Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ದ್ವನಿ ಇಲ್ಲದವರ ದ್ವನಿ,ಯುವಕರ ಆದರ್ಶ ನಮ್ಮ ಹೆಮ್ಮೆಯ ಬಿರುವೆರ್ ಉದಯಣ್ಣ..

27 Nov 2023
ದ್ವನಿ ಇಲ್ಲದವರ ದ್ವನಿ,ಯುವಕರ ಆದರ್ಶ ನಮ್ಮ ಹೆಮ್ಮೆಯ ಬಿರುವೆರ್ ಉದಯಣ್ಣ..
Advertiser
Advertisement · 728×90 px

ದ್ವನಿ ಇಲ್ಲದವರ ದ್ವನಿ,ಯುವಕರ ಆದರ್ಶ ನಮ್ಮ  ಹೆಮ್ಮೆಯ ಬಿರುವೆರ್ ಉದಯಣ್ಣ..
ಬಡವರ ,ನೊಂದವರ ,ತುಳಿ ಕ್ಕೊಳಗಾದವರ ಪಾಲಿಗೆ ಪ್ರೀತಿಯ ಅಣ್ಣ..

ಕಿರಿಯರ ನಿರ್ಲಕ್ಷದಿಂದ ಅನಾಥರಾದ ಹಿರಿಯರಿಗೆ ಆಶ್ರಯ ಕೊಟ್ಟು ಸಲಹುವ ಪ್ರೀತಿಯ ಮಗ.

ಜೀವನದಲ್ಲಿ ಭವಿಷ್ಯದ ಬರವಸೆಗಳನ್ನೆಲ್ಲ ಕಳೆದುಕೊಂಡು ಕೈ ಚೆಲ್ಲಿ ಕುಳಿತ ಸಾವಿರಾರು ಯುವಕರಿಗೇ ಭರವಸೆ ಮೂಡಿಸುವಪ್ರೀತಿಯ ಗೆಳೆಯ.

ನಗು ಮೊಗದ ಸರದಾರ "ಬಿರುವೇರ್ ಕುಡ್ಲದ" ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್ ಬಾಗ್...!

ಹೊಸ ತಲೆಮಾರಿನ ಪೀಳಿಗೆಗೆ ಇರುವ ತಾಕತ್ತು, ಸಾವಿನೊಂದಿಗೆ ಬೇಕಾದ್ರೂ ಕೈಕುಲುಕಿ ಬರಬಲ್ಲ ನಿರ್ಭೀತ ಮನಸ್ಥಿತಿಯ ಗಟ್ಟಿತನಇವರದ್ದು..!

ಜೀವನ ಮತ್ತು ಸಮಾಜ ಒದಗಿಸಿರೋ ಅವಕಾಶವನ್ನು ಬಡವರ ಕಣ್ಣೀರನ್ನು ಒರೆಸಲು ಬಳಸಿಕೊಂಡರು.!

"ಹಠ ಮತ್ತು ದ್ವೇಷ ಸಾಧಿಸುವ ಗುಣವನ್ನು ನಾನು ಯಾವತ್ತೋ ಬಿಟ್ಟಿದ್ದೇನೆ.ಜೀವ ಬೇಕಾದ್ರೂ ಕೊಡುವಗೆಳೆಯರಿದ್ದಾರೆ.ಬೆಂಬಲಿಸುವ ಜನರಿದ್ದಾರೆ.ಮತ್ತೇನು ಬೇಕು ಹೇಳಿ"ಅನ್ನುವ ಇವರು ಜನ ನಾಯಕನು ಹೌದು.ಜನ ಸೇವಕನು ಹೌದು!

ಉದಯ್ ಪೂಜಾರಿಯವರು ಕಟ್ಟಿ ಬೆಳೆಸಿದ "ಬಿರುವೇರ್ ಕುಡ್ಲ" ಇವತ್ತು ದೇಶ ವಿದೇಶಗಳಲ್ಲಿ ಜನಪ್ರಿಯಗೊಂಡು ಅಶಕ್ತರಿಗೆಸೇವೆಯ ನೆರಳನ್ನು ನೀಡುತ್ತಿದೆ.ಅದರಲ್ಲೂ ಮಂಗಳೂರು ಹುಲಿವೇಷದ ಸಂಘಟನೆಯ ಮೂಲಕ ಸಾವಿರಾರು ಕಾರ್ಯಕರ್ತರನ್ನುಒಗ್ಗೂಡಿಸಿ ಎರಡು ಕೋಟಿಗಿಂತಲೂ ಹೆಚ್ಚು ಮೊತ್ತದ ಸಹಾಯವನ್ನು ಸಮಾಜಕ್ಕೆ ನೀಡಿದ ಹೆಗ್ಗಳಿಕೆ ಇವರದ್ದು.

ಕಳೆದ ವರ್ಷ ಕೊರೋನ ಸಂದರ್ಭದಲ್ಲಿ ಇವರ ಸೇವೆ ಅನನ್ಯವಾದುದು.ಕರಾವಳಿಯ ಎಲ್ಲ ತಾಲೂಕುಗಳಲ್ಲಿ ಬಿರುವೆರ್ ಕುಡ್ಲದ ಶಾಖೆತೆರೆದು ಎಲ್ಲ ವರ್ಗದ ದುರ್ಬಲರ ಸೇವೆಗೆ ಚಾಲನೆ ಕೊಟ್ಟರು.ಸುಮಾರು 30 ಲಕ್ಷ ಫುಡ್ ಕಿಟ್ಸ್ ನ್ನೂ ಕೇವಲ ಮಂಗಳೂರು ನಗರದಲ್ಲೇಹಂಚಿದ್ದಾರೆ ಅಂದರೆ ಇವರ ಸೇವಾಗುಣದ ವಿಶಾಲತೆಯನ್ನು ನೀವು ಆಲೋಚಿಸಬಹುದು.

ಬಿಲ್ಲವರ ಬಗ್ಗೆ ಯಾರೂ ಏನೇ ಹೇಳಲಿ ಮೊದಲಾಗಿ ದ್ವನಿ ಎತ್ತುವ ಯುವಕ ಇವರು. ಹೆಸರಿಗಾಗಿ ಅಧ್ಯಕ್ಷ ಉಪಾಧ್ಯಕ್ಷ ಆಗುವಮುಂದಾಳುಗಳು ನನ್ನಲ್ಲಿ ತುಂಬಾ ಜನ ಇದ್ದಾರೆ.ಆದರೆ ಕೆಲಸ ಮಾಡುವ ಇಚ್ಛಾಶಕ್ತಿಯ ಕೊರತೆ ಅವರಲ್ಲಿ ಕಾಣುತ್ತದೆ.

ಕೋಟಿ ಚೆನ್ನಯರು ಎಂದೂ ಸುಮ್ಮ ಸುಮ್ಮನೆ ತಪ್ಪೆಸಗಿದವರಲ್ಲ.ಹಾಗಂತ ಅನ್ಯಾಯ ಕಂಡಾಗ ಕಣ್ಣಿದ್ದೂ ಕುರುಡರಂತೆಇದ್ದವರಲ್ಲ.ಅದೇ ಆದರ್ಶದಲ್ಲಿ ಉದಯ್ ಬದುಕುತ್ತಿದ್ದಾರೆ..

" ಹಿರಿಯರು ಎನಿಸಿಕೊಂಡ ಸಮಾಜದ ಮುಖಂಡರು ಸ್ಥಾನಮಾನಗಳನ್ನು ಯುವಕರಿಗೆ ಒಪ್ಪಿಸಿ ಗೌರವಯುತವಾಗಿ ಹೊರನಡೆಯಲು ಇದು ಸಕಾಲ.ಇಲ್ಲವಾದರೆ ಕಾಲ ಕಳೆದಂತೆ ನೀವು ನೇಪಥ್ಯಕ್ಕೆ ಸರಿಯು ದಲ್ಲದೇ ಸಮಾಜಕ್ಕೆ ಸಾರತಿಯಾಗಬೇಕಾದ ಸಂಘಸಂಸ್ಥೆಗಳು ತಮ್ಮ ಪ್ರಾಧಾನ್ಯತೆಯನ್ನು ಕಳೆದು ಕೊಳ್ಳುದರಲ್ಲಿ ಸಂದೇಹ ವಿಲ್ಲ."

ಈ ನಿಟ್ಟಿನಲ್ಲಿ ಬಿರುವೆರ್ ಉದಯ್ ಅಣ್ಣ ನಮಗೆಲ್ಲ ಆಶಾಕಿರಣ ಎನಿಸಿಕೊಂಡಿದ್ದಾರೆ.ಪ್ರತಿ ಒಳ್ಳೆಯ ಕೆಲಸಕ್ಕೆ ಬೆನ್ನು ತಟ್ಟುವ  ಮನಸ್ಸುಅವರದ್ದು. ಏನೇ ಸಹಾಯ ಬೇಕಾದ್ರೂ ನಾನಿದ್ದೇನೆ ನಿಮ್ಮ ಜೊತೆಗೆ ಅನ್ನುವ ಭರವಸೆ ಕೊಡುವ ಮನಸ್ಸಿರುವ ಉದಯ್ ಇನ್ನಷ್ಟುಬೆಳೆಯಲಿ ಮತ್ತಷ್ಟು ಬೆಳಗಲಿ

 
✍️ಉದಯ್ ಕುಂದಾಪುರ

            (ಮುಂಬೈ)

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್