Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ವತಿಯಿಂದ ರಿಯಾದ್ ನಲ್ಲಿ ಬಹ್ಮಶೀ ನಾರಾಯಣ ಗುರುಗಳ 167ನೇ ಗುರು ಜಯಂತಿ ಆಚರಣೆ

27 Nov 2023
ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ವತಿಯಿಂದ ರಿಯಾದ್ ನಲ್ಲಿ ಬಹ್ಮಶೀ ನಾರಾಯಣ ಗುರುಗಳ 167ನೇ ಗುರು ಜಯಂತಿ ಆಚರಣೆ
Advertiser
Advertisement · 728×90 px

ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ವತಿಯಿಂದ ರಿಯಾದ್ ನಲ್ಲಿ ಬಹ್ಮಶೀ ನಾರಾಯಣ ಗುರುಗಳ 167 ನೇ ಗುರುಜಯಂತಿಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು. ಇದರ ಅಂಗವಾಗಿ ಸಭಾ ಹಾಗೂ ಸಾಂಸೃತಿಕ ಕಾರ್ಯಕ್ರಮಗಳನ್ನುಆಯೋಜಿಸಲಾಗಿತ್ತು.

ಕಾರ್ಯಕ್ರಮದ ಪ್ರಾರಂಭದಲ್ಲಿಕುಶಾಲ್ ಕರ್ಕೇರ ಅವರು ಪ್ರಾಸ್ತಾವಿಕ ಭಾಷಣಗೈದರು. ಶ್ರೀಮತಿ ಶೀಬಾ ಸುಧೀರ್ ಉಳ್ಳಾಲ್, ಕೋರ್ ಸಮಿತಿ ಸದಸ್ಯರಾದಭಾಸ್ಕರ್ ಕೊಟ್ಯಾನ್, ಲೀಲಾದರ್ ಗುಜರನ್, ಸತೀಶ್ ಕುಮಾರ್ ಬಜಾಲ್, ಭಾಸ್ಕರ್ ಪೂಜಾರಿ, ಪ್ರಕಾಶ್ ಅಮೀನ್, ಸುಂದರ್ದಾಸ್ ಪೂಜಾರಿ, ಸತೀಶ್ ಅಮೀನ್ ,ಚಂದ್ರಶೇಕರ್ ಪೂಜಾರಿ , ಚೇತನ ಸದಾಶಿವ ಪೂಜಾರಿ,ರಕ್ಷಿತಾ ಜಗದೀಶ್, ಸುಮಿತ್ರಾ ಭಾಸ್ಕರ್ಇವರನ್ನು ಹಾಗೂ ಮುಖ್ಯ ಅತಿಥಿಗಳಾದ ಶ್ರೀಯುತ ಸದಾಶಿವ ಪೂಜಾರಿ, ಶೇಖರ್ ಕೋಟ್ಯಾನ್, ಉದಯ ಸನಿಲ್, ಚಂದ್ರಕಾಂತ್ಅಮೀನ್, ವಿಶ್ವನಾಥ್ ಸುವರ್ಣ , ಇವರುಗಳನ್ನು ವೇದಿಕೆಗೆ ಆಹ್ವಾನಿಸಿದರು.

ಅತಿಥಿಗಳು ದೀಪ ಬೆಳಗಿಸುವ ಮೂಲಕ ಹಾಗೂ ರಂಜಿತ್ ಕಕ್ಕಿಂಜಿ (ರಂಜು ತುಳು ರಂಗ ಪ್ರೇಮಿ) ವಿಘ್ನವಿನಾಶಕ ಶ್ಲೋಕದೂಂದಿಗೆಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದಾನಂತರ ದಮ್ಮಾಮ್-ಅಲ್ಖೋಬರ್ , ಜುಬೈಲ್ , ರಿಯಾದ್, ಅಭಾ. ಕಲಾವಿದರಿಂದ ನೃತ್ಯ, ಹಾಡುಗಳಲ್ಲದೆ. ವಿಭಿನ್ನ ರೀತಿಯ ಮನೋರಂಜನಾ 

ಕಾರ್ಯಕ್ರಮಗಳು ಪ್ರೇಕ್ಷಕರಮನಸೂರೆಗೊಂಡವು. ಹಾಗೂ

2021-2022 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ, ದಮ್ಮಾಮ್(MASA) ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಅವರು ಪ್ರಕಟಿಸಿದರು.ಅಧ್ಯಕ್ಷರು ಶ್ರೀಯುತಲೀಲಾದರ್ ಗುಜರನ್ , ಹಾಗೂ ಗೌರವ ಅಧ್ಯಕ್ಷರು , ಕೆ.ಸಿ.ಭಾಸ್ಕರ್ , ಉಪಾಧ್ಯಕ್ಷರುಗಳು- ಚೇತನಾ ಸದಾಶಿವ ಪೂಜಾರಿ, ರಕ್ಷಿತಾಜಗದೀಶ್, ಪ್ರಧಾನ ಕಾರ್ಯದರ್ಶೀ ಪ್ರಕಾಶ್ ಅಮೀನ್ , ಜೊತೆ ಸಹಕಾರ್ಯ ದರ್ಶಿ ಸುಂದರ್ ದಾಸ್  ಪೂಜಾರಿ, ಖಜಾಂಚಿ  : ಚಂದ್ರಶೇಖರ್ ಹಾಗೂ ಉಪ ಖಜಾಂಚಿ ಸುಮಿತ್ರ ಭಾಸ್ಕರ್ ಇವರೆಲ್ಲರು ಅವಿರೋಧವಾಗಿ ಆಯ್ಕೆಯಾದರು.

ಕೊರೋನದ ಕಷ್ಟ ಸಮಯದಲ್ಲಿ ರೋಗಿಗಳಿಗೆ ಹಾಗೂ ಆರ್ಥಿಕವಾಗಿ ಸಮಸ್ಯೆ ಇದ್ದವರಿಗೆ ರಾತ್ತಿ ಹಗಲು ಎನ್ನದೆ, ಅಶಕ್ತರಿಗೆ ಸಹಾಯಮಾಡಿದ ಹಾಗೂ ಸೌದಿಯಲ್ಲಿ ಕೊರೋನ ಸಮಯದಲ್ಲಿ ಮತ್ತು ಇನ್ನಿತರ ಸಮಯದಲ್ಲಿ ಮೃತ ಪಟ್ಟವರ ಮೃತ ದೇಹವನ್ನು ಎಲ್ಲಾಸರಿಯಾದ ದಾಖಲೆ ಪತ್ರ ಗಳೊಂದಿಗೆ ಅವರ ಕುಟುಂಬಕ್ಕೆ ತಲುಪಿಸುವ ಮೂಲಕ ಮಾನವೀಯತೆ ಮೆರೆದ ನಾಲ್ವರುಮಹಾನೀಯರಾದ ಶ್ರೀ ಸತೀಶ್ ಕುಮಾರ್ ಬಜಾಲ್ , ಸತೀಶ್ ಅಮೀನ್ , ಸುಂದರ್ ದಾಸ್ ಪೂಜಾರಿ, ಸುದೀರ್ ಕೊಟ್ಯಾನ್ , ಇವರೆಲ್ಲರಿಗೆ “ಆಪತ್ಭಾಂದವರು “ ಎಂಬ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಕಾಶ್ ಅಮೀನ್ , ಅವರನ್ನುರೀಯಾದ್ ಬಿಲ್ಲವಾಸ್ ನಲ್ಲಿ ಹಲವು ವರ್ಷಗಳಿಂದ ಸಕ್ರೀಯವಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರಿಗೆ ಶಾಲು ಹೊದಿಸಿಸನ್ಮಾನಿಸಲಾಯಿತು ಮತ್ತು 60 ವರ್ಷ ಸಂಪೂರ್ಣ ಗೊಂಡ ಸಂಘದ ಕ್ರೀಯಾಶೀಲಾ ಹಿರಿಯರಾದ ಶ್ರೀಕಾಂತ್ ಅಮೀನ್, ಹೆಜಮಾಡಿರರಿಗೆ

ಇವರಿಗೂ. ಸಂಘದ ವತಿಯಿದ ಸನ್ಮಾನಿಸಿ ಗೌರವಿಸಲಾಯಿತು.ಸಂಪೂರ್ಣ  ಕಾರ್ಯಕ್ರಮವನ್ನು ಪ್ರವೀಣ್ ಪೂಜಾರಿ, ಕುಂಜತಬೈಲ್ಅವರು ನಿರ್ವಹಿಸಿದರು.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್