Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಪೆಟ್ರೋಲೂ ಬೇಡ. ಚಾರ್ಜ್‌ ಮಾಡೋ ಅಗತ್ಯನೂ ಇಲ್ಲ- ಓಡ್ತಾ ಓಡ್ತಾ ಚಾರ್ಜ್‌ ಆಗತ್ತೆ ಈ ಇ- ಬೈಕ್‌!

27 Nov 2023
ಪೆಟ್ರೋಲೂ ಬೇಡ. ಚಾರ್ಜ್‌ ಮಾಡೋ ಅಗತ್ಯನೂ ಇಲ್ಲ- ಓಡ್ತಾ ಓಡ್ತಾ ಚಾರ್ಜ್‌ ಆಗತ್ತೆ ಈ ಇ- ಬೈಕ್‌!
Advertiser
Advertisement · 728×90 px

ನವದೆಹಲಿ: ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೆಟ್ರೋಲ್‌ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಇಲೆಕ್ಟ್ರಿಕಲ್‌ ಗಾಡಿಗಳು ಬೀದಿಗಿಳಿದಿವೆ. ಬೈಕ್‌, ಸ್ಕೂಟರ್‌ ಅಷ್ಟೇ ಏಕೆ ಬಸ್ಸುಗಳು ಕೂಡ ಎಲೆಕ್ಟ್ರಿಕ್‌ ಆಗಿ ಪರಿವರ್ತನೆಗೊಂಡಿವೆ.

ಇದಾಗಲೇ ಇಲೆಕ್ಟ್ರಿಕ್‌ ಬೈಕ್‌ಗಳು ಭರ್ಜರಿ ಮಾರಾಟ ಕೂಡ ಆಗುತ್ತಿವೆ.

ಇಲೆಕ್ಟ್ರಿಕ್‌ ಚಾರ್ಜಿಂಗ್‌ ಬೈಕ್‌ಗಳು ನೂರಾರು ಕಿಲೋ ಮೀಟರ್‌ ಓಡುವುದು ನಿಜವಾದರೂ, ಕೆಲವು ಕಡೆಗಳಲ್ಲಿ ಚಾರ್ಜಿಂಗ್‌ ಪಾಯಿಂಟ್‌ ಇಲ್ಲದೇ ಪರದಾಡುವ ಸ್ಥಿತಿ ಇದೆ. ಅಂಥವರಿಗೆ ಇನ್ನೊಂದು ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ ಪುದುಚೇರಿ ಮೂಲದ ವಿಜಯನ್ ಪ್ರೇಮಾನಂದ್.

ಇದರ ಬೆನ್ನಲ್ಲೇ ಯಾರೂ ಊಹಿಸದ ಹೊಸದೊಂದು ತಂತ್ರಜ್ಞಾನವನ್ನು ಇವರು ಕಂಡುಹಿಡಿದಿದ್ದಾರೆ. ಅದೇನೆಂದರೆ ಇವರು ಕಂಡುಹಿಡಿದಿರುವ ಬೈಕ್‌ ಅನ್ನು ಚಾರ್ಜ್‌ ಮಾಡುವ ಅಗತ್ಯ ಕೂಡ ಇಲ್ಲ, ಹಾಗೆಂದು ಪೆಟ್ರೋಲ್‌ ಬೇಡ್ವವೇ ಬೇಡ. ಹಾಗಿದ್ದರೆ ಅದೆಂಥ ತಂತ್ರಜ್ಞಾನ ಅಂದಿರಾ?

ವಿಜಯನ್ ಅವರು ಕಂಡುಹಿಡಿದಿರುವ ಈ ಬೈಕ್‌ನಲ್ಲಿ ಇರುವ ಎರಡು ಬ್ಯಾಟರಿಗಳು ತಂತಾನೇ ಚಾರ್ಜ್‌ ಆಗುತ್ತವೆ, ಅದೂ ಗಾಡಿ ಓಡ್ತಾ ಓಡ್ತಾನೆ ಇದು ಚಾರ್ಜ್‌ ಆಗುತ್ತದೆ. ನೀವು ಚಾರ್ಜಿಂಗ್ ಸ್ಟೇಷನ್‌ಗೆ ಹೋಗಬೇಕಾಗಿಲ್ಲ. ಚಲಿಸುವಾಗ ಬೈಕ್‌ ತಂತಾನೇಯಾಗಿ ಚಾರ್ಜ್ ಆಗುತ್ತದೆ, ಇದರಿಂದ ವಿದ್ಯುತ್ ಉಳಿತಾಯ ಕೂಡ ಆಗುತ್ತದೆ ಎನ್ನುತ್ತಾರೆ ವಿಜಯನ್‌. ಇದಕ್ಕಾಗಿ ಇವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆಯಿಂದ ಪೇಟೆಂಟ್‌ ಕೂಡ ಪಡೆದುಕೊಂಡಿದ್ದಾರೆ.

'ವಿದ್ಯುತ್‌ ಚಾರ್ಜಿಂಗ್‌ ಪಾಯಿಂಟ್‌ಗಳು ಬೇಕೆಂದ ಕಡೆಗಳಲ್ಲಿ ಸಿಗುವುದಿಲ್ಲ. ನಾನು ಕಂಡುಹಿಡಿದಿರುವ ಈ ಬೈಕ್‌ ಈ ಸಮಸ್ಯೆಯನ್ನು ನಿವಾರಿಸುತ್ತದೆ. ಚಾರ್ಜಿಂಗ್ ಸ್ಟೇಷನ್‌ನಲ್ಲಿ ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ. ಇದರಲ್ಲಿ ಇರುವ ಬ್ಯಾಟರಿಗಳು ಪರಸ್ಪರ ಚಾರ್ಜ್ ಆಗುವಂತೆ ವಿನ್ಯಾಸ ಮಾಡಲಾಗಿದೆ. ಈ ಎರಡೂ ಬ್ಯಾಟರಿಗಳು ಚಾರ್ಜ್ ಆಗುವುದರಿಂದ ಶಕ್ತಿಯ ಬಳಕೆ ತುಂಬಾ ಕಡಿಮೆಯಾಗುತ್ತದೆ. ಇದರ ಅರ್ಥ ಬೇರೆ ಬ್ಯಾಟರಿಗಳಂತೆ ಬೇಗನೆ ಚಾರ್ಜ್‌ ಖಾಲಿಯಾಗುವುದಿಲ್ಲ' ಎನ್ನುತ್ತಾರೆ ವಿಜಯನ್‌.

ಈ ತಂತ್ರಜ್ಞಾನವನ್ನು ಬಳಸಲು, ಹಲವು ವಾಹನ ತಯಾರಕರನ್ನು ಕೋರಲಾಗಿದೆ. ಕಂಪನಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ. ಇದೆಲ್ಲಾ ಓಕೆಯಾದರೆ ಇನ್ನು ಯಾವುದೇ ಸಮಸ್ಯೆ ಇರದ ಬೈಕ್‌ಗಳು ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿವೆ ಎನ್ನುವುದು ಅವರ ವಿಶ್ವಾಸ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್