Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಬಾಡಿ ಬಿಲ್ಡರ್ ಆಗಿ ದೊಡ್ಡ ಸಾಧನೆ ಮಾಡಲು ಹೊರಟಿರುವ ಬಜ್ಪೆಯ ಪ್ರತಿಭೆ ಸಂದೀಪ್ ಪೂಜಾರಿ

27 Nov 2023
ಬಾಡಿ ಬಿಲ್ಡರ್ ಆಗಿ ದೊಡ್ಡ ಸಾಧನೆ ಮಾಡಲು ಹೊರಟಿರುವ ಬಜ್ಪೆಯ ಪ್ರತಿಭೆ  ಸಂದೀಪ್ ಪೂಜಾರಿ
Advertiser
Advertisement · 728×90 px

ಇಂದಿನ ಯುವ ಪೀಳಿಗೆ ಫೋಕಸ್ ಮಾಡುವುದು ಜಿಮ್ ಬಗ್ಗೆ. ಕಟ್ಟು ಮಸ್ತಾದ ಬಾಡಿಗಾಗಿ ಅದೆಷ್ಟೋ ಕಸರತ್ತು ಮಾಡುತ್ತಾರೆ. ಹೀಗೆ ಬಾಡಿ ಬಿಲ್ಡರ್ ಆಗಿ ದೊಡ್ಡ ಸಾಧನೆ ಮಾಡಲು ಹೊರಟಿರುವ ಬಜ್ಪೆಯ ಪ್ರತಿಭೆ ನಮ್ಮ ಸಂದೀಪ್ ಪೂಜಾರಿ
ಬಜ್ಪೆ ಯ ಕರಂಬರ್ ಗ್ರಾಮದ ರಮೇಶ್ ಪೂಜಾರಿ ಮತ್ತು ನಳಿನಾಕ್ಷಿ ದಂಪತಿಗಳ ಮಗ ಸಂದೀಪ್ ಪೂಜಾರಿ, ಇವರು ತನ್ನ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾ ಭ್ಯಾಸ ವನ್ನು ಹಿರಿಯ ಪ್ರಾಥಮಿಕ ಸಂತ ಜೋಸೆಫ್ ಪಿ.ಯು. ಕಾಲೇಜು ಬಜ್ಪೆ ಇಲ್ಲಿ ಮಾಡಿ ನಂತರ ಪದವಿಯನ್ನು ಶ್ರೀ ದುರ್ಗಾ ಪರಮೇಶ್ವರಿ ಫಸ್ಟ್ ಗ್ರೇಡ್ ಕಾಲೇಜ್ ಕಟೀಲ್ ಇಲ್ಲಿ ಮಾಡಿ ಮುಗಿಸಿದರು. ಬಾಡಿ ಬಿಲ್ಡಿಂಗ್ ಬಗ್ಗೆ ತುಂಬಾನೇ ಆಸಕ್ತಿ ಹೊಂದಿರುವ ಇವರು ಪರ್ಸನಲ್ ಟ್ರೈನರ್ ಆಗಿ ಹೊರದೇಶದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಇವರಿಗೆ ತರಬೇತಿಯನ್ನು ರವಿ ದೇವಾಡಿಗ ಮುಕ್ಕ ನೀಡುತ್ತಿದ್ದರು

ಬಡತನದಲ್ಲಿಯೇ ಬೆಳೆದು ಮೇಲೆ ಬಂದ ಇವರಿಗೆ ತಂದೆ ತಾಯಿ ಇಬ್ಬರು ಸಹೋದರಿಯರು ಅಲ್ಲದೆ ಬೇರೆ ಯಾರ ಪ್ರೋತ್ಸಾಹ ಬೆಂಬಲ ಸಿಗಲಿಲ್ಲಿ.ಸಾಧಿಸುವ ಛಲ ಒಂದು ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುದಕ್ಕೆ ಇವರೇ ಸಾಕ್ಷಿ.

"ಜಿಮ್" ಕಸ್ಟಮರ್ ಗೆ ಟೀಚ್ ಮಾಡಿ ಕಾಂಫಿಟೇಷನ್ಗೆ ಪ್ರಿಪೇರ್ ಮಾಡುವುದು ಇವರ ಕನಸು. ಎರಡು ಮೂರು ಕಾಂಫಿಟೇಷನಲ್ಲಿ ಭಾಗವಹಿಸಿದ ಇವರಿಗೆ ಜಾಸ್ತಿ ಯಾಗಿ ಸರ್ಟಿಫೈ ಡ್ ಪರ್ಸನಲ್ ಟ್ರೈನರ್ ಆಗಿ ಸೇವೆಯನ್ನು ಸಲ್ಲಿಸುವ ಆಸೆ . ಸರ್ಟಿಫಿಕೇಟೆಡ್ ಪರ್ಸನಲ್ ಟ್ರೈನಿಂಗ್ ಮುಗಿಸಿದ ಇವರು ಇಲ್ಲಿಗಿಂತ ಹೊರದೇಶ( ಅಬ್ರಾಡ್) ದಲ್ಲಿಯೇ ಟ್ರೈನರ್ ಆಗಿ ಸೇವೆಯನ್ನು ಸಲ್ಲಿಸಿದ್ದಾರೆ

ಇಷ್ಟು ಮಾತ್ರ ಅಲ್ಲದೆ ಇವರು ಒಬ್ಬ ನಿಸ್ವಾರ್ಥ ಸಮಾಜ ಸೇವಕ ಬಡ ಜನರಿಗೆ, ಆಶ್ರಮ ಹೀಗೆ ಅನೇಕ ಕಡೆ ತನ್ನ ಕೈಲಾದಷ್ಟು ಸಹಾಯ ಮಾಡುವುದು ಅಲ್ಲದೆ 32ನೇ ಬಾರಿ ರಕ್ತ ದಾನ ಮಾಡಿದ ಯುವ ಸಮಾಜ ಸೇವಕರು ಹೌದು.

ತನ್ನದೇ ಆದ ತರಬೇತಿ ಸೆಂಟರ್ ನ್ನು ಇಟ್ಟು ಇಂದಿನ ಯುವ ಪೀಳಿಗೆಗೆ ಉತ್ತಮ ರೀತಿಯ ತರಬೇತಿ ಕೊಟ್ಟು ಸ್ಪರ್ಧೆ ಗೆ ತಯಾರಿ ಮಾಡುವ ಇವರ ಬಹು ದೊಡ್ಡ ಕನಸು ನನಸಾಗಲಿ ಹಾಗೆಯೇ ಇವರು ನಂಬಿರುವ ದೈವದೇವರುಗಳ ಅನುಗ್ರಹ ಹಾಗೂ ಕಟೀಲು ಅಮ್ಮನ ಅನುಗ್ರಹ ಸದಾ ಇವರ ಮತ್ತು ಇವರ ಕುಟುಂಬದ ಮೇಲಿರಲಿ ಇನ್ನಷ್ಟು ಸೇವೆ ಮಾಡಲು ಶಕ್ತಿ ಕೊಡಲಿ ಎಲ್ಲಾ ಒಳ್ಳೆಯದಾಗಲಿ ಎಂದು ಹಾರೈಸುವ

✍️ ನಮ್ಮ ಬಿರ್ವೆರ್ ಉಡುಪಿ

 

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್