Billava Warriors – Billava News Portal
Wednesday, 28 October 2026
General News

'ಸ್ಪೇಷಲ್ ಮೆನ್ಷನ್ ಸರ್ಟಿಪಿಕೇಟ್' ಗೆ ''ಆತ್ಮವಂದನಾ ದೇಶಕ್ಕಾಗಿ'' ಆಯ್ಕೆ

27 Nov 2023
'ಸ್ಪೇಷಲ್ ಮೆನ್ಷನ್ ಸರ್ಟಿಪಿಕೇಟ್' ಗೆ ''ಆತ್ಮವಂದನಾ ದೇಶಕ್ಕಾಗಿ'' ಆಯ್ಕೆ

ದೇಶಮಟ್ಟದಲ್ಲಿ ಸುದ್ದಿಯಾದ ಯುವವಾಹಿನಿ ಮಾಣಿ ಘಟಕದ ಮಂಗಳೂರಿನ ತಂಡ. ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ ಹಾಗೂ NFDC ಆಯೋಜಿಸಿದ ಕಿರುಚಿತ್ರ ಸ್ಪರ್ಧೆಯಲ್ಲಿ ತೀರ್ಪುಗಾರರು ನೀಡುವ 'ಸ್ಪೇಷಲ್ ಮೆನ್ಷನ್ ಸರ್ಟಿಪಿಕೇಟ್' ಗೆ ಆತ್ಮವಂದನಾ ದೇಶಕ್ಕಾಗಿ (Athma Vandan for Nation) ಆಯ್ಕೆ.ದೇಶಾದ್ಯಂತ 30 ರಾಜ್ಯಗಳಿಂದ ಹಲವು ತಂಡಗಳು ಈ ಸ್ಪರ್ಧೆಯಲ್ಲಿ ನೋಂದಾಯಿಸಿದ್ದು ನಮ್ಮ ಜಿಲ್ಲೆಯಿಂದ ಅಂತಿಮ ಹಂತಕ್ಕೆ ಆಯ್ಕೆಯಾದ ಏಕೈಕ ತಂಡ ಆತ್ಮವಂದನಾ ದೇಶಕ್ಕಾಗಿ.

ದೇಶಪ್ರೇಮ ಇದು ಪ್ರತಿಯೊಬ್ಬ ಭಾರತೀಯನ ಎದೆಯ ಬಡಿತದಲ್ಲೂ ಇದೆ.ಅತೀ ಚಿಕ್ಕ ವಯಸ್ಸಿನಲ್ಲೇ ನೇಣಿಗೆ ಕೊರಳೊಡ್ಡಿದ ಭಗತ್ ಸಿಂಗ್ ರವರ ದೇಶಪ್ರೇಮ ಅಪಾರವಾದದ್ದು.ತನ್ನ ಪ್ರಾಣವನ್ನೆ ದೇಶಕ್ಕಾಗಿ ಮುಡಿಪಾಗಿಟ್ಟ ಯೋಧರ ದೇಶಪ್ರೇಮ.ಹಗಲು-ರಾತ್ರಿ ಎನ್ನದೆ,ಬೆವರು ಸುರಿಸಿ ದುಡಿದು ದೇಶಕ್ಕೆ ಅನ್ನವನ್ನು ನೀಡುವ ರೈತನ ದೇಶಪ್ರೇಮಗಡಿಯಲ್ಲಿ ವೀರ ಯೋಧ ನಾಡಿನಲ್ಲಿ ಖಾಕಿ ಯೋಧ ಎನ್ನುವ ಹಾಗೆ ಪೋಲಿಸ್ ರ ದೇಶಪ್ರೇಮ ಹೀಗೆಯೇ ಪ್ರತಿಯೊಬ್ಬ ಭಾರತೀಯನಲ್ಲೂ ದೇಶಪ್ರೇಮವು ಅಚಲವಾಗಿದೆ. ಓಟ್ಟೊಟ್ಟಿಗೆ ದೇಶವು ಇನ್ನಷ್ಟು ಬಲಿಷ್ಠವಾಗಬೇಕಿದೆ. ಹೀಗೆ ದೇಶವು ಬಲಿಷ್ಠ ಆಗಬೇಕಾದರೆ ನಾವು ಸ್ವತಂತ್ರರಾಗಬೇಕು,ಸ್ವವಲಂಭಿಯಾಗಬೇಕು. ನಾವು ಸ್ವತಃ ಸ್ವವಲಂಬಿಯಾದರೆ ದೇಶವನ್ನು ಬಲಿಷ್ಠಗೊಳಿಸಬಹುದು ಮತ್ತು ಆಗ ಮಾತ್ರ ಆತ್ಮರ್ನಿಭರತೆಯ ಕನಸು ನನಸಾಗಲು ಸಾಧ್ಯ.

ಇದೆ ಪರಿಕಲ್ಪನೆಯನ್ನು ಇಟ್ಟುಕೊಂಡು ಯುವವಾಹಿನಿ ಮಾಣಿ ಘಟಕದ ನಿರ್ಮಾಣದಲ್ಲಿ ತಯಾರಾದ ಕಿರುಚಿತ್ರ "ಆತ್ಮವಂದನಾ ದೇಶಕ್ಕಾಗಿ".

ರಾಜೇಶ್ ಎಸ್ ಬಲ್ಯ ರವರ ಕಥೆ-ಚಿತ್ರಕಥೆ-ನಿರ್ದೇಶನದ ಈ ಕಿರುಚಿತ್ರಕ್ಕೆ ಶಿವರಾಜ್ ಪಿ.ಆರ್ ರವರು ಕೂಡ ಚಿತ್ರ ಕಥೆ ಜೊಡಿಸಿದ್ದಾರೆ.ಕಿರುಚಿತ್ರಕ್ಕೆ ಸಂಭಾಷಣೆಯನ್ನು ಪ್ರಶಾಂತ್ ಅನಂತಾಡಿ ಬರೆದಿದ್ದಾರೆ. ಪ್ರವೀಣ್ ಸಾಲ್ಯಾನ್ ಮತ್ತು ವಿಕ್ರಮ್ ಬಿಳಿಯೂರು ಅವರು ಇಡೀ ಕಿರುಚಿತ್ರದ ಕಣ್ಣುಗಳಂತೆ ಶೂಟಿಂಗ್ ಮಾಡಿದ್ದಾರೆ. ಸಂಕಲನವನ್ನು ದೀಕ್ಷಿತ್ ಮತ್ತು ಪೋಸ್ಟರ್ ಡಿಸೈನ್ ನ್ನು ಚರಣ್ ಅನಂತಾಡಿ ಮಾಡಿದ್ದು,ಮಿತುನ್ ರಾಜ್ ವಿದ್ಯಾಪುರ ಮತ್ತು ರಾಹುಲ್ ದೇವಾಡಿಗ ಕಿರುಚಿತ್ರಕ್ಕೆ ಅಧ್ಬುತ ಸಂಗೀತ ಸಂಯೋಜಿಸಿದ್ದಾರೆ. ಮತ್ತು ಈ ಕಿರುಚಿತ್ರಕ್ಕೆ ರಮೇಶ್ ಪೂಜಾರಿ ಮುಜಲ,ಹರೀಶ್ ಪೂಜಾರಿ ಬಾಕಿಲ ಮತ್ತು ಶಿವರಾಜ್ ಪಿ.ಆರ್ ರವರು ನಿರ್ಮಾಪಕರಾಗಿದ್ದಾರೆ.

ದೇಶಪ್ರೇಮ ಮತ್ತು ಆತ್ಮನಿರ್ಭರತೆಯ ಕುರಿತಾದ ಈ ಕಿರುಚಿತ್ರವು ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ(Information and Broadcasting) ಇಲಾಖೆ NFDC ಜೊತೆಗೂಡಿ 2020ರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇಶವ್ಯಾಪ್ತಿಯಲ್ಲಿ ಆಯೋಜಿಸಿದ ದೇಶಪ್ರೇಮ ಹಾಗೂ ಆತ್ಮನಿರ್ಭರತೆಯ ಕುರಿತಾದ 3 ನಿಮಿಷಗಳ online ಕಿರುಚಿತ್ರ ಸ್ಪರ್ಧೆಯಲ್ಲಿ ಹೆಸರು ನೋಂದಾಯಿಸಿದ ಈ ಕಿರುಚಿತ್ರ ಆಯ್ಕೆಗಾರರ ಆಯ್ಕೆಯ ಅಂತಿಮ 11 ಕಿರುಚಿತ್ರಗಳ ಪಟ್ಟಿಗೆ ಆಯ್ಕೆಯಾಗಿ ತೀರ್ಪುಗಾರರು ನೀಡುವ "Special Mention Certificate" ಗೆ ಪುರಸ್ಕೃತವಾಗಿರುತ್ತದೆ.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್