Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಸೈಬರ್ ಅಟ್ಯಾಕ್‌ಗಳನ್ನು ಕಡಿಮೆ ಮಾಡಲು ಆಪಲ್ ತರುತ್ತಿದೆ ಹೊಸ ಲಾಕ್‌ಡೌನ್ ಮೋಡ್

27 Nov 2023
ಸೈಬರ್ ಅಟ್ಯಾಕ್‌ಗಳನ್ನು ಕಡಿಮೆ ಮಾಡಲು ಆಪಲ್ ತರುತ್ತಿದೆ ಹೊಸ ಲಾಕ್‌ಡೌನ್ ಮೋಡ್
Advertiser
Advertisement · 728×90 px

ವಾಷಿಂಗ್ಟನ್: ಆಪಲ್ ಕಂಪನಿ ತನ್ನ ಐಫೋನ್, ಐ ಪ್ಯಾಡ್, ಹಾಗೂ ಮ್ಯಾಕ್ ಸಾಧನಗಳಿಗಾಗಿ ಹೊಸ ಭದ್ರತಾ ಫೀಚರ್‌ಅನ್ನುಹೊರತರುತ್ತಿದೆ. ಇದು ಮುಖ್ಯವಾಗಿ ಉನ್ನತ ಪ್ರೊಫೈಲ್ ಬಳಕೆದಾರರ ಮೇಲಿನ ಉದ್ದೇಶಿತ ಸೈಬರ್ ಅಟ್ಯಾಕ್‌ಗಳನ್ನು ತಡೆಯಲುವಿನ್ಯಾಸಗೊಳಿಸಲಾಗಿದೆ.

ಲಾಕ್‌ಡೌನ್ ಮೋಡ್ ಹೆಸರಿನ ಹೊಸ ಐಚ್ಛಿಕ(ಆಪ್ಶನಲ್) ಫೀಚರ್, ಕೆಲವು ಉನ್ನತ ವ್ಯಕ್ತಿಗಳು ತಮ್ಮ ಆಪಲ್ ಡಿವೈಸ್‌ಗಳಲ್ಲಿಬಳಸಬಹುದಾಗಿದ್ದು, ಇದು ಸೈಬರ್ ಅಟ್ಯಾಕ್‌ಗಳಿಂದ ರಕ್ಷಣೆ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಇದು ಬಳಕೆದಾರರಸಾಧನಗಳನ್ನು ಹ್ಯಾಕ್ ಮಾಡುವುದನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಿದೆ.

ಕಳೆದ ಹಲವು ವರ್ಷಗಳಿಂದ ಉನ್ನತ ವ್ಯಕ್ತಿಗಳ ಡಿವೈಸ್‌ಗಳನ್ನು ಹ್ಯಾಕ್ ಮಾಡಿರುವಂತಹ ಹಲವು ಪ್ರಕರಣಗಳು ವರದಿಯಾಗಿವೆ. ಮುಖ್ಯವಾಗಿ ಕಂಪನಿ ಸ್ಪೈವೇರ್ ನಂತಹ ದಾಳಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ಫೀಚರ್ ಅನ್ನು ಹೊರತಂದಿದೆಎಂದು ತಿಳಿಸಿದೆ.

ಪ್ರಪಂಚದಾದ್ಯಂತ ಸುಮಾರು 150 ದೇಶಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳನ್ನು ಗುರಿಪಡಿಸಿಕೊಂಡು ಸೈಬರ್ ದಾಳಿಗಳುನಡೆಯುತ್ತವೆ. ಇದಕ್ಕಾಗಿ ಲಾಕ್‌ಡೌನ್ ಮೋಡ್ ಫೀಚರ್ ಅನ್ನು ತರಲಾಗಿದ್ದು, ಇದನ್ನು ಬಳಕೆದಾರರಿಗೆ ತಿಳಿಸುವ ವ್ಯವಸ್ಥೆಯನ್ನುಮಾಡಲಾಗುತ್ತಿದೆ ಎಂದು ಹೇಳಿದೆ.

ವಿಡಿಯೋ ಸಿಸಿ ಟಿ

ವರದಿಗಳ ಪ್ರಕಾರ ಲಾಕ್‌ಡೌನ್ ಮೋಡ್, ಆಪಲ್ ಡಿವೈಸ್‌ಗಳಲ್ಲಿ ಮೆಸೇಜಿಂಗ್ ಆಪ್‌ಗಳ ಅಟ್ಯಾಚ್‌ಮೆಂಟ್‌ಗಳನ್ನು ಬ್ಲಾಕ್ಮಾಡುತ್ತದೆ. ಇವು ಹ್ಯಾಕರ್‌ಗಳಿಗೆ ಡಿವೈಸ್‌ಗಳನ್ನು ಹ್ಯಾಕ್‌ಮಾಡಲು ಲಭ್ಯವಿರುವ ಸುಲಭದ ಹಾಗೂ ಮುಖ್ಯವಾದ ವಿಧಾನವಾಗಿದೆ.

ಆಪಲ್ ಮುಂಬರುವ ಐಒಎಸ್ 16, ಐಪ್ಯಾಡ್ ಐಎಸ್ 16 ಹಾಗೂ ಮ್ಯಾಕ್ ಒಎಸ್‌ಗಳಲ್ಲಿ ನವೀಕರಣದ ಭಾಗವಾಗಿ ಲಾಕ್‌ಡೌನ್ಮೋಡ್‌ಅನ್ನು ಬಿಡುಗಡೆ ಮಾಡಲು ಯೋಜಿಸಿದೆ. ಈ ಫೀಚರ್ ಸದ್ಯ ಬೀಟಾ ಆವೃತ್ತಿಯಲ್ಲಿ ಪರೀಕ್ಷೆ ನಡೆಯುತ್ತಿದೆ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್