Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಮಂಗಳೂರಿನ ಅದ್ಭುತ ಕಲೆಗಾರ ಬಿ.ಎಸ್.ಎನ್.ಎಲ್ ಕಛೇರಿ ಕಾವಲುಗಾರ – ದಯಾನಂದ ಪಿ. ಅಂಚನ್

27 Nov 2023
ಮಂಗಳೂರಿನ ಅದ್ಭುತ ಕಲೆಗಾರ ಬಿ.ಎಸ್.ಎನ್.ಎಲ್ ಕಛೇರಿ ಕಾವಲುಗಾರ – ದಯಾನಂದ ಪಿ. ಅಂಚನ್
Advertiser
Advertisement · 728×90 px

ಪ್ರತಿಭೆಗೆ ವಯಸ್ಸಿನ ಮೀತಿಯಾಗಲಿ ಮಾಡುವ ಕೆಲಸವಾಗಲಿ ಅಡ್ಡಿಯಾಗುವುದಿಲ್ಲ. ಆಸಕ್ತಿ ಇದ್ದರೆ ಸಾಕು ಸಮಯ ವ್ಯರ್ಥ ಮಾಡದೆಸಿಕ್ಕ ಬಿಡುವಿನ ಸಮಯದಲ್ಲಿ ಪ್ರತಿಭೆಯ ಅನಾವರಣ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ನಮ್ಮ ನಡುವೆಮಂಗಳೂರಿನ ಬಿ.ಎಸ್.ಎನ್. ಎಲ್ ಕಛೇರಿಯಲ್ಲಿ ಕಾವಲುಗಾರರಾಗಿ ಬಿಡುವಿನ ವೇಳೆಯಲ್ಲಿ ಅಲ್ಲೇ ಮೂಲೆಯಲ್ಲಿ ಖುರ್ಚಿಯಲ್ಲಿಕುಳಿತು ಬಿಳಿ ಹಾಳೆಯಲ್ಲಿ ಚಿತ್ರ ಬಿಡಿಸುತ್ತ, ಗೋಡೆಯಲ್ಲಿ ತಮ್ಮ ಮೊಬೈಲ್ ಮೂಲಕ ಶೇಡೋ ಪ್ಲೇ ಮಾಡುವ ವಿಶಿಷ್ಟ ಕಲಾವಿದಹಾಗೇ ಎಲ್ಲಾರಲ್ಲೂ ಪ್ರೀತಿಯಿಂದ ಮಾತನಾಡುವ ಅಪರೂಪದ ವ್ಯಕ್ತಿ ದಯಾನಂದ ಪಿ. ಅಂಚನ್. ಚಿಕ್ಕದಿರುವಾಗ ತಮ್ಮ ಮನೆಯ ಸಮೀಪದಲ್ಲಿದ್ದ ಗೋವಿಂದ ಪೈ ಅನ್ನುವವರು ಶೇಡೋ ಪ್ಲೇ ಮೂಲಕ ಗೋಡೆಯಲ್ಲಿ ಕೈಚಲನೆ ಬಳಸಿಬೆಳಕಿನ ನೆರಳಿನಲ್ಲಿ ಮೂಡಿಸುತ್ತಿದ್ದ ಹಕ್ಕಿಗಳು,ಪ್ರಾಣಿಗಳ, ಮನುಷ್ಯನನ್ನು ನೋಡುತ್ತಾ ನೋಡುತ್ತಾ ತಾವು ನಿಧಾನವಾಗಿಆಸಕ್ತಿಯಿಂದ ಸತತ ಪ್ರಯತ್ನ ಪಟ್ಟು ಶೇಡೋ ಪ್ಲೇ ಮೂಲಕ ಗಿಳಿ, ಬಾತುಕೋಳಿ, ಕೊಕ್ಕರೆ, ಮನುಷ್ಯ,ಸಿಂಹ ಹೀಗೆ ಕಲಿತರು ಹಾಗೂಮನಸ್ಸಿದ್ದರೆ ಹೇಗೆದರೂ ಕಲಿಯಬಹುದು ತಾವು ಮೊದಲು ಕೆಲಸ ಮಾಡುತ್ತಿದ್ದ ರೈಸ್ ಮಿಲ್ ನಲ್ಲಿ ಬರುತ್ತಿದ್ದ ಧೂಳಿನಲ್ಲೇ ಚಿತ್ರಬಿಡಿಸುತ್ತಾ ನಂತರ ಕಾಗದದ ಮೇಲೆ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದರು. ಅನೇಕ ವ್ಯಕ್ತಿಗಳ ಮುಖದ ಚಿತ್ರಗಳನ್ನು ಬಿಡಿಸಿದ್ದಾರೆ.

ಮಾಡುವ ಕಾಯಕದೊಂದಿಗೆ ಹವ್ಯಾಸವನ್ನು ಬಿಡದೆ ಅನೇಕ ವರ್ಷಗಳಿಂದ ಮುಂದುವರಿಸಿಕೊಂಡು ಹೋಗುತ್ತಿರುವ ದಯಾನಂದಪಿ.ಅಂಚನ್.ವೃತ್ತಿಯಲ್ಲಿ ತಾವು ಮಂಗಳೂರಿನಲ್ಲಿರುವ ಬಿ.ಎಸ್.ಎನ್.ಎಲ್ ಕಛೇರಿಯಲ್ಲಿ ಬೆಳಗ್ಗೆ ಕಾವಲುಗಾರರು ಆದರೆಹವ್ಯಾಸವಾಗಿ ಅಧ್ಬುತವಾಗಿ ಚಿತ್ರಗಳನ್ನು ಬಿಡಿಸುವ ಕಲಾ ಆರಾಧಕರು.ಯಾರು ಆಶ್ಚರ್ಯವೆಂದರೆ ಚಿತ್ರಕಲೆ,ಶೇಡೋ ಪ್ಲೇಯಾರಲ್ಲೂ ಕಲಿಯದೆ ತಾವೇ ಸ್ವತಃ ಆಸಕ್ತಿಯಿಂದ ಅನೇಕ ವರ್ಷಗಳ ಪರಿಶ್ರಮದಿಂದ ಕಲಿತುಕೊಂಡು ತಮ್ಮ ಹವ್ಯಾಸವನ್ನುಉದ್ಯೋಗದ ಜೊತೆಗೆ ಬೆಳೆಸುತ್ತಾ ಅಧ್ಬುತವಾಗಿ ವಿವಿಧ ವ್ಯಕ್ತಿಗಳ,ಹಲವು ಸಾಧಕರ ಮುಖಗಳ ಚಿತ್ರಗಳನ್ನು ಬಿಡಿಸುತ್ತಾ, ಮೊಬೈಲ್ಬೆಳಕಿನಲ್ಲೇ ಗೋಡೆಗಳ ಮೇಲೆ ಹಕ್ಕಿ,ಹುಲಿ, ಮನುಷ್ಯ ಮಾತಾನಾಡುವುದು ಈ ರೀತಿ ಶೇಡೋ ಪ್ಲೇ ಮಾಡಿ ತೋರಿಸುವ ಸರಳ ವ್ಯಕ್ತಿದಯಾನಂದ ಪಿ. ಅಂಚನ್

ಯಾರೇ ಅವರನ್ನು ಮಾತನಾಡಿಸಿ ಅವರ ಕಲೆಯ ಬಗ್ಗೆ ಕೇಳಿದಾಗ ಪ್ರೀತಿಯಿಂದ ಬಿಡಿಸಿದ ಚಿತ್ರಗಳನ್ನು ,ಶೇಡೋ ಪ್ಲೇ ತೋರಿಸಿಅಚ್ಚರಿ ಪಡಿಸುತ್ತಾರೆ. ಸಾಧಿಸಲು ಛಲ ಹಾಗೂ ಶ್ರದ್ಧೆ ಇದ್ದರೆ ಸಾಕು. ಸ್ವಂತ ತಾವೇ ಆಸಕ್ತಿಯಿಂದ ಕಲಿತು ಇಂದಿಗೂ ಉಳಿಸಿಕೊಂಡುಬಂದಿರುವ ಅವರ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಪ್ರೇರಣೆ ನೀಡುವಂತದ್ದು ಹಾಗೂ ಇಂತಹ ಎಲೆಮರೆಯ ಕಾಯಿಯಂತಿರುವಅನೇಕರನ್ನು ಗುರುತಿಸಿ ಅವರಿಗೆ ಇನ್ನಷ್ಟು ಪ್ರೋತ್ಸಾಹಿಸೋಣ. ಯಾವಾಗಲಾದರೂ ಬಿ.ಎಸ್.ಎನ್.ಎಲ್ ಮಂಗಳೂರಿನ ಕಛೇರಿಗೆಹೋದಾಗ ಅಲ್ಲೇ ಹೊರಗೆ ಕುಳಿತು ಸಮಯ ಸಿಕ್ಕಾಗ ಎಳೆಎಳೆಯಾಗಿ ಚಿತ್ರವನ್ನು ಬಿಡಿಸುತ್ತಾ ಅದರಲ್ಲೇ ಖುಷಿ ಪಡುವ ದಯಾನಂದಪಿ. ಅಂಚನ್ ಅವರನ್ನು ಮಾತನಾಡಿಸಲು ಮರೆಯದಿರಿ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್