Billava Warriors – Billava News Portal
Wednesday, 28 October 2026
General News

ಬಂಬ್ರಾಣ ಕೊಟ್ಯದ ಮನೆ ''ಆನೆ ಬೈದ್''ಯ ಬಿರುದಾಂಕಿತ ನಾರಾಯಣ ಪೂಜಾರಿಯವರ 70 ನೇ ಹುಟ್ಟುಹಬ್ಬ ಆಚರಣೆ

27 Nov 2023
ಬಂಬ್ರಾಣ ಕೊಟ್ಯದ ಮನೆ ''ಆನೆ ಬೈದ್''ಯ ಬಿರುದಾಂಕಿತ  ನಾರಾಯಣ ಪೂಜಾರಿಯವರ 70 ನೇ ಹುಟ್ಟುಹಬ್ಬ ಆಚರಣೆ

ಕಾಸರಗೋಡು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಧಾರ್ಮಿಕ ಕ್ಷೇತ್ರಗಳಲ್ಲಿ ಕಳೆದ 30 ವರ್ಷಗಳಿಂದ ಸಕ್ರಿಯವಾಗಿ ಪಾಲ್ಗೊಂಡು ಮಾರ್ಗದರ್ಶನ ನೀಡುತ್ತಾ ಸಮಾಜ ಸೇವೆಯನ್ನು ಮಾಡುತ್ತಿರುವ ಕುಂಬಳೆ ಸಮೀಪದ ಬಂಬ್ರಾಣ ಕೊಟ್ಯದ ಮನೆ "ಆನೆ ವೈದ್ಯ " ಬಿರುದಾಂಕಿತ ಶ್ರೀ ನಾರಾಯಣ ಪೂಜಾರಿ ಯವರ 70ನೇ ಹುಟ್ಟುಹಬ್ಬದ ಅಂಗವಾಗಿ 20-02-2022 ಭಾನುವಾರ ಬಂಬ್ರಾಣ ಕೊಟ್ಯದ ಮನೆಯಲ್ಲಿ ಭೀಮರಥ ಶಾಂತಿ, ಸತ್ಯನಾರಾಯಣ ಪೂಜೆ, ನಾಗತಂಬಿಲ.. ಹೀಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ,ಅಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ವರ್ಕಳ ಶಿವಗಿರಿ ಮಠದ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಕ್ಷೇತ್ರದ ತಂತ್ರಿ ವರ್ಯರಾದ ಬ್ರಹ್ಮ ಶ್ರೀ ಚಕ್ರಪಾಣಿ ದೇವಪೂಜಿತ್ತಾಯರ ಮಾರ್ಗದರ್ಶನದಂತೆ ಜರಗಿದ ಈ ಕಾರ್ಯಕ್ರಮದಲ್ಲಿ, ಕುದ್ರೋಳಿ ಗೋಕರ್ಣನಾಥೆಶ್ವರ ಕ್ಷೇತ್ರದ ಕೋಶಾಧಿಕಾರಿ ಹಾಗೂ ಗುರುಬೆಳದಿಂಗಳು(ರಿ) ಅಧ್ಯಕ್ಷರಾದ ಶ್ರೀ ಪದ್ಮರಾಜ್. ಆರ್. ರವರು ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ನೂತನ ವಿಧ್ಯಾನಿಧಿ ಟ್ರಸ್ಟ್ ಗೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಖ್ಯಾತ ರಂಗ ಭೂಮಿ ಹಾಗೂ ಚಲನ ಚಿತ್ರ ನಟರಾದ ಶ್ರೀ ಅರವಿಂದ ಬೋಳಾರ್, ಶ್ರೀ ಸಂಜೀವ ಪೂಜಾರಿ ಕೂರೇಲು, ಶ್ರೀ ಪಿ ಮುರಲೀಧರನ್ ನ್ಯಾಯವಾದಿ , ವಾರ್ಡ್ ಸದಸ್ಯ ಶ್ರೀ ಮೋಹನ್ ಬಂಬ್ರಾಣ , ಡಾl ರವೀಶ್ ಪಡುಮಲೆ, ಶ್ರೀ ವಿಶ್ವನಾಥ್ ಕೆಮ್ಮಣ್ಣು ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 70 ರ "ಸಪ್ತತಿ ಸಂಭ್ರಮ "ದ ಸವಿ ನೆನಪಿಗಾಗಿ 70 ಔಷಧೀಯ ಗುಣವುಳ್ಳ ಸಸ್ಯವನ್ನು ವಿತರಣೆ ಮಾಡಲಾಯಿತು.

ಸಮಾಜದ ಪ್ರಮುಖ ಸಾಧಕರಾದ ಕುಟುಂಬದ ಸದಸ್ಯರಾಗಿರುವ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ
ಸಹಾಯಕ ಪೊಲೀಸ್ ನಿರ್ದೇಶಕರಾದ ಶ್ರೀ ಕುಮಾರ ಚಂದ್ರ ರವರನ್ನು, ಲಕ್ಷಾಂತರ ಗಿಡಗಳನ್ನು ನೆಟ್ಟು ಪರಿಸರವನ್ನು ಹಸಿರಾಗಿರುವಲ್ಲಿ ತೆರೆ ಮರೆಯಲ್ಲಿ ಶ್ರಮಿಸುತ್ತಿರುವ ಪರಿಸರ ಪ್ರೇಮಿ ಶ್ರೀ ಮಾಧವ ಉಳ್ಳಾಲ, ಯಕ್ಷರಂಗದ ಯಕ್ಷಗಾನ ಕಲಾವಿದರಾಗಿ ಕಟೀಲು 1ನೇ ಮೇಳದಲ್ಲಿ ದೇವಿಯ ಪಾತ್ರವನ್ನು ನಿರ್ವಹಿಸುತ್ತಿರುವ ಶ್ರೀ ರಾಜೇಶ್ ಬೆಳ್ಳಾರೆ, ಕಂಬಳದಲ್ಲಿ ಅಪ್ರತಿಮ ಸಾಧನೆ ಗೈದು ಸತತವಾಗಿ 3 ಬಾರಿ ಬಹುಮಾನ ಗಳನ್ನು ಬಾಚಿ ಕೊಳ್ಳುವಲ್ಲಿ ಯಶಸ್ವಿಯಾದ ವಂದಿತ್ ಶೆಟ್ಟಿ ಬಂಬ್ರಾಣ,
ಭಾರತ ಮಾತೆಯ ವೀರ ಸೇನಾನಿಯಾಗಿ ಕಾರ್ತಿಕ್ ಬೆಳ್ಳೂರು ರವರನ್ನು ಸೇರಿ 5 ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ರಾಮ್ ಕುಮಾರ್ ಮುಂಡಿತಡ್ಕ, ಹಾಗೂ ರಮೇಶ್ ಬಾಳ್ಯ್ ರು ರವರು ನಿರೂಪಿಸಿ, ಹೇಮಾನಾಥ್ ಮೈತಡ್ಕ ರವರು ವಂದಿಸಿದರು.

 

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್