಂದ ತವರೂರಿಗೆ ಬಂದು 2005 ರಲ್ಲಿ ಕಲ್ಯಾ ಗ್ರಾಮದಲ್ಲಿ ತ್ರಯಂಬಕೇಶ್ವರ ಅನ್ಮಪೂರ್ಣ ಮಠವನ್ನು ಸ್ಥಾಪಿಸಿದರು.ಜೀವನದಲ್ಲಿ ನಮಗೆ ತಿಳಿದಿರುವುದನ್ನು ಇತರರಿಗೂ ಕಲಿಸಬೇಕೆನ್ನುವ ಇವರು ಕರಾಟೆ ಭೋಧಕರಾಗಿದ್ದು. ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸದೆ ಕರಾಟೆ ಕಲಿಸುತ್ತಿದ್ದರು ಹಾಗು ಕಮಾಂಡೊಗಳಿಗೆ ತರಬೇತಿ ನೀಡುತ್ತಿದ್ದರು. ಇನ್ನು ಮುಂದೆಯೂ ಅನೇಕ ಕಲೆ ಹಾಗು ಆಟಗಳನ್ನು ಮಠದಲ್ಲಿಯೂ ಪ್ರಾರಂಭಿಸುವ ಯೋಜನೆ ಹೊಂದಿದ್ದಾರೆ.(Copyrights owned by: billavawarriors.com )

ಮಾನವರು ಸ್ವಾರ್ಥಿಗಳು ಹಾಗು ಅವರು ನಿರೀಕ್ಷೆಗಳೊಂದಿಗೆ ಬದುಕುತ್ತಾರೆ ಆದರೆ ಭಗವಂತ ಮಾತ್ರ ಯಾವುದೇ ನಿರೀಕ್ಷೆಗಳಿಲ್ಲದೆ ನಮ್ಮನ್ನು ಪ್ರೀತಿಸುತ್ತಾನೆ. ಹಾಗೆಯೇ ಆಧ್ಯಾತ್ಮಿಕ ಗುರುವಾದವನು ಎಂದಿಗೂ ತನ್ನ ಭಕ್ತನಿಗೆ ಹಣದ ಬೇಡಿಕೆಯಿಡುವುದಿಲ್ಲ ಭಕ್ತ ತೋರಿಸುವ ಭಕ್ತಿಯೆ ದೊಡ್ಡ ಆಸ್ತಿಯಾಗಿರುತ್ತದೆ ಎನ್ನುತ್ತಾರೆ. ತಮ್ಮ ಮಠ ನೊಂದ ಜನರ ಸ್ವಾಂತನಕ್ಕಾಗಿ ಹಾಗು ಅವರ ಕಷ್ಟಗಳ ಪರಿಹಾರಕ್ಕಾಗಿ ಇದೆ. ಇದರ ಬೆಳವಣಿಗೆ ಇಲ್ಲಿನ ದೇವತೆಯೆ ಮಾಡುತ್ತಾರೆ ಎಂದು ನಂಬಿದ್ದಾರೆ. ಇಂದಿನ ಪೀಳಿಗೆಯ ಜನ ಹೆತ್ತವರನ್ನು ನಿರ್ಲಕ್ಷಿಸುತ್ತಿದ್ದಾರೆ. ಆದರೆ ಹೆತ್ತವರ ಆಶೀರ್ವಾದದ ವಿನಃ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಅವರೇ ಮೊದಲ ದೇವರು ಅವರಿಗೆ ಎಂದಿಗೂ ವಿಧೇಯರಾಗಿರಬೇಕು ಹಾಗು ಜೀವನದಲ್ಲಿ ಗುರುವಿನ ಪಾತ್ರ ಬಹಳ ಮುಖ್ಯವಾದುದು ಎಂಬ ಕಿವಿಮಾತನ್ನು ಜನತೆಗೆ ನೀಡುತ್ತಾರೆ.
(Copyrights owned by: billavawarriors.com )

ಇಂತಹ ಆಧ್ಯಾತ್ಮಿಕ ಜ್ಞಾನಿ ನಮ್ಮ ಬಿಲ್ಲವ ಸಮಾಜದವರು ಎನ್ನುವುದು ಹೆಮ್ಮೆಯ ಸಂಗತಿ. ಎಲ್ಲರನ್ನು ಸಮಾನವಾಗಿ ಕಾಣುವ ಇವರ ಆಧ್ಯಾತ್ಮಿಕ ಬದುಕು ಸಮಾಜದ ಏಳಿಗೆಗೆ ಮಾರ್ಗದರ್ಶನವಾಗಲಿ ಎಂಬುದು ನಮ್ಮೆಲ್ಲರ ಆಶಯ.

ಬರಹ: ನಳಿನಿ ಎಸ್ ಸುವರ್ಣ ಜಾರ್ಕಳ ಮುಂಡ್ಲಿ.

(Copyrights owned by: billavawarriors.com )

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್