Billava Warriors – Billava News Portal
Wednesday, 28 October 2026
General News

ನಮ್ಮ ತುಳುನಾಡಿನ ಹಾಗೂ ಬಿಲ್ಲವ ಸಮಾಜದ ಬಹುಮುಖ ಪ್ರತಿಭೆ ಅನ್ವಿಷಾ ಪೂಜಾರಿ ವಾಮಂಜೂರು

27 Nov 2023
ನಮ್ಮ ತುಳುನಾಡಿನ ಹಾಗೂ ಬಿಲ್ಲವ ಸಮಾಜದ ಬಹುಮುಖ ಪ್ರತಿಭೆ ಅನ್ವಿಷಾ ಪೂಜಾರಿ ವಾಮಂಜೂರು

ಕರಾವಳಿ ಭಾಗ ಪ್ರತಿಭೆಗಳ ತವರುರೂ ಎನಿಸಿಕೊಂಡಿರುವುದು ಎರಡು ಮಾತಿಲ್ಲ ಸಿನಿಮಾ, ಕ್ರಿಡೆ, ನೃತ್ಯ, ಸಿನಿಮಾ ಡ್ಯಾನ್ಸ್, ರಾಜಕೀಯ ಹಾಗೂ ದೇಶ ವಿದೇಶದಲ್ಲೂ ಕರಾವಳಿಗರ ಹೆಸರೆ ಕೇಳಿಬರುವುದು. ಹಾಗೆಯೆ ಕರ್ನಾಟಕದಾದ್ಯಂತ ಮನೆಮಾತಗಿದ್ದ "ಎಕ್ಸ್ ಪ್ರೆಶನ್ ಕ್ವೀನ್" ಅನ್ವಿಷಾ ಪೂಜಾರಿ ನಮ್ಮ ಬಿಲ್ಲವ ಸಮಾಜದ ಹೆಮ್ಮೆಯ ಪ್ರತಿಭೆ.ಕಠಿಣವಾದ ಪರಿಶ್ರಮ, ಶ್ರದ್ದೆಯಿಂದ ಮಾತ್ರ ಯಾವುದೆ ಒಂದು ಸಾಧನೆ ಮಾಡಲು ಸಾಧ್ಯ, ಹಾಗೂ ಪ್ರತಿಭೆಗೆ ಇರುವ ಮನೆಯ ವಾತವರಣವು ಅಗತ್ಯವಾಗಿರುತ್ತದೆ. ವಾಮಂಜೂರು ನಿವಾಸಿ ಅನಿಲ್ ಕುಮಾರ್ ಮತ್ತು ಅನುಷಾ ದಂಪತಿಗಳ ಪುತ್ರಿ. ಅನ್ವಿಷಾ ಪೂಜಾರಿ ವಾಮಂಜೂರ್ ಇವರಿಗೂ ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ಮನೆಯವರ ಪ್ರೋತ್ಸಾಹದಿಂದ ಈ ಮಟ್ಟಕ್ಕೆ ಏರಿದ್ಡಾರೆ.

ನೃತ್ಯ, ಯಕ್ಷಗಾನ, ಭರತನಾಟ್ಯ, ಸಿನಿಮಾ ಡ್ಯಾನ್ಸ್, ಯೋಗ, ರಂಗೋಲಿ, ಕೀ ಭೊರ್ಡ್ ಅಭ್ಯಾಸ ಮಾಡಿ ಸುಮಾರು 200 ಕ್ಕೂ ಹೆಚ್ಚು ಶೋ ಹಾಗೂ ಸ್ಪರ್ದೆಗಳಿಗೆ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿದ್ದಾರೆ.'ಉಡುಪಿ ಕಿಡ್ಸ್ ಟ್ಯಾಲೆಂಟ್, ದೈಜಿ ವರ್ಲ್ಡ್ ಮಾಧ್ಯಮ ನಡೆಸಿದ "ಜೂನಿಯರ್ ಮಸ್ತಿ ಸೀಸನ್ 2" ರಿಯಾಲಿಟಿ ಶೋ ಗೆ ಆಯ್ಕೆ, ಮಂಗಳೂರಿನ ಫಾರಂ ಪಿಜ್ಜಾ ಮಾಲ್ ಏರ್ಪಡಿಸಿದ 'ಮಾಡೆಲ್ಲಿಂಗ್ ಮ್ಯಾಕ್ಸ್ ಮಾಡೆಲ್ಲಿಂಗ್ " ನಲ್ಲಿ 'ಮ್ಯಾಕ್ಸ್ ಮಂಗಳೂರು ಸೂಪರ್ ಕಿಡ್ಸ್' ಟ್ರೋಫಿಯನ್ನು ಹಾಗೂ 'Mangalore Little Princess' ಟ್ರೋಫಿ ಗಳಿಸಿದ್ದಾರೆ.

ಇವರು ಜ಼ಿ ಕನ್ನಡದ ಆಯೊಜಿಸಿದ್ದ ಡ್ಯಾನ್ಸ್ ಕರ್ನಾಟಕ ಹಾಗೂ ಡ್ರಾಮ ಜೂನಿಯರ್ ನಲ್ಲಿ ಭಾಗವಹಿಸಿ, ಕರ್ನಾಟಕದ ಮನೆ ಮಾತಾಗಿರುವ ಅನ್ವಿಷಾ, ಡ್ಯಾನ್ಸ್ ಕರ್ನಾಟಕದಲ್ಲಿ "ಎಕ್ಸ್ ಪ್ರೆಶನ್ ಕ್ವೀನ್" ಎಂದೇ ಖ್ಯಾತಿ ಪಡೆದ್ದಿದಾರೆ. ಡ್ಯಾನ್ಸ್ ಕರ್ನಾಟಕದಲ್ಲಿ ಖ್ಯಾತ ನೃತ್ಯ ಸಂಯೋಜಕರಾದ ಶಶಿ ಮಾಸ್ಟರ್ ಮತ್ತು ರಾಹುಲ್ ಇವರಿಂದ ತರಬೇತಿಯನ್ನು ಪಡೆದ್ದಿದ್ದಾರೆ.ಹಾಗೂ ತುಳು ಸಿನಿಮಾಗಳಾದ ಜಬರ್ದಾಸ್ತ್ ಶಂಕರ, ಪೆಪ್ಪೆರೆ ಪೆರೆರೆರೆ, ಚಿತ್ರರಂಗದ ಖ್ಯಾತ ನಟರಾದ ನವೀನ್ ಡಿ ಪಡಿಲ್ ಜೊತೆಗೆ ನಟಿಸುವ ಮೂಲಕ ತುಳು ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ.

ಅನ್ವಿಷಾ ಮಂಗಳೂರಿನ ಶುಭೋದಯ ವಿದ್ಯಾಲಯ, ಮೂಡುಶೆಡ್ಡೆಯಲ್ಲಿ ೫ ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೇವಲ ತನ್ನ ಪ್ರತಿಭೆಯ ಜತೆಗೆ ವಿದ್ಯಾಭ್ಯಾಸದಲ್ಲೂ ಭೇಶ್ ಎನಿಸಿಕೊಂಡಿದ್ದಾರೆ.

ಇವರಿಗೆ ಕರ್ನಾಟಕ ಸರ್ಕಾರದ ”ಜಿಲ್ಲಾ ಅಸಾಧಾರಣ ಪ್ರತಿಭೆ”, ಕರ್ನಾಟಕ ಕಲಾಶ್ರಿ, ತುಳುನಾಡ ರಕ್ಷಣಾ ವೇದಿಕೆಯಿಂದ ತೌಳವ ಕುಮಾರಿ, ಜೆ ಸಿ ಮಡಾಂತ್ಯಾರ್ ಸಾಧನಶ್ರಿ ಸೇವ ಪುರಸ್ಕಾರ್, ಕರ್ನಾಟಕ ಪ್ರತಿಭ ರತ್ನ, ವೀರಕೇಸರಿ ಬೆಳ್ತಂಗಡಿ ವತಿಯಿಂದ ಕಲಾ ಸೇವಾರತ್ನ ಪುರಸ್ಕಾರ. ಮುಂತಾದ ಹಲವು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಅನ್ವಿಷಾ ಪೂಜಾರಿ ವಾಮಂಜೂರು ಹೀಗೆ ತನ್ನ ಸಾಧನೆಯನ್ನು ಮುಂದುವರಿಸುತ್ತಾ ದೇಶ ವಿದೇಶದಲ್ಲೂ ಹೆಸರು ಗಿಟ್ಟಿಸಿಕೊಳ್ಳಲಿ, ಹಾಗೂ ನಮ್ಮ ತುಳುನಾಡಿನ ಹಾಗು ಬಿಲ್ಲವ ಸಮಾಜದ ಹೆಮ್ಮೆಯಾಗಲಿ.

ಬರಹ: ಪುಷ್ಪರಾಜ್ ಪೂಜಾರಿ

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್