Billava Warriors – Billava News Portal
Wednesday, 28 October 2026
General News

ನರಕ‌ ಚತುರ್ದಶಿಯ ದಿನ ಎಣ್ಣೆ ಸ್ನಾನ ಮಾಡುವುದರ ಪ್ರಯೋಜನಗಳು ಇಲ್ಲಿವೆ

27 Nov 2023
ನರಕ‌ ಚತುರ್ದಶಿಯ ದಿನ ಎಣ್ಣೆ ಸ್ನಾನ ಮಾಡುವುದರ ಪ್ರಯೋಜನಗಳು ಇಲ್ಲಿವೆ

ದೀಪಾವಳಿ ಹಬ್ಬದ ಸಂಭ್ರಮ ಆರಂಭವಾಗಿದೆ. ಈ ದಿನ ಎಣ್ಣೆ ಸ್ನಾನ ಮಾಡಲಾಗುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಎಣ್ನೆ ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ. ಆದರೆ ದೇಹಕ್ಕೆ ಎಣ್ಣೆ ಸವರಿ ನಮ್ಮ ಸಾಂಪ್ರದಾಯಿಕ ಸ್ನಾನ ಮಾಡುವ ಪದ್ಧತಿ ಇಂದು ಸಂಪೂರ್ಣ ಕಣ್ಮರೆಯಾಗುತ್ತಿದೆ. ವರ್ಷಕ್ಕೊಮ್ಮೆ ಹೆಚ್ಚೆಂದರೆ ದೀಪಾವಳಿಯಂದು ಮಾತ್ರ ಎಣ್ಣೆ ಸ್ನಾನ(Oil Bathing) ಮಾಡುತ್ತಾರೆ. ಆದರೆ ನಮ್ಮ ಪೂರ್ವಜರು ಕೆಲವು ದಿನಗಳಲ್ಲಿ ಎಣ್ಣೆ ಸ್ನಾನ ಮಾಡಬೇಕು ಎಂದು ಹೇಳುತ್ತಾರೆ. ಪುರುಷರು ಬುಧವಾರ ಮತ್ತು ಶನಿವಾರದಂದು ಮತ್ತು ಮಹಿಳೆಯರು ಮಂಗಳವಾರ ಮತ್ತು ಶುಕ್ರವಾರದಂದು ಎಣ್ಣೆ ಸ್ನಾನ ಮಾಡಬಹುದು. ಭಾನುವಾರದಂದು ಎಣ್ಣೆ ಸ್ನಾನ ಮಾಡುವಂತಿಲ್ಲ ಎನ್ನಲಾಗುತ್ತದೆ.

ಎಣ್ಣೆ ಸ್ನಾನ ಯಾಕೆ ಮಾಡಬೇಕು?

ಎಣ್ಣೆ ಕೂಡ ನಮ್ಮ ದೇಹಕ್ಕೆ ಅತ್ಯಗತ್ಯವಾದ ವಸ್ತು ಎಂಬುದನ್ನ ಮರೆಯಬಾರದು. ಕೂದಲು ಮತ್ತು ಚರ್ಮ ಎರಡೂ ನೈಸರ್ಗಿಕವಾಗಿ ಆರೋಗ್ಯಯುತವಾಗಿರಲು ಎಣ್ಣೆ ಅತಿ ಅವಶ್ಯಕ. ಇವೆರಡೂ ನಮ್ಮ ತ್ವಚೆ ಮತ್ತು ಕೂದಲನ್ನು ರಕ್ಷಿಸುವ ಶಕ್ತಿ ಹೊಂದಿವೆ. ಹಾಗಾಗಿ, ವಾರಕ್ಕೆ ಎರಡು ಬಾರಿ ಎಣ್ಣೆ ಸ್ನಾನ ಮಾಡುವುದು ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಸಾಮಾನ್ಯವಾಗಿ, ನಮ್ಮ ದೇಹದಲ್ಲಿ ಉಷ್ಣತೆಯ ಹೆಚ್ಚಳದಿಂದ ವಿವಿಧ ಸಮಸ್ಯೆಗಳು ಉಂಟಾಗುತ್ತವೆ. ಬೇಸಿಗೆಯ ದದ್ದುಗಳು, ಹೀಗೆ ಹಲಾರು ಸಮಸ್ಯೆಗಳು ಉಂಟಾಗುತ್ತದೆ. ಆಯಿಲ್ ಸ್ಕ್ರಬ್ ಇಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಎಣ್ಣೆ ಸ್ನಾನ ಮಾಡಲು ಸರಿಯಾದ ಸಮಯ ಯಾವುದು?

ಬೆಳಗ್ಗೆ 6.30ಕ್ಕೆ ಎಣ್ಣೆ ಸ್ನಾನ ಆರಂಭಿಸಬೇಕು. ಉಗುರುಬೆಚ್ಚಗಿನ ನೀರಿನಲ್ಲಿ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡಿ. ಜಾಯಿಕಾಯಿ ಅಥವಾ ಸೊಪ್ಪನ್ನು ಬಳಸಬಹುದು. ಸರಳ ಆಹಾರಗಳನ್ನು ಸೇವಿಸಬೇಕು. ಎಣ್ಣೆ ಸ್ನಾನದ ದಿನ ಲೈಂಗಿಕ ಕ್ರಿಯೆ ಮಾಡಬಾರದು.ಈ ಸಮಯದಲ್ಲಿ ಹಗಲು ನಿದ್ದೆ ಮಾಡಬೇಡಿ. ತೀವ್ರ ಬಿಸಿಲಿನಲ್ಲಿ ಕೆಲಸ ಮಾಡುವುದು ಉತ್ತಮವಲ್ಲ. ತಣ್ಣನೆಯ ಆಹಾರವನ್ನು ಖಂಡಿತವಾಗಿಯೂ ಸೇವನೆ ಮಾಡಬಾರದು.

ಎಣ್ಣೆ ಸ್ನಾನ ಮಾಡುವುದರ ಪ್ರಯೋಜನಗಳು

ತೈಲಸ್ನಾನ ಮಾಡುವುದರಿಂದ ಕೆಟ್ಟ ಶಕ್ತಿಗಳು ದೇಹವನ್ನು ಪ್ರವೇಶ ಮಾಡಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಅಲ್ಲದೆ, ದೇಹವು ಮೃದುವಾಗಿರುತ್ತದೆ, ಹೆಚ್ಚು ಸುಂದರವಾಗಿರುತ್ತದೆ, ಇಂದ್ರಿಯಗಳು ಉತ್ತಮವಾಗಿರುತ್ತದೆ, ಕೂದಲು ಚೆನ್ನಾಗಿ ಬೆಳೆಯುವುದಲ್ಲದೆ, ಮೂಳೆಗಳು ಬಲವಾಗಿರುತ್ತವೆ ಎಂದು ಹೇಳಲಾಗುತ್ತದೆ.

ಎಣ್ಣೆ ಸ್ನಾನ ಮಾಡಲು ಮಹಿಳೆಯರಿಗೆ ಸೂಕ್ತ ದಿನ ಯಾವುದು ?

ಭಾನುವಾರದಂದು ಸ್ನಾನ ಮಾಡುವುದರಿಂದ ದೇಹದ ಆಕೃತಿ ಮತ್ತು ಸೌಂದರ್ಯ ದೂರವಾಗುತ್ತದೆ ಎನ್ನಲಾಗುತ್ತದೆ.

ಸೋಮವಾರದಂದು ಸ್ನಾನ ಮಾಡುವುದರಿಂದ ಹೆಚ್ಚಿನ ದ್ರವ್ಯ ಬರುತ್ತದೆ.

ಮಂಗಳವಾರ ಸ್ನಾನ ಮಾಡಿದರೆ ಸಂಕಟ ಬರುತ್ತದೆ.

ಬುಧವಾರದಂದು ಸ್ನಾನ ಮಾಡುವುದು ಅತ್ಯಂತ ಅರ್ಥಪೂರ್ಣವಾಗಿದೆ ಎನ್ನುತ್ತಾರೆ.

ಗುರುವಾರ ಸ್ನಾನ ಮಾಡಿದರೆ ಪ್ರಜ್ಞೆ ತಪ್ಪುತ್ತದೆ ಎನ್ನುವ ಅಭಿಪ್ರಾಯವಿದೆ.

ಶನಿವಾರ ಸ್ನಾನ ಮಾಡಿದರೆ ಆಯುಷ್ಯ ಹೆಚ್ಚಾಗುತ್ತದೆ.

ಪುರುಷರು ಎಣ್ಣೆ ಸ್ನಾನ ಮಾಡಲು ಒಳ್ಳೆಯ ದಿನ ಯಾವುದು?

ಸೋಮವಾರದಂದು ಎಣ್ಣೆ ಹಚ್ಚುವುದರಿಂದ ಸಂಧಿವಾತ ಉಂಟಾಗುತ್ತದೆ.

ಮಂಗಳವಾರದಂದು ಸ್ನಾನಕ್ಕೆ ಎಣ್ಣೆ ಹಚ್ಚಿದರೆ ಸಂಜೆ ಬೆನ್ನು ನೋವು ಬರುತ್ತದೆ.

ಗುರುವಾರದಂದು ಎಣ್ಣೆ ಹಚ್ಚುವುದರಿಂದ ಕಾಲಿನ ಸೆಳೆತ ಉಂಟಾಗುತ್ತದೆ.

ಶುಕ್ರವಾರದಂದು ಎಣ್ಣೆ ಹಚ್ಚುವುದರಿಂದ ಸಂಧಿವಾತ ಉಂಟಾಗುತ್ತದೆ.

ಹಾಗಾಗಿ ಪುರುಷರು ಸಹ ಶನಿವಾರ ಮತ್ತು ಬುಧವಾರದಂದು ಸ್ನಾನ ಮಾಡಬೇಕು.

ಎಣ್ಣೆ ಸ್ನಾನಕ್ಕೆ ಯಾವ ಎಣ್ಣೆ ಬಳಕೆ ಮಾಡಬೇಕು?

ಎಣ್ಣೆ ಸ್ನಾನ ಮಾಡಲು ನೀವು ಸಾರಭೂತ ತೈಲ ಮತ್ತು ದೀಪದ ಎಣ್ಣೆಯನ್ನು ಬಳಸಬಹುದು. ಈ ಎಣ್ಣೆಗಳ ತಂಪು ಕೆಲವರಿಗೆ ಹಿಡಿಸದಿದ್ದರೆ ಎರಡು ಎಸಳು ಬೆಳ್ಳುಳ್ಳಿ, ಒಂದು ಒಣ ಮೆಣಸಿನಕಾಯಿ ಮತ್ತು ಐದು ಕಾಳುಮೆಣಸುಗಳನ್ನು ಎಣ್ಣೆಗೆ ಸೇರಿಸಿ ಮೂವತ್ತು ಸೆಕೆಂಡುಗಳ ಕಾಲ ಒಲೆಯಲ್ಲಿ ಕುದಿಸಿ ಬಳಸಬಹುದು.

ದೀರ್ಘಕಾಲದವರೆಗೆ ಅಥವಾ ವರ್ಷಗಳವರೆಗೆ ಎಣ್ಣೆ ಸ್ನಾನ ಮಾಡದ ಜನರು ಎಣ್ಣೆ ಸ್ನಾನ ಮಾಡಲು ಬಯಸಿದಾಗ ಆರಂಭದಲ್ಲಿ ಶೀತ ಮತ್ತು ಜ್ವರದಂತಹ ರೋಗಲಕ್ಷಣಗಳು ಕಾಣಿಸಬಹುದು. ಅದಕ್ಕಾಗಿ ಭಯಪಡುವ ಅಗತ್ಯವಿಲ್ಲ. ಎಣ್ಣೆ ಸ್ನಾನವನ್ನು ಸರಿಯಾಗಿ ಪಾಲಿಸಿದರೆ ದೇಹಕ್ಕೆ ಒಗ್ಗುತ್ತದೆ. ತೊಂದರೆಗಳು ದೂರವಾಗುತ್ತವೆ.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್