Billava Warriors – Billava News Portal
Wednesday, 28 October 2026
General News

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.

19 Dec 2025
🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.

 ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ ಒಮ್ಮತ ಮತ್ತು ಸಹಕಾರದ ಜೀವನವನ್ನು ನಾವು ಅನುಸರಿಸಿಕೊಂಡು ಬಂದಿದ್ದೇವೆ. ಕಾಲಕ್ರಮೇಣ ಪರ ಊರುಗಳು, ಪರ ದೇಶಗಳತ್ತ ತೆರಳಿ, ಅಲ್ಲಿ ಕೂಡಾ ಯಶಸ್ವಿ ಬದುಕನ್ನು ಕಟ್ಟಿಕೊಂಡಿದ್ದೇವೆ.

 

ಈ ಪುಟ್ಟ ದೇಶವಾದ ಓಮಾನ್‌ನಲ್ಲಿಯೂ ನಮ್ಮ ಕೂಟಗಳ ಮುಖೇನ ಒಂದಾಗಿ, ದೈವ,ದೇವಾಲಯ ನಿರ್ಮಾಣದಿಂದ ಹಿಡಿದು ಅನೇಕ ಸಾಮಾಜಿಕ ಹಾಗೂ ಮಾನವೀಯ ಕೊಡುಗೆಗಳ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇವೆ. ದುಡಿದು ಉಳಿಸಿದ ಹಣದಿಂದ ಸಾಧ್ಯವಾದಷ್ಟು ನಮ್ಮವರಿಗೂ, ಅಗತ್ಯವಿರುವ ಬಂಧು-ಮಿತ್ರರಿಗೂ ಆಸರೆಯಾಗುತ್ತಿದ್ದೇವೆ. ಅದರ ಜೊತೆಗೆ, ನಮ್ಮ ಕರ್ಮಭೂಮಿಗೂ ಏನಾದರೂ ನಮ್ಮಿಂದ ಕೊಡುಗೆ ಇರಬೇಕು ಎಂಬ ನಿಟ್ಟಿನಲ್ಲಿ ಕೈಗೊಂಡ ಅತ್ಯಂತ ಮಹತ್ವದ ಸೇವೆಯೇ ರಕ್ತದಾನ ಶಿಬಿರ

 

ಒಂದು ಸಮಯದಲ್ಲಿ ಓಮಾನ್ ನಲ್ಲಿ ರಕ್ತದಾನ ಶಿಬಿರಗಳು ಹೆಚ್ಚಾಗಿ ಭಾರತೀಯ ಸಾಮಾಜಿಕ ಸಂಸ್ಥೆಗಳ ಮೂಲಕ ಅಥವಾ ಕೆಲವು ಕಂಪನಿಗಳ ಸಹಕಾರದಿಂದ ನಡೆಯುತ್ತಿದ್ದವು. ಆ ದಿನಗಳಲ್ಲಿ ಕರ್ನಾಟಕದ ಕಡೆಯಿಂದ, ವಿಶೇಷವಾಗಿ ಸಮುದಾಯಿಕವಾಗಿ ಇಂತಹ ಶಿಬಿರಗಳು ಹೆಚ್ಚಾಗಿ ನಡೆಯುತ್ತಿರಲಿಲ್ಲ. ಆದರೆ 2017ರಲ್ಲಿ ನಮ್ಮ ಬಿಲ್ಲವ ಬಂಧುಗಳು ಒಂದಾಗಿ ಮೊದಲ ಬಾರಿಗೆ ರಕ್ತದಾನ ಶಿಬಿರವನ್ನು ಆಯೋಜಿಸಿ, ಸುಮಾರು 65 ಜನರು ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯಕ್ಕೆ ಭದ್ರವಾದ ಚಾಲನೆ ನೀಡಿದರು.

 

ಅದರ ನಂತರದ ದಿನಗಳಲ್ಲಿ ನಮ್ಮ ಶಿಬಿರಗಳು ಸಾವಿರ ಯುನಿಟ್‌ಗಿಂತಲೂ ಹೆಚ್ಚು ರಕ್ತವನ್ನು ದಾನವಾಗಿ ಓಮನ್ ಬ್ಲಡ್ ಬ್ಯಾಂಕ್ ಗೆ ನೀಡಿರುವುದು ಗಮನಾರ್ಹ ಸಾಧನೆ. ರಕ್ತ ಶೇಖರಣೆ ಕಡಿಮೆಯಾದಾಗ ಅಥವಾ ವಿಶೇಷವಾಗಿ O ಪಾಸಿಟಿವ್ ರಕ್ತದ ಅಗತ್ಯವಿದ್ದ ಸಂದರ್ಭಗಳಲ್ಲಿ, ರಕ್ತ ಬ್ಯಾಂಕ್‌ಗಳಿಂದ ನಮ್ಮನ್ನು ನೇರವಾಗಿ ಸಂಪರ್ಕಿಸುವ ಮಟ್ಟಿಗೆ ನಮ್ಮ ಸೇವೆ ವಿಶ್ವಾಸಾರ್ಹವಾಗಿ ಬೆಳೆದಿದೆ.

 

ನಮ್ಮ ಶಿಬಿರಗಳ ಯಶಸ್ಸನ್ನು ಕಂಡು, ಇತರ ಜಾತಿ ಸಮುದಾಯದ ವರು ಹಾಗೂ ಅನ್ಯ ಧರ್ಮದವರೂ ಕೂಡಾ ನಮ್ಮ ಮಾದರಿಯನ್ನು ಅನುಸರಿಸಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾದರು. ಈ ಮೂಲಕ ನಮ್ಮ ಬಿಲ್ಲವ ಬಂಧುಗಳ ಸೇವೆ ಮಸ್ಕತ್‌ನಲ್ಲಷ್ಟೇ ಅಲ್ಲದೆ ಇತರ ಗಲ್ಫ್ ದೇಶಗಳಲ್ಲಿಯೂ ಪ್ರಶಂಸೆಗೆ ಪಾತ್ರವಾಯಿತು.

 

ರಕ್ತದಾನ ಶಿಬಿರವು ಕೇವಲ ದಾನದ ಕಾರ್ಯಕ್ರಮವಾಗಿರಲಿಲ್ಲ; ಅದು ನಮ್ಮತನದ, ಸೇರಿಕೆಯ ಮತ್ತು ಸಹೋದರತ್ವದ ಸಂಕೇತವಾಗಿತ್ತು. ನೂಲ ಹುಣ್ಣುಮೆಯ ತಿಂಗಳಲ್ಲಿ ನಡೆದ ಶಿಬಿರದಲ್ಲಿ ರಾಕಿ ಕಟ್ಟುವ ಕಾರ್ಯವನ್ನು ಮಾಡಲಾಗಿತ್ತು. ರಕ್ತ ದಾನಿಗಳಗಿ ನಮ್ಮ ಬಿಲ್ಲವ ಮಹಿಳಾ ಬಳಗವು ಪುರುಷರಷ್ಟೆ ಉತ್ಸಾಹ ತೋರಿದರು. ಕೋವಿಡ್‌ ನಂತರದ ಸಮಯದಲ್ಲಿಯೂ ಶಿಬಿರ ಅಯೂಜನೆ ನಡೆದವು ಮಾನವೀಯ ಸಂಬಂಧಗಳ ಮೌಲ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದೇವೆ ಎನ್ನುವ ಸಾರ್ಥಕ ಭಾವನೆ ನಮ್ಮಲ್ಲಿ ಎಂದಿಗೂ.....

ತಾವೂ ಬನ್ನಿ ತಮ್ಮವರ ಕರೆ ತನ್ನಿ ಜೀವ ಉಳಿಸುವ ಕಾರ್ಯಕ್ಕೆ ಜೈ ಎನ್ನಿ.

 

🙏🙏🙏

ಮಾನ್ಯದಲಿ

ಶಿವಾನಂದ ಕೋಟ್ಯಾನ್.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್