Billava Warriors – Billava News Portal
Wednesday, 28 October 2026
General News

WhatsApp self chat: ವಾಟ್ಸ್​​ಆ್ಯಪ್​​ನಲ್ಲಿ ಸೆಲ್ಫ್ ಚಾಟ್ ಫೀಚರ್ ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ

27 Nov 2023
WhatsApp self chat: ವಾಟ್ಸ್​​ಆ್ಯಪ್​​ನಲ್ಲಿ ಸೆಲ್ಫ್ ಚಾಟ್ ಫೀಚರ್ ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ

WhatsApp self chat: ನೀವು ಡೆಸ್ಕ್​ಟಾಪ್ ಬಳಕೆದಾರರಾಗಿದ್ದು, ತ್ವರಿತ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಅಥವಾ ಲಿಂಕ್ಗಳನ್ನು ಉಳಿಸುವ ಸಲುವಾಗಿ ಸ್ವಯಂ ಚಾಟ್ ಅನ್ನು ಪ್ರಾರಂಭಿಸಲು ಬಯಸುವುದಾದರೆ ಏನು ಮಾಡುತ್ತೀರಿ? ಈ ಬಗ್ಗೆ ಮಾಹಿತಿ ಇಲ್ಲಿದೆ.

WhatsApp ಹಲವು ವರ್ಷಗಳಿಂದಲೂ ಇದೆ. ತ್ವರಿತ ಸಂದೇಶ ರವಾನಿಸುವ ಮೂಲಕ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ನಲ್ಲಿ ಜನಪ್ರಿಯತೆ ಪಡೆದಿದೆ. ಒಂದು ವೇಳೆ ನೀವು ಡೆಸ್ಕ್​ಟಾಪ್ ಬಳಕೆದಾರರಾಗಿದ್ದು, ತ್ವರಿತ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಅಥವಾ ಲಿಂಕ್ಗಳನ್ನು ಉಳಿಸುವ ಸಲುವಾಗಿ ಸ್ವಯಂ ಚಾಟ್ ಅನ್ನು ಪ್ರಾರಂಭಿಸಲು ಬಯಸುವುದಾದರೆ ಏನು ಮಾಡುತ್ತೀರಿ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಮೊದಲಿಗೆ ನೀವು ನಿಮ್ಮ ಡೆಸ್ಕ್ಟಾಪ್ ಅಥವಾ ಫೋನ್ ಬ್ರೌಸರ್ ಅನ್ನು ಬಳಸಬೇಕು ಮತ್ತು ನಿಮ್ಮ 10-ಅಂಕಿಯ ಫೋನ್ ಸಂಖ್ಯೆಯೊಂದಿಗೆ wa.me// URL ಅನ್ನು ಹುಡುಕಬೇಕು. ಭಾರತದಲ್ಲಿ ಬಳಕೆದಾರರು ಮೊಬೈಲ್ ಸಂಖ್ಯೆಗೆ ಮುನ್ನ 91 ಸೇರಿಸಬೇಕು. ಉದಾಹರಣೆ: ನಂತರ ಲಿಂಕ್ ಹೇಗೆ ಹೀಗೆ ಕಾಣುತ್ತದೆ- wa.me//91XXXXXXXXXX.

ಯಾವುದೇ ವೆಬ್ ಬ್ರೌಸರ್ನಲ್ಲಿ URL ಅನ್ನು ಹಾಕಿ ಸರ್ಚ್ ಮಾಡಿದಂತೆ ಬಳಕೆದಾರರು ಹೊಸ ವೆಬ್ ಪುಟವನ್ನು ಗಮನಿಸುತ್ತಾರೆ. ಅಲ್ಲಿ ಅದು ವಾಟ್ಸಾಪ್ನಲ್ಲಿ +91 ಚಾಟ್ ಮಾಡಿ (ನಿಮ್ಮ 10-ಅಂಕಿಯ ಮೊಬೈಲ್ ಸಂಖ್ಯೆ) ಎಂದು ಕಾಣಿಸುತ್ತದೆ. ನಂತರ ಬಳಕೆದಾರರು 'ಚಾಟ್ ಮುಂದುವರಿಸಿ' ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಒಟ್ಟು ಎರಡು ಆಯ್ಕೆಗಳಿರುತ್ತವೆ: ಒಂದು ನೀವು ಡೆಸ್ಕ್ಟಾಪ್ನ ವೆಬ್ ಬ್ರೌಸರ್ ಬಳಸುತ್ತಿದ್ದರೆ WhatsApp ವೆಬ್ನ ಡೌನ್ಲೋಡ್ ಲಿಂಕ್ಗೆ ಸಿಗುತ್ತದೆ. ವ್ಯವಸ್ಥೆಯನ್ನು ಅವಲಂಬಿಸಿ ಆಂಡ್ರಾಯ್ಡ್ ಅಥವಾ ಐಒಎಸ್ಗಾಗಿ ನೀವು ವಾಟ್ಸ್ಆ್ಯಪ್ ಡೆಸ್ಕ್​ಟಾಪ್ ಅಥವಾ ವಾಟ್ಸ್​ಆ್ಯಪ್​ ಲಿಂಕ್​​ಗಳನ್ನು ಸಹ ಕಾಣಬಹುದು. ಯಾವುದೇ ರೀತಿಯಲ್ಲಿ ಡೌನ್ಲೋಡ್ ಬಟನ್ ಕೆಳಗೆ WhatsApp ವೆಬ್ ಅನ್ನು ಆಯ್ಕೆ ಮಾಡಬಹುದು.

ಒಮ್ಮೆ ಸ್ವಯಂ ಚಾಟ್ ಆರಂಭವಾದರೆ, ನಿಮ್ಮ ಚಾಟ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಬಳಕೆದಾರರು ಸುಲಭ ಅನ್ವೇಷಣೆಗಾಗಿ ಬಳಕೆದಾರರು ಆದ್ಯತೆಯ ಹೆಸರಿನೊಂದಿಗೆ ಸಂಪರ್ಕವನ್ನು ಉಳಿಸಬಹುದು. ನಿರೀಕ್ಷೆಯಂತೆ, ಸ್ವಯಂ-ಚಾಟ್ ವೈಶಿಷ್ಟ್ಯವನ್ನು WhatsApp ಅಪ್ಲಿಕೇಶನ್ಗಳು ಅಥವಾ ವೆಬ್ ಕ್ಲೈಂಟ್ ಮೂಲಕ ಪ್ರವೇಶಿಸಬಹುದು.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್