Billava Warriors – Billava News Portal
Wednesday, 28 October 2026
General News

ರಾಷ್ಟ್ರಮಟ್ಟದಲ್ಲಿ ಮಿಂಚಿದ ಬಿಲ್ಲವ ಸಮಾಜದ ಯುವ ಪ್ರತಿಭೆ ಮೇಘ ಕೋಟ್ಯಾನ್

27 Nov 2023
ರಾಷ್ಟ್ರಮಟ್ಟದಲ್ಲಿ ಮಿಂಚಿದ ಬಿಲ್ಲವ ಸಮಾಜದ ಯುವ ಪ್ರತಿಭೆ ಮೇಘ ಕೋಟ್ಯಾನ್

ತನ್ನಲ್ಲಿರುವ ಪ್ರತಿಭೆಗೆ ದೊರೆತಿರುವ ಪ್ರೋತ್ಸಾಹ, ಅವಕಾಶಗಳನ್ನು ಬಳಸಿಕೊಂಡು ರಾಷ್ಟ್ರಮಟ್ಟದಲ್ಲಿ ಮಿಂಚಿದ ಬಿಲ್ಲವ ಸಮಾಜದಯುವ ಪ್ರತಿಭೆ ಮೇಘ ಕೋಟ್ಯಾನ್.

     (Copyrights owned by: billavawarriors.com )

 ಇವರು ಎಡಪದವಿನ ಗಣೇಶ್ ಪೂಜಾರಿ ಹಾಗು ಸುನೀತ ದಂಪತಿಗಳ ಮಗಳು. ತನ್ನ ಪ್ರೌಢ ಶಿಕ್ಷಣದ ಅವಧಿಯಲ್ಲಿ ಕ್ರೀಡಾಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯನ್ನು ವಹಿಸಿದ ಇವರು ಮುಂದೆ ತನ್ನನ್ನು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡರು. ಸ್ವಾಮಿವಿವೇಕಾನಂದ ಪದವಿ ಪೂರ್ವ ಕಾಲೇಜು ಎಡಪದವು ಇಲ್ಲಿ ಪಿಯುಸಿ ಶಿಕ್ಷಣ ಪೂರೈಸಿದರು. ತಮ್ಮ ಪಿಯುಸಿ

(Copyrights owned by: billavawarriors.com )

ವಿದ್ಯಾಭ್ಯಾಸದಸಂದರ್ಭದಲ್ಲಿ ರಾಷ್ಟ್ರ ಮಟ್ಟದಲ್ಲಿ ಫ್ಲೋರ್ ಬಾಲ್  ಆಟ ಆಡಿದ ಹೆಮ್ಮೆ ಇವರದ್ದಾಗಿದ್ದು, 2019ರಲ್ಲಿ ಚತ್ತಿಷ್ಗಡ್  ನಲ್ಲಿ ನಡೆದ ಫ್ಲೋರ್ಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ. ಹಾಗು 2020 ರಲ್ಲಿ ದೆಹಲಿಯಲ್ಲಿ ನಡೆದ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಪಡೆದ ಸಾಧನೆಇವರದ್ದಾಗಿದೆ.

     "ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು" ಆಗ ಯಶಸ್ಸು ಖಚಿತ ಎಂಬಂತೆ ಇವರ ಸಾಧನೆಗೆ ಬೆಂಬಲಿಸಿದವರು ದೈಹಿಕಶಿಕ್ಷಣ ಶಿಕ್ಷಕರಾದ ಪ್ರೇಮನಾಥ ಶೆಟ್ಟಿಯವರು. ಅಮ್ಮ ಹಾಗು ಸಹೋದರನ ಪ್ರೀತಿ, ಸಹಕಾರ ಅವರು ನೀಡುವ ಪ್ರೋತ್ಸಾಹವೇ ನನಗೆಸದಾ ಪ್ರೇರಣೆ ಎನ್ನುತ್ತಾರೆ ಮೇಘ ಕೋಟ್ಯಾನ್.

   ಪ್ರಸ್ತುತ ದವಳ ಕಾಲೇಜಿನಲ್ಲಿ  ಪ್ರಥಮ ವರ್ಷದ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಯೋಗ ಹಾಗು ಫಿಲ್ಮ್ ಆ್ಯಕ್ಟಿಂಗ್ ನಲ್ಲೂಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಭವಿಷ್ಯದಲ್ಲಿ ಸಮಾಜದ ಆಧಾರ ಸ್ತಂಭವಾಗಿರುವ ನ್ಯಾಯ ರಕ್ಷಣೆಯ ವಕೀಲರಾಗುವಕನಸನ್ನು ಹೊಂದಿರುವ ಇವರ ಭವಿಷ್ಯ ಉಜ್ವಲವಾಗಿರಲಿ. ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬುದು ನಮ್ಮೆಲ್ಲರ ಆಶಯ...

(Copyrights owned by: billavawarriors.com )

www.billavawarriors.com

✍ ಬರಹ: ನಳಿನಿ.ಎಸ್.ಸುವರ್ಣ. ಜಾರ್ಕಳ ಮುಂಡ್ಲಿ 

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್