Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಶ್ರೀ ವರಲಕ್ಷ್ಮಿ ಚಾರಿಟಬಲ್ ಟ್ರಸ್ಟ್ - ಉಪ್ಪುಂದ ವತಿಯಿಂದ ನಿರ್ಮಿಸಿದ 5ನೇ ಮನೆ ಹಸ್ತಾಂತರ

27 Nov 2023
ಶ್ರೀ ವರಲಕ್ಷ್ಮಿ ಚಾರಿಟಬಲ್ ಟ್ರಸ್ಟ್ - ಉಪ್ಪುಂದ ವತಿಯಿಂದ ನಿರ್ಮಿಸಿದ 5ನೇ ಮನೆ ಹಸ್ತಾಂತರ
Advertiser
Advertisement · 728×90 px

ಕುಂದಾಪುರ :-8 ಅಕ್ಟೋಬರ್, ಕಾಳಾವರದಲ್ಲಿ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್( ರಿ ) ಉಪ್ಪುಂದ ಇದರ ವ್ಯವಸ್ಥಾಪಕ ನಿರ್ದೇಶಕರಾದ ಡಾಕ್ಟರ್, ಶ್ರೀ ಗೋವಿಂದ ಬಾಬು ಪೂಜಾರಿ ಅವರು ಪೂರ್ಣ ಜವಾಬ್ದಾರಿಯನ್ನು ಹೊತ್ತು ನಿರ್ಮಿಸಿಕೊಟ್ಟ 5ನೇ ಮನೆ ಗೃಹಪ್ರವೇಶ ಇಂದು ಸಂತಸದಿಂದ ನಡೆಯಿತು.

ರಿಕ್ಷಾ ಡ್ರೈವರ್ ಒಬ್ಬರ "ಕನಸು" ನನಸು ಮಾಡಿದ ಆಶ್ರಯದಾತ ಶ್ರೀ ಗೋವಿಂದ ಬಾಬು ಪೂಜಾರಿ, ಕಾಳಾವರರದ ನರಿಕೋಡ್ಲು ಮನೆ ಸತೀಶ್ ಪೂಜಾರಿ ಯವರು ನೂತನ ಮನೆ ನಿರ್ಮಾಣ ಮಾಡಬೇಕು ಎಂಬ ಕನಸು ಕಂಡು ಮನೆ ನಿರ್ಮಾಣಕ್ಕೆ ಕೈ ಹಾಕಿದ್ದರು.

ಆದರೆ ವಿಧಿ ಆಟವೇ ಬೇರೆಯಾಗಿತ್ತು ಮನೆ ಪೂರ್ಣವಾಗುವ ಮೊದಲೇ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಇದರಿಂದ ಮನೆಯವರು ಮನೆ ನಿರ್ಮಾಣ ಮಾಡಲು ಸಾಧ್ಯವಾಗದೇ ತೀವ್ರ ಕಷ್ಟದಲ್ಲಿ ಇರುವುದು ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಗೋವಿಂದ ಬಾಬು ಪೂಜಾರಿ ಅವರ ಗಮನಕ್ಕೆ ಬಂದು ಮನೆಯನ್ನು ಪೂರ್ಣಗೊಳಿಸಿ ಕೊಡುವ ಭರವಸೆ ನೀಡಿದರು.

ಇದೀಗ ಸುಸಜ್ಜಿತ ನಿರ್ಮಾಣಗೊಂಡಿದ್ದು ಈ ಮನೆ ವರಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿ ಕೊಡುತ್ತಿರುವ 5ನೇ ಮನೆ ಇದಾಗಿರುತ್ತದೆ.

ಶುಭಗಳಿಗೆಯಲ್ಲಿ "ಶ್ರೀ ವರಲಕ್ಷ್ಮಿ ನಿಲಯದ "ಗ್ರಹಪ್ರವೇಶವು ಕಾಳಾವರ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಶಾಸಕರು ಕುಂದಾಪುರ, ಗೋವಿಂದ ಬಾಬು ಪೂಜಾರಿ, ಅಶೋಕ್ ಪೂಜಾರಿ ಬಿಲ್ಲಾಡಿ, ಬಿಲ್ಲವ ಸೇವಾ ಸಂಘದ ಅಧ್ಯಕ್ಷರು ಆಶಾಲತಾ ಶೆಟ್ಟಿ ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷರು. ಬಿಲ್ಲವ ಸಂಘದ ಹಿರಿಯ ಮುಖಂಡರು,ಪಂಚಾಯತ್ ಸದಸ್ಯರು ಮತ್ತು ಶ್ರೀ ಗೋವಿಂದ ಬಾಬು ಪೂಜಾರಿ ಅಭಿಮಾನಿ ಬಳಗ ಶ್ರೀಯುತರ ಮಾತಾಪಿತರು ಮತ್ತು ಸಂಸಾರದ ಸರ್ವಸದಸ್ಯರು ಊರ ಜನತೆಯ ಉಪಸ್ಥಿತಿಯೊಂದಿಗೆ ಬಹಳ ಮಹತ್ವಪೂರ್ಣವಾಗಿ ಕಾರ್ಯಕ್ರಮ ನಡೆಯಿತು.

✍️ಈಶ್ವರ್ ಸಿ ನಾವುಂದ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್