Billava Warriors – Billava News Portal
Wednesday, 28 October 2026
General News

ಬಣ್ಣದ ಲೋಕದಲ್ಲಿ ಚರಿತ್ರೆ ಸೃಷ್ಟಿಸುವತ್ತ....ಕಿರುತೆರೆಯ ಮುದ್ದುಲಕ್ಷ್ಮಿ ಧಾರಾವಾಹಿಯ ಡಾ||ಧ್ರುವಂತ್ ಪಾತ್ರಧಾರಿ : ಚರಿತ್ ಬಾಳಪ್ಪ ಪೂಜಾರಿ

27 Nov 2023
ಬಣ್ಣದ ಲೋಕದಲ್ಲಿ ಚರಿತ್ರೆ ಸೃಷ್ಟಿಸುವತ್ತ....ಕಿರುತೆರೆಯ ಮುದ್ದುಲಕ್ಷ್ಮಿ ಧಾರಾವಾಹಿಯ ಡಾ||ಧ್ರುವಂತ್ ಪಾತ್ರಧಾರಿ : ಚರಿತ್ ಬಾಳಪ್ಪ ಪೂಜಾರಿ

ಭವಿಷ್ಯದ ಹಾದಿಗೆ ಸಾಧನೆಯ ನಿರಂತರತೆಯ ಬೆಳಕು ಪಸರಿಸಿ ಚಿತ್ತದಲಿ ಚಿಂತನೆಯು ಟಿಸಿಲೊಡೆದಾಗ ಸಂಕಲ್ಪಿತದೆಡೆ ಸಾಕ್ಷಾತ್ಕಾರ ಸಾಧ್ಯ. ಬದುಕಿನಲ್ಲಿ ಹಾಗೆ-ಹೀಗೆಯ ಕನವರಿಕೆಗೆ ಕನರದೆ ಗುರಿಯೆಡೆಗೆ ಸಾಗಿ ಚರಿತ್ರೆ ಸೃಷ್ಟಿಸಲು ಹೊರಟಿರೋ ಕನಸಿಗ ಚರಿತ್ ಬಾಳಪ್ಪ ಪೂಜಾರಿ ಇವರ ಬಾಲ್ಯದ ಬಗ್ಗೆ ತಿಳಿಯುವುದಾದರೆ ತಂದೆ ಬಾಳಪ್ಪ ಕೊಡಗಿನ ಕೊಡ್ಲಿಪೇಟೆಯವರು. ತಾಯಿ ಪ್ರೇಮ ದಕ್ಷಿಣ ಕನ್ನಡದ ಬಂಟ್ವಾಳದವರು.

ಚರಿತ್ ಬಂಟ್ವಾಳದಲ್ಲಿ ಹುಟ್ಟಿದರೂ ಪ್ರಾಥಮಿಕ, ಪಿಯು ಶಿಕ್ಷಣದವರೆಗೆ ಕೊಡಗನ್ನು ಆಶ್ರಯಿಸಿ ನಂತರದ ಶಿಕ್ಷಣವನ್ನು ಕರಾವಳಿಯಲ್ಲಿ ಮುಂದುವರೆಸಿದರು. ಕೊಡಗೆಂಬ ವೀರತ್ವದ ಮಣ್ಣಲ್ಲಿ ಆಡಿ ಬೆಳೆದ ಇವರಿಗೆ ಸೈನ್ಯಕ್ಕೆ ಸೇರಬೇಕು ಅಥವಾ ಸೇವಾ ಧರ್ಮದ ವೈದ್ಯನಾಗಬೇಕೆಂಬ ಹಂಬಲವಿತ್ತು. ಕಾಲೇಜು ದಿನದಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಇವರು ಮಾಡೆಲಿಂಗ್ ಮತ್ತು ನಟನಾ ಕ್ಷೇತ್ರದ ಬಗೆಗೂ ಆಸಕ್ತಿಯುತರಾದರು. ಕಬಡ್ಡಿ, ವಾಲಿಬಾಲ್, ಶಟಲ್ ಇತ್ಯಾದಿ ಕ್ರೀಡೆಗಳಲ್ಲಿ ಭಾಗಿಯಾಗಿದ್ದು, ದೈನಂದಿನ ದೈಹಿಕ ಕಸರತ್ತಿನ ಮೂಲಕ ಸದೃಢ ಮೈಕಟ್ಟು ಕೂಡ ನಟನಾ ಕ್ಷೇತ್ರಕ್ಕೆ ಪೂರಕವಾದಂತಿತ್ತು. ಮುಂದೆ ಸ್ನಾತಕೋತ್ತರ ಪದವಿಯನ್ನು ಪಡೆದು ಉದ್ಯೋಗಕ್ಕೆ ಸೇರಿ ಕೈತುಂಬ ಸಂಬಳವಿದ್ದರು, ಮನಸ್ಸು ಬಣ್ಣದ ಬದುಕಿಗೆ ಮುಖಮಾಡಿತ್ತು.

ಏನಾದರಾಗಲಿ ಅಂದುಕೊಂಡು ಕೆಲಸಕ್ಕೆ ಗುಡ್ ಬೈ ಹೇಳಿ ನಟನಾ ಕ್ಷೇತ್ರದತ್ತ ಪಥ ಬದಲಿಸಿದರು. ಒಂದೆರಡು ವರ್ಷ ಕಾದರೂ ಅವಕಾಶ ಇವರ ಪಾಲಿಗೆ ಒಲಿಯಲಿಲ್ಲ. ಹೆತ್ತವರ ವಿರೋಧವು ಉಂಟಾಗಿ ಮತ್ತೆ ಮನಸ್ಸು ಉದ್ಯೋಗದತ್ತ ವಾಲಿತು. ದುಡಿದರೂ ಮನಸ್ಸಿನ ಮೂಲೆಯಲ್ಲಿ ಬಣ್ಣದ ಕನಸು ಹಾಗೆಯೇ ಇತ್ತು. ರಜಾ ಸಮಯ ಗೆಳೆಯನೊಬ್ಬನ ಕರೆಯಂತೆ 'ಲವಲವಿಕೆ' ಧಾರವಾಹಿಯ ಆಡಿಷನ್ನಲ್ಲಿ ಭಾಗವಹಿಸಿದರು. ಅಲ್ಲಿ ಆಯ್ಕೆಯಾದರು. ಮುಂದೆ 300 ಕಂತುಗಳನ್ನು ಪೂರೈಸಿದ ಈ ಧಾರವಾಹಿಯ 'ಲಕ್ಕಿಯ' ಪಾತ್ರ ಜನಮಾನಸದಲ್ಲಿ ಮೆಚ್ಚುಗೆಯಾಯಿತು.

'ಅಮ್ಮ' ಧಾರಾವಾಹಿಯಲ್ಲಿ 'ನವೀನ' ನಾಗಿ ಮಿಂಚಿದ್ದಾರೆ. ಉತ್ತಮ ನಟನೆಗಾಗಿ ''ಅತ್ಯುತ್ತಮ ನಟ ಪ್ರಶಸ್ತಿ''ಯ ಗರಿಯು ಇವರಿಗೆ ದೊರೆಯಿತು. 'ಸರ್ಪ ಸಂಬಂಧ' ಧಾರಾವಾಹಿಯ ನಂತರ ಸ್ಟಾರ್ ಸುವರ್ಣ ಚಾನೆಲ್ನ 700 ಕಂತು ಪೂರೈಸಿದ 'ಮುದ್ದುಲಕ್ಷ್ಮಿ' ಧಾರಾವಾಹಿಯಲ್ಲಿ 'ಡಾ|| ಧ್ರುವಂತ್' ಪಾತ್ರಧಾರಿಯಾಗಿ ಜನ-ಮನ ಗೆದ್ದಿದ್ದಾರೆ. ಕನ್ನಡ, ಮಲೆಯಾಳಿ, ತಮಿಳು ಭಾಷೆಯ ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ. ಇವರು ಸಿನಿಮಾ ಕ್ಷೇತ್ರಕ್ಕೂ ಪಾದರ್ಪಣೆ ಮಾಡಿರುತ್ತಾರೆ. ಕರ್ಮಯೋಗಿ ಚಲನಚಿತ್ರದೊಂದಿಗೆ, ಹಲವಾರು ಚಿತ್ರಗಳಲ್ಲಿ ನಟಿಸುವ ಬಗ್ಗೆ ಮಾತುಕತೆಯೂ ನಡೆದಿದೆ. ಆಸಕ್ತಿಗೆ ಸದಾ ಬೆನ್ನೆಲುಬಾಗಿ ಪತ್ನಿ ಮಂಜುಶ್ರೀ ಅವರಿದ್ದಾರೆ. ತನಗೆ ಬಂದ ಪಾತ್ರಗಳಿಗೆ ಶ್ರದ್ಧಾಪೂರ್ವಕವಾಗಿ ಜೀವ ತುಂಬುತ್ತಿರುವ ಚರಿತ್ ಅವಕಾಶ ನೀಡಿದ ನಿರ್ಮಾಪಕರು, ನಿರ್ದೇಶಕರಿಗೆ ಸದಾ ಚಿರ ಋಣಿಯಾಗಿದ್ದಾರೆ. ತಾನು ಆಸೆ ಪಟ್ಟಂತಹ ಈ ಕ್ಷೇತ್ರಕ್ಕೆ ಶ್ರಮಪಟ್ಟು ಕಾರ್ಯನಿರ್ವಹಿಸುತ್ತೇನೆ ಎಂಬ ಗಟ್ಟಿತನದ ಮಾತಿನ ಚರಿತ್ ಬಾಳಪ್ಪ ಪೂಜಾರಿ ರವರ ಬಣ್ಣದ ಬದುಕಿಗೆ ಶುಭವಾಗಲಿ ಎಂದು ಹಾರೈಸೋಣ.

✍️ ದೀಪಕ್ ಬೀರ ಪಡುಬಿದ್ರಿ

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್