Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಸಂಭ್ರಮ ಪುರಸ್ಕಾರ” (ಪತ್ರಿಕೋದ್ಯಮ)ಕ್ಕೆ ಪತ್ರಕರ್ತ ವಿಷ್ಣುಗುಪ್ತ ಪುಣಚ (ರಮೇಶ್.ಕೆ ಪುಣಚ) ಆಯ್ಕೆ

27 Nov 2023
ಸಂಭ್ರಮ ಪುರಸ್ಕಾರ” (ಪತ್ರಿಕೋದ್ಯಮ)ಕ್ಕೆ ಪತ್ರಕರ್ತ ವಿಷ್ಣುಗುಪ್ತ ಪುಣಚ (ರಮೇಶ್.ಕೆ ಪುಣಚ) ಆಯ್ಕೆ
Advertiser
Advertisement · 728×90 px

ಬಂಟ್ವಾಳ: ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಇನ್ನಿತರ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜಸೇವೆಗೈಯುತ್ತಿರುವ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್  ತನ್ನ  38ನೇ ಸಂಭ್ರಮಾಚರಣೆಯ ಸಂದರ್ಭದಲ್ಲಿ ನೀಡುವ ಸಂಭ್ರಮಪುರಸ್ಕಾರ (ಪತ್ರಿಕೋದ್ಯಮ)ಕ್ಕೆ ಪತ್ರಕರ್ತ ವಿಷ್ಣುಗುಪ್ತ ಪುಣಚ (ರಮೇಶ್.ಕೆ ಪುಣಚ) ಆಯ್ಕೆಯಾಗಿದ್ದಾರೆ.

ವರ್ಷಂಪ್ರತಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ

ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ನೀಡುತ್ತಿದೆ.

ಸಾಹಿತ್ಯ, ಬರವಣಿಗೆ ಕ್ಷೇತ್ರದಲ್ಲಿ 'ವಿಷ್ಣುಗುಪ್ತ ಪುಣಚ' ಎಂಬ ಕಾವ್ಯನಾಮದಿಂದ ನಾಡಿನಾದ್ಯಂತ ಚಿರಪರಿಚಿತರಾಗಿರುವ ರಮೇಶ್ಕೋಡಂದೂರು ಅವರು ಬಂಟ್ವಾಳ ತಾಲೂಕಿನ ಪುಣಚ ಗ್ರಾಮದವರು.

ಪತ್ರಿಕಾ ಕ್ಷೇತ್ರದಲ್ಲಿ ಪತ್ರಕರ್ತರಾಗಿ ಸುಮಾರು ಇಪ್ಪತ್ತು ವರ್ಷಗಳಿಂದ ದುಡಿಯುತ್ತಿದ್ದಾರೆ. ಸುದ್ದಿ ಬಿಡುಗಡೆ, ಮೈಸೂರು ಆಂದೋಲನ, ಉಷಾ ಕಿರಣ, ಪ್ರಜಾವಾಣಿ, ವಿಜಯಕರ್ನಾಟಕ, ನಮ್ಮ ಬಂಟ್ವಾಳ ಇತ್ಯಾದಿ ಪತ್ರಿಕೆಗಳಲ್ಲಿ ದುಡಿದಿದ್ದಾರೆ. ಇದಲ್ಲದೇ ರಂಗಭೂಮಿ, ಬೀದಿನಾಟಕ, ಹಲವಾರು ತುಳು ಸಾಮಾಜಿಕ ನಾಟಕಗಳಲ್ಲಿ ನಟಿಸಿದ್ದಾರೆ. ಕನ್ನಡ, ತುಳು ಭಾಷೆಗಳ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿ, ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ರಾಜ್ಯ ಮಟ್ಟದ ಲೇಖನ, ಕಥೆ, ಕವನ, ಚುಟುಕುಇನ್ನಿತರ ಸಾಹಿತ್ಯ  ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಬಹುಮಾನಗಳನ್ನು ಪಡೆದಿದ್ದಾರೆ.

ಪುಣಚ ಮಂಗಳ ಕಲಾ ಸಾಹಿತ್ಯ ವೇದಿಕೆಯ ಮೂಲಕ ಹತ್ತಾರು ರಾಜ್ಯ ಮಟ್ಟದ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನುಸಂಘಟಿಸಿದ್ದಾರೆ.

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಬಂಟ್ವಾಳ ಪ್ರೆಸ್ ಕ್ಲಬ್ ಉಪಾಧ್ಯಕ್ಷರಾಗಿ ಸಂಘವನ್ನುಮುನ್ನಡೆಸಿದ್ದಾರೆ.

ಬಂಗ್ಲೆ ಮೈದಾನದಲ್ಲಿ ಎ.24ರಂದು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್  ತನ್ನ  38ನೇ ವಾರ್ಷಿಕ ಸಂಭ್ರಮ ಆಚರಣೆಯಲ್ಲಿ ಪುರಸ್ಕಾರ ಪ್ರದಾನನಡೆಯಲಿದೆ. ಇದೇ ಸಂದರ್ಭದಲ್ಲಿ 14ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭವೂ ನಡೆಯಲಿದೆ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್