Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಪುತ್ತೂರು: ಕೋಟಿ ಚೆನ್ನಯರ ಹುಟ್ಟೂರ ಗೆಜ್ಜೆಗಿರಿ ಮೂಲಸ್ಥಾನದ ಈ ಗ್ರಾಮದ ಶಾಲೆಯಲ್ಲಿ ಅಷ್ಟ ಅವಳಿ ಮಕ್ಕಳು

22 Jul 2025
Advertiser
Advertisement · 728×90 px

ಪುತ್ತೂರು: ಈ ಶಾಲಾ ವಠಾರದಲ್ಲಿ ಓಡಾಡಿದರೆ ತತ್‌ಕ್ಷಣ

ನಿಮ್ಮ ಕಣ್ಣಿಗೆ ಆಗಾಗ ಒಬ್ಬರಂತೆಯೇ ಇರುವ ಇನ್ನೊಬ್ಬ ಮಕ್ಕಳು ಕಂಡರೆ ಅಚ್ಚರಿಪಡಬೇಡಿ. ಯಾಕೆಂದರೆ, ಈ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಎಂಟು ಅವಳಿಗಳು ಇದ್ದಾರೆ!

ಕೆಲವು ದಿನಗಳ ಹಿಂದೆ ಎಣ್ಣೂರಿನ ಶಾಲೆಯಲ್ಲಿ ಪಂಚ ಅವಳಿಗಳಿರುವ ಸುದ್ದಿ ಸದ್ದು ಮಾಡಿತ್ತು. ಈಗ ಈಶ್ವರಮಂಗಲದ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಅವಳಿಗಳ ಕಥೆ. ವಿಶೇಷವೆಂದರೆ ಎಣ್ಣೂರು ಮತ್ತು ಈ ಶಾಲೆ ಇರುವ ಊರು ಎರಡಕ್ಕೂ ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯ್ಯರ ನಂಟಿದೆ!

ಅವಳಿ ವೀರರ ಗ್ರಾಮ..!

ಕೋಟಿ-ಚೆನ್ನೆಯ ಅವರ ಹುಟ್ಟೂರಿನ ನೆಲೆಗಳು, ಅವರು ಇರುವಿಕೆಯ ಕುರುಹು ಗಳು ಹರಡಿಕೊಂಡಿರುವ ಪಡವನ್ನೂರು – ಬಡಗನ್ನೂರು ಗ್ರಾಮಗಳಲ್ಲಿ ಒಂದಾಗಿ ರುವ ಪಡವನ್ನೂರು ಗ್ರಾಮದಲ್ಲಿ ಈ ಶಾಲೆ ಇದೆ. ಪಡವನ್ನೂರು, ಬಡಗನ್ನೂರು ಕೋಟಿ ಚೆನ್ನಯರ ಹುಟ್ಟೂರು. ಇವರ ಜನ್ಮದಾತೆ ದೇಯಿ ಬೈದೇತಿಯ ಸಮಾಧಿ ಇರುವ ಪುಣ್ಯ ಭೂಮಿ. ಈ ಕಾರಣಿಕ ಶಕ್ತಿಗಳು ನಡೆದಾಡಿದ ಹಲವು ಐತಿಹ್ಯಗಳು ಇಲ್ಲಿ ಈಗಲೂ ಇವೆ. ಕೋಟಿ ಚೆನ್ನಯ ಜನ್ಮಸ್ಥಳ, ಗೆಜ್ಜೆಗಿರಿ ಮೂಲಸ್ಥಾನಗಳು ಈ ಗ್ರಾಮದಲ್ಲಿ ಇವೆ.

ಹೇಗಿದ್ದಾರೆ ಇಲ್ಲಿನ ಅವಳಿಗಳು?

ಈಶ್ವರ ಮಂಗಲ ಶಾಲೆಯಲ್ಲಿರುವ ಎಂಟು ಅವಳಿ ಗಳಲ್ಲಿ 3 ಜೋಡಿಗಳು ಹುಡುಗರಾಗಿದ್ದರೆ, ಇನ್ನು 3 ಅವಳಿ ಹುಡುಗಿಯರು. ಎರಡು ಜೋಡಿಗಳು ಹುಡುಗ ಮತ್ತು ಹುಡುಗಿ. ಹೀಗೆ 3 ವಿಭಾಗದಲ್ಲಿಯು ಇರುವ ಈ ಪುಟಾಣಿಗಳ ಪೈಕಿ 2 ಜೋಡಿಗಳು ಒಂದೇ ತರಗತಿಯ ಸಹಪಾಠಿಗಳು. ಉಳಿದವರು ಬೇರೆ ತರಗತಿಯವರು.

ಇವರೇ ನೋಡಿ ಅವಳಿಗಳು! ಶ್ರೀ ಗಜಾನನ ಆಂಗ್ಲಮಾಧ್ಯಮ ಶಾಲೆ ಈಶ್ವರಮಂಗಲ:

ಚರಿತ್ ರೈ ಮತ್ತು ಚಾರ್ವಿಕ್ ರೈ- ಪ್ರಿಕೆಜಿ (ಹೆತ್ತವರು: ಸನತ್ ಕುಮಾರ್ ರೈ ಎಂ. ಹಾಗೂ ಹರ್ಷಿತಾ )

ಚತುಷ್ಕ.ಎಂ.ಕೆ ಮತ್ತು ಚರಿಷ್ಮ ಎಂ. ಕೆ.-ಎಲ್‌ಕೆಜಿ (ಮನೋಜ್ ಕುಮಾರ್ ಕೆ. ಮತ್ತು ಪೂಜಿತ ಎಂ.ವಿ)

ಯಶಸ್ ಡಿ.ಆರ್. ಹಾಗೂ ಶ್ರೇಯಸ್ ಡಿ.ಆರ್.- 1ನೇ ತರಗತಿ (ರಾಜೇಶ್ ಡಿ.ಬಿ ಮತ್ತು ಸುಹಾಸಿನಿ ಎನ್)

ವಂಶಿಕ ಎ. ಮತ್ತು ವಿಶ್ಚಿಕ - 2ನೇ ತರಗತಿ (ಆನಂದ ನಾಯ್ಕ ಎ. ಮತ್ತು ಪ್ರಮೀಳಾ ಕೆ ಆರ್)

ಆಸಿಯತ್ ಶಫಾನ ಮತ್ತು ಮರಿಯಂ ಶಿಫಾನ – 3ನೇ ತರಗತಿ (ಕೆ.ವಿ. ಹೈದರಾಲಿ ಮತ್ತು ಆಯುಷತ್‌ ಸುಮಿಯ)

ಅನ್ವಿತ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ- 5ನೇ ತರಗತಿ (ಉದಯ ಶೆಟ್ಟಿ ಮತ್ತು ರೂಪ)

ನವ್ಯ ಬಿ. ಮತ್ತು ನಿತಿನ್ ಬಿ.- 5ನೇ ತರಗತಿ (ಸುದೇಶ ಮತ್ತು ಪ್ರಫುಲ್ಲ)

ಸಾನ್ವಿ ಎಂ.ಪಿ. ಮತ್ತು ಶ್ರಾವ್ಯ ಎಂ.ಪಿ -8 ತರಗತಿ (ಮನಮೋಹನ ಎಂ. ಮತ್ತು ಪುಷ್ಪಾವತಿ ಟಿ

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್