Billava Warriors – Billava News Portal
Wednesday, 28 October 2026
General News

'' ಬಿರುವೆರ್ ಕುಡ್ಲ '' ಸಂಘಟನೆ ಜಿಲ್ಲೆಯ ಇತರ ಸಂಘ ಸಂಸ್ಥೆಗಳಿಗೆ ಮಾದರಿ: ಶಾಸಕ ವೇದವ್ಯಾಸ್ ಕಾಮತ್

27 Nov 2023
'' ಬಿರುವೆರ್ ಕುಡ್ಲ '' ಸಂಘಟನೆ ಜಿಲ್ಲೆಯ ಇತರ ಸಂಘ ಸಂಸ್ಥೆಗಳಿಗೆ ಮಾದರಿ: ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ '' ಸ್ಪಂದನ ಯೋಜನೆ'' ವತಿಯಿಂದ ಅಶಕ್ತ ಮೂರು ಕುಟುಂಬಗಳಿಗೆ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಸಹಾಯ ಧನ ವಿತರಣಾ ಕಾರ್ಯಕ್ರಮ ಮಂಗಳೂರಿನ ಕುದ್ರೋಳಿ ಗೋಕರ್ಣ ದೇವಸ್ಥಾನದ ಆವರಣದಲ್ಲಿ ನಡೆಯಿತು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಚಾಲನೆ ನೀಡಿ, ಬಳಿಕ ಮಾತನಾಡಿದ ಅವರು. ಜಿಲ್ಲೆಯ ಜನತೆಗೆ ಬಿರವೆರ್ ಕುಡ್ಲ ಸಂಘಟನೆಯ ಸೇವೆ ಬಹು ದೊಡ್ಡ ಕೊಡುಗೆ. ಈ ಸಂಘಟನೆಯ ಜಿಲ್ಲೆಯ ಇತರ ಸಂಘ ಸಂಸ್ಥೆಗಳಿಗೆ ಮಾದರಿ ಈ ಸಂಘ ಕಳೆದ ಹಲವು ವರ್ಷದ ಅವಧಿಯಲ್ಲಿ ಒಂದುವರೆ ಕೋಟಿಗೂ ಅಧಿಕ ಮೊತ್ತದ ಸಹಾಯ ಅಸ್ತ ನೀಡುತ್ತಿದ್ದು ಶ್ಲಾಘನೀಯ ಕಾರ್ಯ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಈ ಸಂಘಟನೆಯಿಂದಾಗಲಿ ಎಂದವರು ಹೇಳಿದರು.

ಕಳೆದ 6 ವರ್ಷಗಳಲ್ಲಿ ಒಂದು ಕೋಟಿ ಎಪ್ಪತ್ತು ಲಕ್ಷಕ್ಕೂ ಮಿಕ್ಕಿ ಧನ ಸಹಾಯ ಅನಾರೋಗ್ಯ ಪೀಡಿತ ಕುಟುಂಬಕ್ಕೆ ಹಸ್ತಾಂತರಗೊಂಡಿದೆ. ನಾಗುರಿ ಮಜಾಲ್ ನಿವಾಸಿ ಲೋಕೇಶ್ ಅವರಿಗೆ ಸೊಂಟದ ಮೂಳೆ ಮುರಿತ ಹಾಗೂ ಒಂದು ಕಾಲು ಕಳೆದುಕೊಂಡವರಿಗೆ 50 ಸಾವಿರ ಸಹಾಯ ಹಸ್ತ.

ಬಜಾಲ್ ನಿವಾಸಿ ಪುರಂದರ ಅವರು ಕಿಡ್ನಿ ಮೂತ್ರ ಪಿಂಡ ವೈಫಲ್ಯ ಎರಡೂ ಕಾಲು ಕಳೆದುಕೊಂಡಿರುತ್ತಾರೆ ಇವರಿಗೆ 50 ಸಾವಿರದ ಸಹಾಯ ಹಸ್ತ.

ಪಿಲಿಕುಳ ಎದುರು ಪದವು ನಿವಾಸಿ ಬದ್ರುದ್ದೀನ್ ಮೂತ್ರ ಪಿಂಡ ವೈಫಲ್ಯದಿಂದ ಬಳಲುತ್ತಿದ್ದು ಇವರಿಗೆ 50 ಸಾವಿರ ಧನ ಸಹಾಯ.

ಈ ಸಂದರ್ಭದಲ್ಲಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ .ವೈ ಭರತ್ ಶೆಟ್ಟಿ, ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ್, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್ ಸಾಯಿ ರಾಮ್,ಮೂಡ ಅಧ್ಯಕ್ಷ ರವಿ ಶಂಕರ್ ಮಿಜಾರ್,ರವೀಂದ್ರ ನಿಕಮ್,ಲತೀಶ್ ಬಲ್ಲಾಳ್ ಭಾಗ್,ಬಾಬಾ ಅಲಂಕಾರ್,ಸೂರಜ್ ಕಲ್ಯ,ಲಿಖಿತ್ ಕೋಟ್ಯಾನ್,ಲೋಹಿತ್ ಗಟ್ಟಿ,ರೆನಿತ್ ರಾಜ್ ಅಶೋಕ್ ನಗರ,ಮನೋಜ್ ಶೆಟ್ಟಿ,ರಾಕೇಶ್ ಸಾಲಿಯಾನ್,ಅಮಿತ್ ರಾಜ್,ರಾಮ್ ಎಕ್ಕೂರು,ವಾಝಿ ಪದವಿನಂಗಡಿ,ಅಶ್ರಫ್ ಆಲಿ ಕಾರ್ಕಳ,ದಿನಿಲ್ ಬಲ್ಲಾಳ್ ಭಾಗ್,ಸುರೇಶ್ ಬಲ್ಲಾಳ್ ಭಾಗ್,ರೋಷನ್ ಬಲ್ಲಾಳ್ ಭಾಗ್,ಕಿಶೋರ್ ಬಾಬು ಕೋಡಿಕಲ್,ಪ್ರಾಣೇಶ್ ಬಂಗೇರ,ಕಿರಣ್ ಉರ್ವ,ಯಶ್ವಿನ್ ಪೂಜಾರಿ,ರಕ್ಷಿತ್ ಮೂಲ್ಕಿ, ಮುಂತಾದ ಪ್ರಾಮುಖ ಸದಸ್ಯರು ಮತ್ತು ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್