Billava Warriors – Billava News Portal
Wednesday, 28 October 2026
General News

ಜೇನು ಕೃಷಿ ಯಶಸ್ಸು ಕಂಡ, 'ಹನಿ ವರ್ಲ್ಡ್' ಬ್ರಾಂಡ್‌ನ ಸ್ಥಾಪಕ ಬಿಲ್ಲವ ಮನಮೋಹನ

27 Nov 2023
ಜೇನು ಕೃಷಿ ಯಶಸ್ಸು ಕಂಡ, 'ಹನಿ ವರ್ಲ್ಡ್' ಬ್ರಾಂಡ್‌ನ ಸ್ಥಾಪಕ ಬಿಲ್ಲವ ಮನಮೋಹನ

ಇವರು ಬೆಟ್ಟಂಪಾಡಿಯ ಯುವಕ. ಹೆಸರು ಮನಮೋಹನ.‌ ಕಾಯಕ ಜೇನು ಕೃಷಿ. ಆರಂಭಿಸಿದ್ದು‌ 8ನೇ ಕ್ಲಾಸಿನಲ್ಲಿರುವಾಗ - ಕೇವಲ ಒಂದು ಪೆಟ್ಟಿಗೆಯಿಂದ. ಈಗ ಇರುವ ಜೇನುಪೆಟ್ಟಿಗೆಗಳ‌ ಸಂಖ್ಯೆ ಎರಡು‌ ಸಾವಿರ. ಒಂದು ಪೆಟ್ಟಿಗೆಯಿಂದ ಗರಿಷ್ಠ 48.6 ಕೆ.ಜಿ. ಜೇನು ಸಂಗ್ರಹಿಸಿದ್ದೂ ಇದೆ.ಬೆಟ್ಟಂಪಾಡಿಯಿಂದ ಮೈಸೂರುವರೆಗೆ 75 ಕಡೆ ಪೆಟ್ಟಿಗೆ ಇಟ್ಟಿದ್ದಾರೆ. ಇವರ ಜಾಗದಲ್ಲಿ ಅಲ್ಲ, ಯಾರದ್ದೋ ಜಮೀನಿನಲ್ಲಿ. ಸ್ಥಳ ಬಾಡಿಗೆಯಾಗಿ ಮಾಲೀಕನಿಗೆ ಒಂದಷ್ಟು‌ ಜೇನು ಮತ್ತು ಪರಾಗಸ್ಪರ್ಶದಿಂದ ಫಸಲು ಹೆಚ್ಚಳದ ಖುಷಿ.

ವಾರ್ಷಿಕವಾಗಿ 16000 ಕೆ. ಜಿ. ಜೇನು, 250 ಕೆ. ಜಿ. ಮೇಣ ಸಂಗ್ರಹ, 2000 ಜೇನುಕುಟುಂಬ ಮಾರಾಟ ಮನಮೋಹನರ‌ ಸಾಧನೆ. 'ಹನಿ ವರ್ಲ್ಡ್' ಇವರ ಬ್ರಾಂಡ್‌. ಜೇನು ಕುಟುಂಬ ಮಾರಾಟ ಮಾಡುವ , ಅಧಿಕ ಶುದ್ಧ ಜೇನು ಸಂಗ್ರಹಿಸುವ ಕರ್ನಾಟಕದ ಏಕೈಕ ಯುವ ಕೃಷಿಕ.ಜೇನು ನಿರ್ವಹಣೆಗಾಗಿ ಒಂದಷ್ಟು ಮಂದಿಗೆ ಕೆಲಸ ಕೊಟ್ಟ‌ ಉದ್ಯೋಗದಾತ. ಪ್ರತಿ ವರ್ಷ ಸಾವಿರಕ್ಕೂ ಅಧಿಕ ಮಂದಿಗೆ ಇವರ ಮನೆಯಲ್ಲಿ ತರಬೇತಿಯಾಗುತ್ತದೆ. ಅದೆಷ್ಟೋ ಮಂದಿಯನ್ನು‌ ಸ್ವಾವಲಂಬಿಯಾಗಿಸಿದ್ದಾರೆ.

ಜೇನು‌‌ನಿರ್ವಹಣೆ ಬಗ್ಗೆ ಯಾವುದೇ ಹೊತ್ತಿನಲ್ಲಿ ‌ಕರೆ ಮಾಡಿದರೂ ಆತ್ಮೀಯವಾಗಿ ತಿಳಿಹೇಳುವರು. ಹೊಸಬರಿಗೆ ಸಂಪೂರ್ಣ ಪ್ರಾತ್ಯಕ್ಷಿಕೆ ಇದ್ದೇ ಇದೆ. ಇವರಲ್ಲಿ ಪೆಟ್ಟಿಗೆ ಖರೀದಿಸಿದರೆ, ಒಂದರಿಂದ ಸಾವಿರವಾಗಲಿ ಎಂದು ದೇವರನ್ನು ಪ್ರಾರ್ಥಿಸಿಯೇ ಹಸ್ತಾಂತರಿಸುವುದು.

ಹಮ್ಮುಬಿಮ್ಮಿಲ್ಲದ ಮುಕ್ತ ಮನಸ್ಸು, ನನ್ನಂತೆ ಇನ್ನೊಬ್ಬರು ಬೆಳೆಯವೇಕೆಂಬ ಚಿಂತನೆ ಮನಮೋಹನರನ್ನು ಯಶಸ್ವಿ ರೈತೋದ್ಯಮಿಯನ್ನಾಗಿಸಿದೆ ಎನ್ನುವುದು ಸತ್ಯ.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್