Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ತನ್ನ ಇರುವಿಕೆ ತೋರಿದ ತುಳುನಾಡಿನ ದೈವಿಶಕ್ತಿ: ಉಗ್ರನನ್ನು ನಗರ ಪ್ರವೇಶಿಸಲು ಬಿಡದೇ ದಾರಿಯಲ್ಲೇ ಬಾಂಬ್ ಸ್ಪೋಟಿಸಿ ಜನರ ರಕ್ಷಿಸಿದ ಕಂಕನಾಡಿ ಗರಡಿಯ ಅವಳಿ ವೀರರು..!

27 Nov 2023
ತನ್ನ ಇರುವಿಕೆ ತೋರಿದ ತುಳುನಾಡಿನ ದೈವಿಶಕ್ತಿ: ಉಗ್ರನನ್ನು ನಗರ ಪ್ರವೇಶಿಸಲು ಬಿಡದೇ ದಾರಿಯಲ್ಲೇ ಬಾಂಬ್ ಸ್ಪೋಟಿಸಿ ಜನರ ರಕ್ಷಿಸಿದ ಕಂಕನಾಡಿ ಗರಡಿಯ ಅವಳಿ ವೀರರು..!
Advertiser
Advertisement · 728×90 px

ಮಂಗಳೂರು: ಕಳೆದ ಕೆಲವು ದಶಕಗಳಿಂದ ಕೋಮುದಳ್ಳೂರಿಯಲ್ಲಿ ಬೆಂದು ಹೋಗಿದ್ದ ಕರಾವಳಿಯ ವಾಣಿಜ್ಯ ನಗರಿ ಮಂಗಳೂರುಇತ್ತೀಚಿನ ವರ್ಷಗಳಲ್ಲಿ ಅದ್ಯಾಕೋ ಸ್ಥಬ್ಧವಾಗಿತ್ತು. ಈ ಸಂತೃಪ್ತಿಯ ಮಧ್ಯೆ ಶನಿವಾರ ಮಂಗಳೂರು ನಗರದ ಕಂಕನಾಡಿ ಪೊಲೀಸ್ಠಾಣೆ ಬಳಿ ಆಟೋ ಕುಕ್ಕರ್ ಬಾಂಬ್ ಸ್ಫೋಟ ಜನರನ್ನು ಮತ್ತೆ ಆತಂಕಕ್ಕೀಡು ಮಾಡಿದೆ. ಆದರೆ ಇದೆಲ್ಲದರ ನಡುವೆ ಆಘಟನೆಯಲ್ಲೂ ತುಳುನಾಡಿನ ಕಾರ್ಣಿಕ ಶಕ್ತಿಗಳು ಪವಾಡ ಮೆರೆದಿರುವುದು ಗೋಚರವಾಗುತ್ತಿದೆ.

ಶನಿವಾರ ಮಂಗಳೂರು ನಗರದ ಕಂಕನಾಡಿ ಕಪಿತಾನಿಯೋ ಶಾಲೆ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾ ಒಂದರಲ್ಲಿ ಸ್ಪೋಟ ಸಂಭವಿಸಿದ್ದುಘಟನೆಯಲ್ಲಿ ಚಾಲಕ ಸೇರಿದಂತೆ ಪ್ರಯಾಣಿಕನು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣ ಅನೇಕ ಆಯಾಮಗಳನ್ನುಪಡೆದುಕೊಂಡರೂ ಕೊನೆಗೂ ಒಂದು ನಿರ್ದಿಷ್ಟ ಸ್ವರೂಪವನ್ನು ಪಡೆದುಕೊಂಡಿದೆ.

ಭಯೋತ್ಪಾದನೆ ಸಂಚು ರೂಪಿಸಿದ್ದ ಶಾರೀಕ್ ಕುಕ್ಕರ್‌ನಲ್ಲಿ ಅನೇಕ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಪ್ರೀ ಪ್ಲಾನ್ ಎಂಬಂತೆಯೋಜನೆ ಹಾಕಿಕೊಂಡಿದ್ದ.

ಈತ ಮೈಸೂರಿನಿಂದ ಬಸ್ಸಿನಲ್ಲಿ ಬಂದು ಪಡೀಲ್‌ನ ಹತ್ತಿರ ಇಳಿದು ಪುರುಷೋತ್ತಮ್ ಎಂಬವರ ರಿಕ್ಷಾದಲ್ಲಿ ಕೂತು ಪಂಪ್‌ವೆಲ್‌ಗೆಹೋಗಬೇಕು ಎಂದಿದ್ದಾನೆ.

ಆದರೆ ಚಾಲಕ ರಿಕ್ಷಾ ಚಲಾಯಿಸುತ್ತಾ ಸಾಗುತ್ತಿರುವಾಗಲೇ ಕಂಕನಾಡಿ ನಗರ ಪೊಲೀಸ್ ಠಾಣೆ  ಬಳಿ ಆತ ಹೊತ್ತೊಯ್ಯುತ್ತಿದ್ದ ಬ್ಯಾಗ್‌ನಲ್ಲಿದ್ದ ಕುಕ್ಕರ್ ಅಚಾನಕ್ ಆಗಿ ಸ್ಫೋಟಗೊಂಡಿದೆ. ಸ್ಫೋಟದ ಪರಿಣಾಮವಾಗಿ ಇಬ್ಬರೂ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.

ಈತನ ಕೃತ್ಯದ ಬಗ್ಗೆ ಅನೇಕ ಪ್ರಶ್ನೆಗಳು, ಅನುಮಾನಗಳು, ಆತಂಕಗಳು ಸೃಷ್ಠಿಯಾಗುತ್ತಿದ್ದರೂ ಆತ ಆ ಸ್ಪೋಟಕ ತುಂಬಿದ್ದ ಕುಕ್ಕರನ್ನುತೆಗೆದುಕೊಂಡು ಜನರು ನಂಬಿಕೊಂಡು ಬಂದಿರುವ ತುಳುನಾಡ ಕಾರ್ಣಿಕ ಪುರುಷರ ದೈವಸ್ಥಾನವಾದ ಕೋಟಿ ಚೆನ್ನಯ್ಯ ಗರೋಡಿತನ್ನ ಗಡಿಯನ್ನೂ ದಾಟಲು ಬಿಡದೆ ಮುಂಚಿತವಾಗಿಯೇ ಈ ಅವಘಡ ನಡೆದಿರುವುದು ಎಲ್ಲೋ ಒಂದು ಕಡೆ ಜನ ಇದು ‘ಈ ಮಣ್ಣಿನಪವಾಡ ಪುರುಷರ ಶಕ್ತಿ’ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

ಘಟನೆಯ ಭೀಕರತೆ ಅದೆಷ್ಟಿತ್ತೋ ತಿಳಿದಿಲ್ಲ. ಆದರೆ ದುರಂತವನ್ನು ಇಷ್ಟರಲ್ಲಿಯೇ ಮುಗಿಸಿದ್ದು ಮಾತ್ರ ನಾವು ನಂಬಿಕೊಂಡುಬಂದಿರುವ ಈ ಜಾಗದ ಶಕ್ತಿಗಳು ಎನ್ನುತಾರೆ ಸ್ಥಳೀಯರು.ಇನ್ನು ದುರಾದೃಷ್ಟವಶಾತ್ ಅಂದು ‘ಪ್ರತಿದಿನದಂತೆ ಇದು ಕೂಡಾ ಬಾಡಿಗೆ’ ಎಂದುಕೊಂಡಿದ್ದ ಪ್ರಮಾಣಿಕ ಆಟೋ ಚಾಲಕಪುರುಷೋತ್ತಮ ಅವರಿಗೆ ಮಾತ್ರ ಕಾದಿತ್ತು ಆಶ್ಚರ್ಯ.

ತನ್ನ ರಿಕ್ಷಾದಲ್ಲಿ ಪ್ರಯಾಣಿಕನನ್ನು ಕರೆದುಕೊಂಡು ಚಲಾಯಿಸುತ್ತಿರುವಾಗಲೇ ದುರಂತ ನಡೆದಿದ್ದು ಅವರನ್ನಷ್ಟೇ ಅಲ್ಲದೆ ಅಲ್ಲಿದ್ದವರನ್ನುಒಂದು ಕ್ಷಣ ದಿಗ್ಭ್ರಮೆಗೊಳಿಸಿತ್ತು. ಕರಾವಳಿಯಲ್ಲಿ ಏನು ಆಗುತ್ತೆ ಅಂತ ಭಯ ಇತ್ತೋ ಅದು ಘಟಿಸಿತ್ತು.

ಆದರೆ ಆ ಕುಕ್ಕರ್ ಬಾಂಬ್ ಮಂಗಳೂರು ನಗರ ಪ್ರವೇಶಿಸಿ ಯಾವುದೋ ಜನ ನಿಬಿಡ ಪ್ರದೇಶ, ಶಾಲೆಗಳ ಪ್ರದೇಶಗಳಲ್ಲಿ ಆ ಶಾಕೀರಕೊಂಡಿ ಹೋಗಿ ಸ್ಪೋಟಿಸಿದ್ದರೆ ಅದರ ಪರಿಣಾಮ ಬಹುಷ ಯಾರು ಕೂಡ ಊಹಿಸಲಸಾಧ್ಯ.

ಅಂತಹ ಸಜೀವ ಸ್ಪೋಟಕಗಳಿಂದ ತುಂಬಿದ್ದ ಟೈಮರ್ ಫಿಕ್ಸ್ ಮಾಡಿದ್ದ ಕುಕ್ಕರ್ ಬಾಂಬ್ ಜೊತೆಯಲ್ಲಿ ಶಾಕಿರನನ್ನು ಕಾರಣಿಕದ ಗರಡಿಕ್ಷೇತ್ರದ ಅವಳಿ ವೀರರು ಆಚೆಗೆ ದಾಟಿ ಬರಲು ಬಿಡದೇ ಮೊದಲೇ ಸ್ಪೋಟಗೊಂಡಿದ್ದು ದೈವ ಸಂಕಲ್ಪವಾಗಿತ್ತು.

ಎರಡು ವರ್ಷಗಳ ಹಿಂದೆಯಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ಮುಂದಿನ ದಿನಗಳಲ್ಲಿ ಮಗಳ ಮದುವೆಯನ್ನು ಎದುರುನೋಡುತ್ತಿದ್ದ ಪುರುಷೋತ್ತಮರ ಸ್ಥಿತಿ ಅವರ ಕುಟುಂಬಸ್ಥರ ಮನಸ್ಸನ್ನು ತಲ್ಲಣಗೊಳಿಸಿದೆ.

ಸಂಸಾರಕ್ಕೆ ಆರ್ಥಿಕ ಬೆನ್ನೆಲುಬಾಗಿದ್ದ ಪುರುಷೋತ್ತಮರು ಇದೀಗ ಸ್ಪೋಟಗಳ ಗಾಯಗಳಿಂದ ಆಸ್ಪತ್ರೆಯ ಹಾಸಿಗೆ ಮೇಲೆಮಲಗಿದ್ದಾರೆ.

ಆಟೋ ಚಾಲಕ ಪುರುಷೋತ್ತಮ್ ಅವರು ವೃತ್ತಿಯಲ್ಲಿ ಚಾಲಕರಾಗಿದ್ದರೂ ಅಪಾರ ದೈವಭಕ್ತ. ಮಹಾಕಾಳಿ ಮತ್ತು ಕೊರಗಜ್ಜ ದೈವದಭಕ್ತ ಕೂಡಾ. ದೈವಕ್ಕೆ ಬೂಳ್ಯ ಕೊಡುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿದ್ದಾರೆ.

ವಿಶೇಷ ದಿನಗಳು, ಸಂಕ್ರಾಂತಿ, ವಾರ್ಷಿಕ ದೇವರಾದನೆಯ ಸಂದರ್ಭದಲ್ಲಿ ದೈವದ ಚಾಕರಿಯನ್ನು ಮಾಡಿಕೊಂಡು ಬರುತ್ತಿದ್ದಾರೆ.

ದೈವಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆ ಪುರುಷೋತ್ತಮ್ ಜೀವ ಉಳಿಸಿದೆ. ಇವರು ದುರಂತದಲ್ಲಿ ಪಾರಾಗಲು ಉಜ್ಜೋಡಿಯ ಮಹಾಕಾಳಿಕೊರಗಜ್ಜ ದೈವಗಳೇ ಕಾರಣ ಅಂತ’ ಪತ್ನಿ ಚಿತ್ರಾಕ್ಷಿ ಕಣ್ಣೀರಿಟ್ಟಿದ್ದಾರೆ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್