Billava Warriors – Billava News Portal
Wednesday, 28 October 2026
General News

ಶ್ರೀ ರಾಮ ಕ್ಷೇತ್ರ - ಕನ್ಯಾಡಿ, ಉಜಿರೆಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಭೇಟಿ

27 Nov 2023
ಶ್ರೀ ರಾಮ ಕ್ಷೇತ್ರ - ಕನ್ಯಾಡಿ, ಉಜಿರೆಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಭೇಟಿ

ಉಜಿರೆ: "ದಕ್ಷಿಣ ಭಾರತದ ಅಯೋಧ್ಯೆ" ಈ ಪ್ರಸಿದ್ಧಿಯಿರುವ ಪರಮಪೂಜ್ಯ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಸಂಸ್ಥಾಪಿಸಲ್ಪಟ್ಟ ಶ್ರೀ ರಾಮ ಕ್ಷೇತ್ರ ,ಕನ್ಯಾಡಿ,ಉಜಿರೆ ಯಲ್ಲಿರುವ ಸನ್ನಿಧಾನಕ್ಕೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಯ ಸಕ್ರೀಯ ಅಧ್ಯಕ್ಷರೂ ಸಮಾಜಮುಖಿ ಯುವನೇತಾರರಾದ ಸನ್ಮಾನ್ಯ ಪ್ರವೀಣ್ ಪೂಜಾರಿಯವರ ಮುಂದಾಳತ್ವದಲ್ಲಿ, ಸದಸ್ಯಮಿತ್ರರು ಭೇಟಿ.ಚಾತುರ್ಮಾಸ ವೃತಾಚರಿಸುತ್ತಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು. ಇದೇ ಸಂದರ್ಭ ಸಂಸ್ಥೆಯ ಕಾರ್ಯಚಟುವಟಿಕೆಗಳ ವಿಸ್ತ್ರತ ಮಾಹಿತಿ ಪಡೆದು ಶುಭಾಶಂಸಿದ ಸ್ವಾಮೀಜಿಯವರು, ಸಮಾಜದ ಆಶಯಗಳು ಈಡೇರಬೇಕಾದರೆ ಸಂಘಟನೆ ಬಲಗೊಳ್ಳಬೇಕು. ಈ ನಿಟ್ಟಿನಲ್ಲಿ ವಿಶ್ವಾಸನೀಯ ಮತ್ತು ದಕ್ಷ ನಾಯಕತ್ವದ ಅಗತ್ಯತೆ ಬಹಳಷ್ಟಿದೆ. ನೀವೆಲ್ಲ ಯುವಕರು ಜವಾಬ್ದಾರಿಯುತವಾಗಿ ಮುನ್ನೆಡೆದು ಆದರ್ಶಯುತರಾಗುವಲ್ಲಿ ಭಗವಾನ್ ಶ್ರೀ ರಾಮಚಂದ್ರ ಮತ್ತು ವಿಶ್ವವಂದ್ಯ ನಾರಾಯಣ ಗುರುಗಳ ದಯೆಯನ್ನು ಪ್ರಾರ್ಥಿಸಿ ಅನುಗ್ರಹಿಸಿದರು.ಪಾರಮಾರ್ಥಿಕ ಬದುಕನ್ನು ಒಪ್ಪಿಕೊಂಡ ಸ್ವಾಮೀಜಿಗೆ ಸಮಸ್ತ ಲೋಕ ಕಲ್ಯಾಣದ ದಿವ್ಯ ಆಶಯವಿದೆ.ಸರ್ವಸಮನ್ವಯ ಸಮೃದ್ಧಿಯ ಗುಣನಡೆಯಿದೆ.ಇದಕ್ಕನುವಾಗಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದಿಂದ ಎಲ್ಲರ ಒಳಿತು ಸಾಕಾರವಾಗಲಿ. ಅಂತೆಯೆ ನಮ್ಮ ಸಮಾಜದ ಶಕ್ತಿ ಕೇಂದ್ರವಾದ ಈ ಸಾನಿಧ್ಯಕ್ಕೆ ಬಿಲ್ಲವ ಬಂಧುಗಳೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಿ ಶ್ರದ್ಧೆಯ ಮಹತ್ವ ನೀಡಬೇಕೆಂಬುದು ಬಿಲ್ಲವ ಯುವ ವೇದಿಕೆಯ ಸದಾಶಯವಾಗಿದೆ.

Email us: billavaswarriors@gmail.com

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್