Billava Warriors – Billava News Portal
Wednesday, 28 October 2026
General News

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!

18 Jul 2024

ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು ಹಾರ ಹಾಕುವ ಮೂಲಕ ಹೆಸರು ಗಳಿಸುವ ಮುಂದಾಳೊಚನೆಯಿಂದ ಸಮಾಜದಲ್ಲಿ ನಾಯಕರಾಗಿ ಗುರುತಿಸಲ್ಪಡುವವರೇ ಹೆಚ್ಚು....

ಆದರೆ ಇಲ್ಲೊಬ್ಬ ವ್ಯಕ್ತಿ ಕಾರ್ಕಳ   ಪ್ರತೀಷ್ಠಿತ ಮನೆಯೊಂದರಲಿ ಜನಿಸಿ, ತಂದೆಯಂತೆ, ಸಮಾಜಕ್ಕಾಗಿ ಹತ್ತು ಹಲವಾರು ಸೇವೆಗಳನ್ನು ನೀಡಿರುವ ಒರ್ವ ಶ್ರೇಷ್ಠ ಸೇವಕರ ಬಗೆಗಿನ ಪುಟ್ಟ ಪರಿಚಯ...

ಸಂದೀಪ್ ಕೋಟ್ಯಾನ್, ಭಾರತೀಯ ಸಂಸ್ಕ್ರತಿಯ ಬಗ್ಗೆ ಅಪಾರವಾದ ಗೌರವ ಹೊಂದಿರುವ ಒರ್ವ ವ್ಯಕ್ತಿ, ಉದ್ಯೋಗಕ್ಕಾಗಿ ದುಬೈ ದೇಶಕ್ಕಾಗಿ ಬಂದು ತನ್ನ ವಯಕ್ತಿಕ ಶ್ರಮದಿಂದ ಯಾರೊಬ್ಬರ ಹಂಗಿಲ್ಲದೆ ದುಡಿಯುತ್ತ ನಂತರದಲ್ಲಿ ತನ್ನದೇ ಆದ ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು, ಪ್ರಾರಂಭದಲ್ಲಿ ಅನೇಕ ರೀತಿಯ ಕಷ್ಟದ ದಿನಗಳನ್ನು ಧೈರ್ಯದಿಂದ ಎದುರಿಸಿ, ಯಾವ ಸಂಘಟನೆ ಸಹಾಯವನ್ನು ಪಡೆಯದೆ, ತನ್ನ ಆತ್ಮಸ್ತೈರ್ಯದ ಮೂಲಕ ತಾನು ಕಲಿತಂತಹ ಕೆಲಸ ಹಾಗೂ ತಾನು ನಂಬಿರುವ ದೇವರ ಮೇಲೆ‌ ಬಾರವನ್ನು ಹಾಕಿ ದುಬೈ ದೇಶದಲ್ಲಿ ಯಶಸ್ವಿ ಉದ್ಯಮಿಯಾಗಿ ಇಂದು ನಿಂತಿರುವ ವ್ಯಕ್ತಿ ಸಂದೀಪ್‌ ಕೋಟ್ಯಾನ್...

ಯಾವ ವ್ಯಕ್ತಿಗೂ ಮೋಸ ವಂಚನೆಯನ್ನು ಮಾಡದೆ ತನ್ನಲ್ಲಿರುವ ಅಪಾರವಾದ ಮಾನವೀಯತೆಯನ್ನು ಬಳಸಿ, ತಂದೆಯಂತೆ ಬಿಲ್ಲವ ಸಂಘಟನೆ ಹಾಗೂ ಬಿರುವೆರ್ ಕುಡ್ಲ ದುಬೈ ಘಟಕದ ಜೊತೆ ತಾನು ಒಬ್ಬರಾಗಿ ಪ್ರತಿಯೊಂದು ವಿಚಾರದಲ್ಲೂ ಸೇವೆಯನ್ನು ನೀಡುತ್ತಿರುವಂತಹ‌ ವ್ಯಕ್ತಿ‌ ಇವರು. ಇಷ್ಟೇ ಅಲ್ಲದೆ ಉದ್ಯೋಗ ಕ್ಷೇತ್ರದಲ್ಲಿ ತನ್ನಿಂದಾಗುವಂತಹ ಯಾವುದೇ ಸಹಕಾರ ವಿದ್ದರೂ ತಕ್ಷಣವೇ ಸ್ಪಂದಿಸುವಂತವರು. ಇವರ ಜೊತೆಗೆ ಬೆಂಬಲವಾಗಿ ನಿಂತಿರುವ ಶ್ರೀಮತಿ ಶ್ವೇತ ಸಂದೀಪ್ ಕೋಟ್ಯಾನ್ ಹಾಗೂ ಇಬ್ಬರು ಮಕ್ಕಳ ಜೊತೆಗಿರುವ ಇವರು ತನ್ನ ಹಿರಿಯ ಮಗನನ್ನು ಬಾಲ್ಯದಿಂದಲೇ ತುಳುಮಾತೃ ಭೂಮಿಯ ಸಂಸ್ಕ್ರತಿಯ ಯನ್ನು ಅರಿಯಲು ಯಕ್ಷಗಾನ ಅಭ್ಯಾಸ‌ ಕೇಂದ್ರಕ್ಕೆ ಸೇರ್ಪಡಿಸಿ, ಯಕ್ಷಗಾನದ ಹಾಗೂ ತುಳು ಮತ್ತು ಕನ್ನಡ ಭಾಷೆಯ ಮಹತ್ವವನ್ನು ತಮ್ಮ ಮಕ್ಕಳಿಗೂ ತಿಳಿಸಿಕೊಡುವಂತಹ ತುಳುನಾಡಿನ‌ ಮಗ ಇವರು...

ಯಾವತ್ತೂ ಯಾವ ವೇದಿಕೆಗೂ ಆಸೆಯನ್ನು ಪಡದೆ, ಯಾವ ಆಮಂತ್ರಣ ಬ್ಯಾನರಿನಲ್ಲೂ‌ ಹೆಸರಿನ ಆಸೆಯನ್ನಿಡದೆ, ಯಾವ ಸಾಮಾಜಿಕ ಜಾಲತಾಣದಲ್ಲೂ ಪ್ರಚಾರದ ಹಂಬಲವನ್ನಿಡದೆ ಸೇವೆಯನ್ನು ನೀಡುತ್ತಿರುವ ಅದ್ಭುತ ಸೇವಕ ಸಂದೀಪ್ ಕೋಟ್ಯಾನ್ ಕಾರ್ಕಳ.

ಇವರಿಗೆ ಇನ್ನಷ್ಟು ಸೇವೆ ಮಾಡುವ ಶಕ್ತಿ ಆ ದೇವರು ಅನುಗ್ರಹಿಸಲಿ ಎಂದು ಈ ಮೂಲಕ ದೇವರಲ್ಲಿ ಪ್ರಾರ್ಥಿಸುತ್ತೇವೆ🙏🏻

ಅಧ್ಯಕ್ಷರು ಹಾಗೂ ಸರ್ವಸದಸ್ಯರು      

ಯೂತ್ ಬಿಲ್ಲವ (ರಿ) ಕಾರ್ಕಳ

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್