Billava Warriors – Billava News Portal
Thursday, 29 October 2026
Advertiser
Advertisement · 728×90 px
General News

'ಮೈಕ್ರೋ ಆರ್ಟ್' ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್...!!!

27 Nov 2023
'ಮೈಕ್ರೋ ಆರ್ಟ್' ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್...!!!
Advertiser
Advertisement · 728×90 px

'ಮೈಕ್ರೋ ಆರ್ಟ್' ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್...!!!

ಒಬ್ಬ ವ್ಯಕ್ತಿ ಅನೇಕ ಸವಾಲುಗಳನ್ನ ಎದುರಿಸಿ ಮುನ್ನಡೆಯುತ್ತಿದ್ದಾನೆ ಎಂದಾದರೆ ಆತ ಸಾಧನೆಯ ಹಾದಿಯಲ್ಲಿ ಹೊರಟಿದ್ದಾನೆ ಎಂದರ್ಥ. ಅಂದಹಾಗೆ ಅಂತಹದೇ ಸಾಧನೆಯ ಹಾದಿಯಲ್ಲಿ ಶಿಖರವನ್ನೇರಿದ ಓರ್ವ ವ್ಯಕ್ತಿ ಇದೀಗ ಜನಪ್ರೀಯತೆಯನ್ನ ಪಡೆದಿದ್ದಾನೆ. ಹೌದು ನಾವು ಹೇಳ ಹೊರಟಿರುವುದು ಉಡುಪಿಯ ಕಾಡೂರು ಮೂಲದ ದಯಾನಂದ ಮತ್ತು ಸುನೀತಾ ದಂಪತಿಯ ಪುತ್ರ ಸಂಜಯ್ ಅವ್ರ ಬಗ್ಗೆ. ಸಂಜಯ್ ಓದಿರೋದು ಡಿಪ್ಲೋಮ ಇನ್ ಸಯನ್ಸ್. ಹುಟ್ಟಿನಿಂದಲೇ ಒಂದಲ್ಲ ಒಂದು ಕ್ಷೇತ್ರದಲ್ಲಿ ಏನಾದ್ರು ಒಂದು ಸಾಧನೆಯನ್ನ ಮಾಡಲೇಬೇಕು ಅನ್ನೋ ಛಲವನ್ನ ಹೊಂದಿದ್ದ ಸಂಜಯ್ ಗೆ 'ಮೈಕ್ರೋ ಆರ್ಟ್' ತನ್ನಲ್ಲಿನ ಕಲೆಯನ್ನ ಪ್ರದರ್ಶಿಸಿತು. ಜೊತೆಗೆ ಜೀವನದಲ್ಲಿ ಸಾಧನೆಯನ್ನ ಮಾಡುವ ಛಲವನ್ನ ತೋರಿಸಿಕೊಟ್ಟಿತು. ಯಸ್ ಮೈಕ್ರೋ ಆರ್ಟ್ ಅರ್ಥಾತ್ ಸೂಕ್ಷ್ಮ ಕಲಾ ಕ್ಷೇತ್ರ. ಇದೇನು ಅಷ್ಟು ಸುಲಭದ ಕಲೆಯಲ್ಲ. ಅದಕ್ಕೆ ಅದರದೇ ರೀತಿ ಸೂಕ್ಷ್ಮ ಮತ್ತು ಕಠಿಣ ಪರಿಶ್ರಮಬೇಕು. ಚೂರು ಎಡವಿದರೂ ಕಲಾಕೃತಿ ಹಾಗೂ ಮಾಡಿದ ಪರಿಶ್ರಮ ವ್ಯರ್ಥವಾಗಿಬಿಡುತ್ತೆ. ಅಷ್ಟು ಸೂಕ್ಷ್ಮ ಕಲೆ ಇದು.

ತಾತ ಕೊರಗಪ್ಪ ಮತ್ತು ಅಜ್ಜಿ ಸುಂದರಮ್ಮರ ಮೂಲಕ ಮೈಕ್ರೋ ಆರ್ಟ್ ಮಾಡಲು ಸ್ಫೂರ್ತಿ ಪಡೆದ ಇವರಿಗೆ ಆರಂಭದಲ್ಲಿ ಬೆಂಬಲಕ್ಕೆ ನಿಂತವರು ಕೇವಲ ಕುಟುಂಬದವರು ಅರ್ಥಾತ್ ಸಹೋದರರು ಮತ್ತು ಪಾಲಕರು ಹಾಗೂ ಕೆಲವು ಗೆಳೆಯರು ಮಾತ್ರ. ಹಾಗಾಗಿ ಸಂಜಯ್ ಇವತ್ತಿಗೂ ಅವರಿಗೆ ಅಭಾರಿಯಾಗಿ ನನ್ನ ಸಾಧನೆಯ ಪರಿಶ್ರಮಕ್ಕೆ ಹೆಜ್ಜೆ ಹಾಕಿದವರು ಎನ್ನುತ್ತಾರೆ.

ಅಂದಹಾಗೆ ಸಂಜಯ್ ಇದುವರೆಗೂ 2 ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್, 1 ವರ್ಲ್ಡ್ ಕಿಂಗ್ಸ್, ಮತ್ತು 2 ಗಿನ್ನಿಸ್ ದಾಖಲೆ ಮಾಡಿದ್ದಾರೆ. ಇವರ ಸಾಧನೆ ಗುರುತಿಸಿ ಇದುವರೆಗೂ ರಾಜ್ಯ ಮತ್ತು ತಾಲೂಕು ಮಟ್ಟದಲ್ಲಿ ತಲಾ ಎರಡು, ಜಿಲ್ಲಾ ಮಟ್ಟದಲ್ಲಿ 1 ಸನ್ಮಾನ (ಸಂಘಟನೆಗಳ ಮೂಲಕ ), ಸ್ಥಳೀಯ ಆಡಳಿತ (ಗ್ರಾಮ ಪಂಚಾಯತ್ )ವತಿಯಿಂದ 5 ಸನ್ಮಾನ ಸೇರಿದಂತೆ 35ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನ ಪಡೆದಿದ್ದಾರೆ. ಜೊತೆಗೆ ಮಂಗಳೂರಿಯನ್.ಕಾಮ್ ಮತ್ತು ಡೈಜಿವರ್ಲ್ಡ್ ಚಾನೆಲ್ ನ ವೆಬ್ಸೈಟ್ ನಲ್ಲಿ ಇವರ ಸಾಧನೆ ಕುರಿತು ಲೇಖನ ಪ್ರಕಟವಾಗಿತ್ತು.

ಇಷ್ಟೇ ಅಲ್ಲ ಇವರು ಇದುವರೆಗೂ 25 ಮಣ್ಣಿನ ಕಲಾಕೃತಿ, 15-20 ಸೋಪ್ ಆರ್ಟ್, 100ಕ್ಕೂ ಹೆಚ್ಚು ಚಾಕ್ ಆರ್ಟ್, 25-30 ಪೆನ್ಸಿಲ್ ಆರ್ಟ್, 30 ಪೆನ್ಸಿಲ್ ಗಣೇಶ ಮೂರ್ತಿ ಮಾಡಿದ್ದಾರೆ. ಇವರೊಬ್ಬ ಬಹುಮುಖ ಪ್ರತಿಭೆ. 'ಚಿನ್ಮಯ' ಹೆಸರಿನ ಒಂದು ಕವನ ಸಂಕಲನವನ್ನು ಕೂಡಾ ಬರೆದಿದ್ದು ಹಲವಾರು ಪೇಂಟಿಂಗ್ಸ್ ಕೂಡಾ ಮಾಡಿದ್ದಾರೆ.

ಇನ್ನೇನು ಸಂಜಯ್ 2 ಗಿನ್ನಿಸ್ ದಾಖಲೆ ಬರೆದಿದ್ದಾರೆ ಅಂದ ಮಾತ್ರಕ್ಕೆ ಇವರ ಆರಂಭಿಕ ಜೀವನ ಹೂವಿನ ಹಾಸಿಗೆಯಾಗಿತ್ತು ಅಂತ ಭಾವಿಸಿದ್ದರೆ ಅದು ಮೂರ್ಖತನ. ಯಾಕಂದ್ರೆ ಅವರ ಬದುಕಿನುದ್ದಕ್ಕೂ ಕಷ್ಟಗಳನ್ನೇ ಅನುಭವಿಸಿ ಮೇಲೆ ಬಂದವರು. ಹಾಗಾಗಿ ಇಂತಹ ಕಲಾವಿದರಿಗೆ ಇನ್ನಷ್ಟು ಬೆಂಬಲ ದೊರೆಯಲಿ ಮತ್ತು ಅದರಿಂದ ಇನ್ನಷ್ಟು ಸಾಧನೆ ಮಾಡಲು ಶಕ್ತಿ ಸ್ಫೂರ್ತಿ ದೊರೆಯಲಿ ಎನ್ನುವ ಆಶಯ ನಮ್ಮದು.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್