Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ವಿದೇಶದ ಇಸ್ರೇಲ್ ನಲ್ಲಿದ್ದು ತುಳುನಾಡಿನ ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ ವ್ಯಕ್ತಿ ದಿನಕರ ಪೂಜಾರಿ

23 Apr 2025
Advertiser
Advertisement · 728×90 px

ನಾನು ನನ್ನವರು ಎಂಬ ಈ ಕಾಲ ಘಟ್ಟದಲ್ಲಿ ಸಮಾನ ಮನಸ್ಕರ ಜೊತೆ  ಸೇರಿ ದುಡಿದದ್ದರಲ್ಲಿ ಸ್ವಲ್ಪ ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸುವ ಮಹೋನ್ನತ ಕಾರ್ಯಗೈಯುತ್ತಿರುವ ವ್ಯಕ್ತಿ ದಿನಕರ ಪೂಜಾರಿ.

ವಿದೇಶದಲ್ಲಿದ್ದು ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ. ಇದಕ್ಕೆ ಕಾರಣ ತಾನು ಬಾಲ್ಯದಲ್ಲಿ ಅನುಭವಿಸಿದ ಕಷ್ಟದ ಅನುಭವಗಳು. ವಿದ್ಯೆ ಪಡೆಯುವ ಹಂಬಲವಿದ್ದರೂ ಆರ್ಥಿಕತೆಯ ಬೆಂಬಲವಿಲ್ಲದೆ ಪರಿತಪಿಸಿದ ಕ್ಷಣಗಳು ಇಂದಿಗೂ ಅವರಿಗೆ ಕಹಿ ನೆನಪು.

ಸಕ್ಕರೆ ಮನಸಿನ ದಿನಕರ್ ಪೂಜಾರಿ ಇವರು ಕಾರ್ಕಳ ತಾಲೂಕಿನ ನಕ್ಕರೆ ಎನ್ನುವ ಗ್ರಾಮದಲ್ಲಿ ಬಾಬು ಪೂಜಾರಿ ಮತ್ತು ಉಮಾವತಿ ಇವರಿಗೆ ಕೊನೆಯ ಮಗನಾಗಿ ಜನಿಸುತ್ತಾರೆ. ಬಾಲ್ಯದಲ್ಲಿ ಒಂದನೇ ತರಗತಿಯಿಂದ ನಾಲ್ಕನೆಯವರೆಗೆ ಪಾಡ್ಯ  ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿ, 5ನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ನಕ್ರೆ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದರು. ಬಡತನದ ಬೇಗುದಿಯ ಅನುಭವದಿ ಭವಿಷ್ಯದ ಚಿಂತೆಯ ಜೊತೆಗೆ ಓದಿನ ಆಸಕ್ತಿಯಿಂದ 15ನೇ ವಯಸ್ಸಿಗೆ

ಮುಂಬೈಗೆ ಬಂದು ಮುಂಬೈ ಕೆಬಿಎಸ್ ಕಾಲೇಜ್ ನಲ್ಲಿ ವ್ಯಾಸಾಂಗ ಮುಗಿಸಿ, ಭವಿಷ್ಯ ರೂಪಿಸುವ ದೃಢ ನಿರ್ಧಾರದಿಂದ ಕ್ಯಾಂಟೀನ್ ನಲ್ಲಿ ಕೆಲಸಕ್ಕೆ ಸೇರಿ, ಮುಂದೆ ತನ್ನದೇ ಆದ ಸ್ವಂತ ರೆಸ್ಟೋರೆಂಟ್ ಮತ್ತು ಬಾರುಗಳನ್ನು ನಡೆಸಿಕೊಂಡು ಬರುವಷ್ಟರಮಟ್ಟಿಗೆ ಆತ್ಮವಿಶ್ವಾಸ ಬೆಳೆಸಿಕೊಂಡರು.

2009 ನೇ ಇಸವಿಯಲ್ಲಿ ಉದ್ಯೋಗದ ನಿಮಿತ್ತ ಇಸ್ರೇಲ್ ನಲ್ಲಿ ನೆಲೆಸಿ ಫೈನಾನ್ಸ್ ಉದ್ಯೋಗವನ್ನು ಮಾಡುತ್ತಾರೆ. ಇದೀಗ ಅನಿವಾಸಿ ಭಾರತೀಯರಾಗಿದ್ದು, ಇಸ್ರೇಲ್ ನಲ್ಲಿ ತಮ್ಮದೇ ರೀತಿಯಲ್ಲಿ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಎಲ್ಲಾ ಸಂಘ-ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ದಾನ ಧರ್ಮ ಅಂತ ಬಂದರೆ ಸರ್ವಧರ್ಮದವರಿಗೂ ದಾನ ಮಾಡುವುದು ಇವರ ದೊಡ್ಡ ಗುಣವಾಗಿದೆ.

ಸುಮಾರು 5 ವರ್ಷಗಳಿಂದ "ಆಶಾಕಿರಣ ಹೆಲ್ಪಿಂಗ್ ಫಂಡ್ ಇಸ್ರೇಲ್" ಎನ್ನುವ ಸಂಘಟನೆ ಮಾಡಿ, ಇಸ್ರೇಲ್ ನಲ್ಲಿರುವ ಸ್ನೇಹಿತರನ್ನು ಸೇರಿಸಿಕೊಂಡು  ಆ  ಸಂಘಟನೆಯಿಂದ ಸುಮಾರು 50 ಲಕ್ಷದವರೆಗೆ ಭಾರತದಲ್ಲಿರುವ ಅಸಹಾಯಕ ಕುಟುಂಬಗಳಿಗೆ ನೆರವಾಗುವುದರಲ್ಲಿ ಇವರ ಕೊಡುಗೆ ಅವಿಸ್ಮರಣೀಯ.

ಮುಂದೆ 2023ರಲ್ಲಿ ತನ್ನಂತೆ  ಇರುವ 15 ಜನರ ಸಮಾನ ಮನಸ್ಕರನ್ನು ಸೇರಿಸಿಕೊಂಡು ಇಸ್ರೇಲ್  ನಲ್ಲಿ  "ಓಂ ನಾರಾಯಣಗುರು ಹೆಲ್ಪಿಂಗ್ ಗ್ರೂಪ್ ಇಸ್ರೇಲ್" ಎನ್ನುವ ಸಂಸ್ಥೆಯನ್ನು ಸಂಘಟಿಸಿ ಅದರ ಮೂಲಕ 10 ಲಕ್ಷದಷ್ಟು ಭಾರತದಲ್ಲಿರುವ ಸಂಕಷ್ಟ ಕುಟುಂಬಗಳಿಗೆ ಸಹಾಯ ಮಾಡಿರುತ್ತಾರೆ. ಅದೇ ರೀತಿ  ಇಸ್ರೇಲ್ ನಲ್ಲಿ ನೆಲೆಸಿರುವ ತನ್ನ ಊರಿನ ಜನರಿಗೆ ಯಾವ ಕಷ್ಟದ ಸಮಯದಲ್ಲಾದರೂ  ಮನೆಯವರ ರೀತಿ ಸ್ಪಂದಿಸಿ, ಸಹಾಯ ಮಾಡುವ ಇವರ ಗುಣ ಮಹತ್ವದ್ದಾಗಿದೆ.

ಮಡದಿ ಭಾರತಿ ಮತ್ತು ಧನ್ವಿತ್ ಎನ್ನುವ ಒಬ್ಬ ಮಗನಿದ್ದು, ಚಿಕ್ಕದಾದ ಕುಟುಂಬವನ್ನು ಹೊಂದಿದ್ದಾರೆ. ದಿವಾಕರ್ ಸಾಲಿಯಾನ್ ಮತ್ತು ರತ್ನಾಕರ್ ಸಾಲಿಯಾನ್ ಎಂಬ ಇಬ್ಬರು ಸಹೋದರರು, ಶಶಿಕಲಾ ಎನ್ನುವ ಸಹೋದರಿಯಿದ್ದಾರೆ.

ತನ್ನ ಉದ್ಯೋಗದಂದಿಗೆ ಸಾಮಾಜಿಕ ಕಾಳಜಿಯ ಇವರ ಉದಾತ್ತ ಸೇವೆಗಳು ಹಲವಾರು ಕುಟುಂಬಗಳ ಪಾಲಿಗೆ ವರದಾನವಾಗಿದೆ. ಬರಲಿ ಸಂಪತ್ತು ಇವರಿಗೆ ಇನ್ನಷ್ಟು... ಮಾಡಲಿ ಸೇವೆ ಮತ್ತಷ್ಟು..... ಇದೇ ನಮ್ಮ ಆಶಯ.

(Copyrights owned by: billavawarriors.com )

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್