Billava Warriors – Billava News Portal
Wednesday, 28 October 2026
General News

ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಸಾದಿಸಬಹುದು ಅನ್ನುದಕ್ಕೆ ಉದಾಹರಣೆ '' ಆರ್ ಜೆ ರಶ್ಮಿ ಉಳ್ಳಾಲ್ ''

27 Nov 2023
ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಸಾದಿಸಬಹುದು ಅನ್ನುದಕ್ಕೆ ಉದಾಹರಣೆ '' ಆರ್ ಜೆ ರಶ್ಮಿ ಉಳ್ಳಾಲ್ ''

ತೆರೆ ಮರೆಯ ಹಿಂದೆ ಮನಸ್ಸಿಗೆ ಹಿತ ನೀಡುವ ಮಾತುಗಳು, ಮತ್ತೊಂದು ಕಡೆ ಪಟ ಪಟ ಮಾತನಾಡುವ ಕಲೆ, ಮಾತಿನಿಂದಲೇ ಜನರ ಮನಸ್ಸನ್ನು ಗೆದ್ದಿರುವ ತುಳುನಾಡಿನ ಪ್ರತಿಭೆ ಆರ್ ಜೆ ರಶ್ಮಿ ಉಳ್ಳಾಲ್. ಪರಿಸರ ಕಾಳಜಿ ಹಾಗು ಸಾಮಾಜಿಕ ಕಾರ್ಯಕರ್ತರಾಗಿ ಅವರದೇ ಆದ ಅಭಿಮಾನಿ ಬಳಗವೇ ಇದೆ.

ಮಂಗಳೂರಿನ ಉಳ್ಳಾಲದ ಯು ಎ ಪ್ರೇಮನಾಥ್ ಮತ್ತು ಶ್ರೀಮತಿ ಪ್ರಮೀಳಾ ದಂಪತಿಗಳ ಮುದ್ದಿನ ಮಗಳು.

ಬಾಲ್ಯದಿಂದಲೂ ರೇಡಿಯೋ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ . ವಿದ್ಯಾಭ್ಯಾಸ ಮಾಡುತ್ತಿರುವಾಗಲೆ ಸಾರಂಗ್ 107.8 ಎಫ್. ಎಮ್ ಆರ್.ಜೆ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಮಂಗಳೂರಿನ ಆಕಾಶವಾಣಿಯಲ್ಲಿ "ಯುವವಾಣಿ" ಶೀರ್ಷಿಕೆಯಡಿ ಜನರಿಗೆ ಸ್ಫೂರ್ತಿ ನೀಡಿದ ಇವರು ಅನೇಕ ರೇಡಿಯೋ ಕಾರ್ಯ ಕ್ರಮ ನಡೆಸಿಕೊಟ್ಟಿದ್ದಾರೆ.

ಪದವಿಯಲ್ಲಿ ಉತ್ತಮ ದರ್ಜೆಯ ಅಂಕ ಪಡೆದು ಎಮ್. ಎನ್. ಸಿ ಕಂಪನಿಯಲ್ಲಿ ಎಕ್ಸಿಕ್ಯೂಟರ್ ಮತ್ತು ಕೋಟಕ್ ಮಹೇಂದ್ರ ಬ್ಯಾಂಕ್ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ,ರೆಡ್ ಎಫ್. ಎಮ್ ಅಲ್ಲಿ ಆರ್.ಜೆ ಆಗಿ ಕಾರ್ಯನಿರ್ವಹಿಸಿದ್ದಾರೆ

ಮಕ್ಕಳ ಮೌಲ್ಯದ ಬಗ್ಗೆ ಅರಿವು ಮೂಡಿಸಲು ದಿವ್ಯಾಸ್ ಯುವ ಸೇವಾ ಆರ್ಗನೈಜೇಷನ್ ಎನ್ .ಜಿ .ಒ ದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಕಾರ್ಯಕ್ರಮ ನಡೆಸಿಕೊಟ್ಟು ಪ್ರಶಂಸೆ ಪಡೆದವರು .ಇವರು ಸಮಾಜ ಸೇವೆ ಮಾಡುವ ಸೇವಾ ಸೇನಾನಿಯೂ ಹೌದು. ವೃದ್ಧರ ಮತ್ತು ಅನಾಥ ಆಶ್ರಮದ ಮಕ್ಕಳಿಗೆ ಮೌಲ್ಯ ಶಿಕ್ಷಣದ ಅರಿವು ಮೂಡಿಸುದು ಮತ್ತು ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿರುವ ಕರುಣಾಮಯಿ.

ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಸಾದಿಸಬಹುದು ಅನ್ನುದಕ್ಕೆ ಉದಾಹರಣೆ ರಶ್ಮಿ ಉಳ್ಳಾಲ್.

ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಸಂಘಸಂಸ್ಥೆಯಿಂದ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಉದಯ ಟಿವಿ ಸವಾಲಿಗೆ ಸೈ ಕಾರ್ಯಕ್ರಮದಲ್ಲಿ ಮಂಗಳೂರನ್ನು ಪ್ರತಿನಿಧಿಸಿ ಮಾತನಾಡಿದ ಇವರಿಗೆ ತುಳುಚಿತ್ರದ ವಾಯ್ಸ್ ಡಬ್ಬಿಂಗ್ ಮತ್ತು ಜಾಹಿರಾತಿಗೆ ವಾಯ್ಸ್ ನೀಡಿದ ಶ್ರೇಯ ಲಭಿಸುತ್ತದೆ . ಬಹಳಷ್ಟು ಸಿನಿಮಾ ಹಾಗು ಸಂಗೀತ ಕ್ಷೇತ್ರದ ದಿಗಜ್ಜರ ಸಂದರ್ಶನ ನಡೆಸಿದ್ದು ಪ್ರಕೃತಿ ಪ್ರೇಮಿಯಾಗಿ 1000 ಕ್ಕೂ ಸೀಡ್ಬೂಲ್ ತಯಾರಿಸಿ, ಸೀಡ್ಬೂಲ್ ಬೀಜವನ್ನು ಹಾಕಿ ಹಸಿರು ಉತ್ಪತ್ತಿ ಮಾಡುವ ಅಭಿಯಾನವನ್ನು ನಡೆಸಿದ ಇವರು ,ಮದುವೆಗೆ ಬಂದ ಎಲ್ಲಾ ಅತಿಥಿಗಳಿಗೆ ಗಿಡವನ್ನು ಉಡುಗೊರೆಯಾಗಿ ನೀಡಿದ್ದು ಜನ ಮೆಚ್ಚುಗೆ ಗಳಿಸಿದ್ದಾರೆ. ತನ್ನದೇ ಆದ ಯೌಟ್ಯೂಬ್ ಚಾನೆಲ್ "ಆರ್ ಜೆ ರಶ್ಮಿ ಉಳ್ಳಾಲ್" ಆರಂಭಿಸಿದ್ದು ಜನರಿಗೆ ಪ್ರೇರಣೆ ನೀಡುವ ಕಾರ್ಯವನ್ನು ನಡೆಸುತ್ತಿದ್ದಾರೆ.

ಈದೀಗ "ದಿವ್ಯಾಸ್ ಅನ್ನಪೂರ್ಣ " ಯೋಜನೆಯ ಪ್ರಕಾರ ಮಂಗಳೂರಿನ,ಫಳ್ನೀರ್,ಕಂಕನಾಡಿ ,ಸ್ಟೇಟ್ ಬ್ಯಾಂಕ್,ಹಂಪನ್ಕಟ್ಟ ಸೇರಿದಂತೆ ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಮೂಕ ಪ್ರಾಣಿ ಹಾಗು ಬಡ ಜನರಿಗೆ ರಾತ್ರಿ ಊಟ ನೀಡುವ ಯೋಜನೆ ಮಾಡಿದ್ದು ಬಹುತೇಕ ಯುವ ಜನರಿಗೆ, ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವ ಪ್ರೇರಣೆ ನೀಡುತ್ತಾ ಇದ್ದಾರೆ ದಿವ್ಯಾಸ್ ತಂಡ.

ಮಂಗಳೂರು ಉಳ್ಳಾಲ ಸೇರಿದಂತೆ ಬಹಳಸ್ಟು ಮುಕಪ್ರಾಣಿ ಹಾಗು ಜನರಿಗೆ ಲಾಕ್ ಡೌನ್ ಸಂದರ್ಭ ದಲ್ಲಿ ಊಟದ ಕಿಟ್ ಹಾಗು ಸರಕಾರಿ ಶಾಲೆಗೆ ಪುಸ್ತಕ , ಕೋವಿಡ್ ಥರ್ಮೋಮೀಟರ್ ಸಿಗುವಂತೆ ಆರ್ಥಿಕ ಸಹಾಯ ಮಾಡಿರುತ್ತಾರೆ.

ಜನರು ಇಂತಹ ಕಾರ್ಯದಿಂದ ಪ್ರೇರಣೆ ಪಡೆದು ತಾನು ಕೂಡ ಇಂತಹ ಕೆಲಸಗಳನ್ನು ಮಾಡಿ ಇನ್ನೊಬ್ಬರಿಗೆ ಉಪಕಾರಿಯಾಗಬೇಕೆಂಬ ಅರಿವನ್ನು ಮೂಡಿಸಲು ಇಂತಹ ಸಮಾಜಮುಖಿ ಸೇವೆಗಳನ್ನು ಮುಂದುವರಿಸಬೇಕು ಎನ್ನುವುದು ರಶ್ಮಿಯ ಉದ್ದೇಶ.

ಇವರು ಪ್ರಸ್ತುತ ಮ್ಯಾನೇಜರ್ ಹುದ್ದೆಯಲ್ಲಿ ಇದ್ದು. ಇವರಿಗೆ ಇನ್ನಷ್ಟು ಅನೇಕ ಅವಕಾಶಗಳು ಒದಗಿ ಬರಲಿ,ಇನ್ನಷ್ಟು ಸಮಾಜ ಸೇವೆಮಾಡಲು ಆ ಭಗವಂತ ಶಕ್ತಿ, ಆರೋಗ್ಯ ಕೊಡಲಿ ಇನ್ನಷ್ಟು ಮಿಂಚಲಿ ಎಂದು ಹಾರೈಸುವ.

ಬರಹ: ✒️ ಪ್ರಶಾಂತ್ ಅಂಚನ್ ಮಸ್ಕತ್ತ್

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್