Billava Warriors – Billava News Portal
Wednesday, 28 October 2026
General News

ಕಂಬಳ ಲೋಕದ ಕಿಂಗ್‌ 'ತಾಟೆ': ₹ 8 ಲಕ್ಷಕ್ಕೂ ಅಧಿಕ ದರಕ್ಕೆ ಮಾರಾಟವಾಗಿದ್ದ ಕೋಣದ ಸಾಧನೆ ಏನು..?

27 Nov 2023
ಕಂಬಳ ಲೋಕದ ಕಿಂಗ್‌ 'ತಾಟೆ': ₹ 8 ಲಕ್ಷಕ್ಕೂ ಅಧಿಕ ದರಕ್ಕೆ ಮಾರಾಟವಾಗಿದ್ದ ಕೋಣದ ಸಾಧನೆ ಏನು..?

ಮಂಗಳೂರು, ನವೆಂಬರ್‌ 6: ಕರಾವಳಿಯಲ್ಲಿ ಕಂಬಳ ಕಲರವ ಆರಂಭವಾಗಿದೆ. ಈ ಋತುವಿನ ಆರಂಭದ ಎರಡೂಕಂಬಳಗಳು ಭರ್ಜರಿ ಯಶಸ್ಸುಗಳಿಸಿದೆ.

ಜೊತೆಗೆ ಕಂಬಳ ಕ್ಷೇತ್ರದ ಅತೀ ವೇಗದ ಓಟದ ಕೋಣ ಎಂಬ ಬಿರುದು ಪಡೆದ 'ತಾಟೆ' ಎಂಬ ಕಂಬಳ ಕೋಣದ ಯಶಸ್ಸಿನನಾಗಲೋಟವೂ ಮುಂದುವರಿದಿದೆ. ಕಳೆದ ಎರಡು ಕಂಬಳದಲ್ಲೂ ಅಡ್ಡಹಲಗೆ ವಿಭಾಗದಲ್ಲಿ 'ತಾಟೆ' ಕೋಣ ಪ್ರಥಮಸ್ಥಾನವನ್ನು ಪಡೆದಿದೆ.

ಕ್ರಿಕೆಟ್ ಲೋಕದ ದಿ ಬೆಸ್ಟ್ ಫಿನಿಷರ್ ಮಹೇಂದ್ರ ಸಿಂಗ್ ಧೋನಿಯಾದರೆ ಕಂಬಳ ಕ್ಷೇತ್ರದ ದಿ ಬೆಸ್ಟ್ ಫಿನೀಶರ್ ಈ "ತಾಟೆ" ಕೋಣ ಎನ್ನುವುದು ಕಂಬಳ ಕೂಟದ ಲಕ್ಷಾಂತರ ಮಂದಿ ಕಂಬಳ ಕೂಟದ ಅಭಿಮಾನಿಗಳ ಮಾತಾಗಿದೆ.

ಎಂಟೂ ಮುಕ್ಕಾಲು ಲಕ್ಷ ರೂಪಾಯಿಗೆ ಮಾರಾಟವಾಗಿದ್ದ ತಾಟೆ

ಕೊನೆಯ ಹತ್ತು ಮೀಟರ್ ದೂರದಲ್ಲಿ ಗಾಳಿಯನ್ನು ಸೀಳಿ ಮುನ್ನುಗ್ಗುವ ತಾಟೆ ಎಲ್ಲರ ಹುಬ್ಬೇರಿಸುವಂತೆ ವಿಜಯದ ಗುರಿತಲುಪುತ್ತದೆ. ಇದೇ ಮಾದರಿಯಲ್ಲಿ ನೂರಾರು ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಕಂಬಳ ಕ್ಷೇತ್ರಕ್ಕೆ ಹಗ್ಗ ಕಿರಿಯವಿಭಾಗದಲ್ಲಿ ಕಾಲಿಟ್ಟ ತಾಟೆ ಬಳಿಕ ಹಿಂದೆ ತಿರುಗಿ ನೋಡಲೇ ಇಲ್ಲ. ಹಗ್ಗ ಕಿರಿಯ ವಿಭಾಗದಲ್ಲಿ ನೂರಾರು ಪದಕಗಳನ್ನುಸಂಪಾದಿಸಿದ ಬಳಿಕ ನೇಗಿಲು ಹಿರಿಯ ವಿಭಾಗಕ್ಕೆ ಕಾಲಿಟ್ಟಾಗ ಎಂಟೂ ಮುಕ್ಕಾಲು ಲಕ್ಷ ರೂಪಾಯಿಗೆ ಕಂಬಳದ ಪ್ರಸಿದ್ಧಕೋಣಗಳ ಯಜಮಾನ ಇರುವೈಲು ಪಾಣಿಲ ಬಾಡ ಪೂಜಾರಿಯವರ ಮಡಿಲು ಸೇರಿದೆ. ಇಷ್ಟು ದೊಡ್ಡ ಮೊತ್ತದಲ್ಲಿ ಕೋಣಮಾರಾಟವಾಗಿದ್ದು ಕಂಬಳ ಕ್ಷೇತ್ರದಲ್ಲೇ ಭಾರಿ ಸಂಚಲನ ಮೂಡಿಸಿತ್ತು.

ಕಂಬಳದಲ್ಲಿ ಬೊಟ್ಟಿಮಾರ್ ಮತ್ತು ತಾಟೆ ಕೋಣಗಳ ಜೋಡಿ ಮೋಡಿ

ಇರುವೈಲುಗೆ ಬಂದ ಬಳಿಕ ಬೊಟ್ಟಿಮಾರ್ ಮತ್ತು ತಾಟೆ ಕೋಣಗಳ ಜೋಡಿ ಕಂಬಳ ಪ್ರೇಮಿಗಳನ್ನು ಮೋಡಿ ಮಾಡಿದೆ. ಹಲವುವರ್ಷಗಳ ಕಾಲ ಈ ಕೋಣಗಳ ಜೋಡಿ ಕಂಬಳ ಕೂಟದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಾಚಿದೆ. 2019ರಲ್ಲಿ ಮಂಗಳೂರಿನಐಕಳದಲ್ಲಿ ನಡೆದ ಕಾಂತಾಭಾರೆ ಬೂಧಭಾರೆ ಜೋಡುಕರೆ ಕಂಬಳಕೂಟದಲ್ಲಿ ಕಂಬಳ ಇತಿಹಾಸದ ಅತೀ ವೇಗದ ಓಟ ಓಡಿದಖ್ಯಾತ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರ ಅಂದಿನ ಸಾಧನೆಗೆ ಕಾರಣ ಇದೇ ತಾಟೆ ಎನ್ನುವುದು ಕೂಡವಿಶೇಷವಾಗಿದೆ.

ತಾಟೆಯ ಓಟವನ್ನು ನೋಡಲೆಂದೇ ಕಂಬಳಕ್ಕೆ ಜನ ಸಾಗರ

ಕಂಬಳ ಕೂಟದಲ್ಲಿ ಎಲ್ಲರ ಕಣ್ಮನ ಸೆಳೆಯುವ ತಾಟೆ ಕೋಣ ಓಡುವ ರೀತಿಯೇ ಬಹಳ ವಿಶಿಷ್ಠವಾಗಿದೆ. ತಲೆ ಎತ್ತಿ ಓಡುವತಾಟೆ ವಿಜಯದ ಗುರಿಗೆ ಹಾರಿ ರೇಸ್‌ ಅನ್ನು ಅಂತಿಮ ಮಾಡುವುದೇ ವಿಶೇಷವಾಗಿದೆ. ಇಂದಿಗೂ ಜನ ಕಂಬಳಕ್ಕೆ ತಾಟೆಯಓಟವನ್ನು ನೋಡಲೆಂದೇ ಬರುವುದು. ಸದ್ಯ ನಾರಾವಿ ಯುವರಾಜ ಜೈನ್ ಅವರ ಯಜಮಾನಿಕೆಯ ತಂಡದಲ್ಲಿರುವ ತಾಟೆ, ಅಡ್ಡ ಹಲಗೆ ವಿಭಾಗದಲ್ಲಿ ಎರಡೂ ಕಂಬಳ ಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ ಯಜಮಾನನ ನಂಬಿಕೆ ಉಳಿಸಿದೆ.

ತಾಟೆ ಓಟ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಒಟ್ಟಿನಲ್ಲಿ ಕರಾವಳಿಯಲ್ಲಿ ಕಂಬಳ ರಂಗು ಹೆಚ್ಚಾಗಿದೆ. ಓಟಗಾರನ ಪ್ರಸಿದ್ಧಿಗೆ ಓಡುವ ಕೋಣದ ಪ್ರಸಿದ್ಧಿಯೇಜಗದಗಲವಾಗಿದ್ದು ಕಂಬಳದ ಮೇಲಿರುವ ಜನರ ಪ್ರೀತಿಗೆ ಸಾಕ್ಷಿಯಾಗಿದೆ. ತಾಟೆಯ ಓಟದ ವಿಡಿಯೋಗಳು ಸಾಮಾಜಿಕಜಾಲತಾಣದಲ್ಲಿ, ರೀಲ್ಸ್‌ ಮೂಲಕ ಜನಪ್ರಿಯತೆ ಪಡೆಯುತ್ತಿದೆ. ಚಿಗರೆಯ ಓಟದ ತಾಟೆಯನ್ನು ಅಭಿಮಾನಿಗಳು ಪ್ರೀತಿಯಿಂದಕಿಂಗ್ ತಾಟೆ ಎಂದು ಬಿರುದು ನೀಡಿ ಅಭಿಮಾನ ತೋರಿಸಿದ್ದಾರೆ.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್