Billava Warriors – Billava News Portal
Wednesday, 28 October 2026
General News

ಗೆಜ್ಜೆಗಿರಿಯಲ್ಲಿ ಒಂದು ದಿನ - ಶ್ರೀಮತಿ ಅನಿತಾ ಪಿ ಪೂಜಾರಿ ತಾಕೊಡೆ

27 Nov 2023
ಗೆಜ್ಜೆಗಿರಿಯಲ್ಲಿ ಒಂದು ದಿನ - ಶ್ರೀಮತಿ ಅನಿತಾ ಪಿ ಪೂಜಾರಿ ತಾಕೊಡೆ

ಗೆಜ್ಜೆಗಿರಿಯಲ್ಲಿ ಒಂದು ದಿನ - ಶ್ರೀಮತಿ ಅನಿತಾ ಪಿ ಪೂಜಾರಿ ತಾಕೊಡೆ

ಊರೆಂದರೆ ಎಂದೂ ಮುಗಿಯದ ಸಂಭ್ರಮ. ಈಬಾರಿ ದೀಪಾವಳಿಯ ಶುಭ ಸಂದರ್ಭದಲ್ಲಿ ಊರಿಗೆ ಹೋಗಿರುವ ಕಾರಣ ಪರಿವಾರ ಹಾಗೂ ಆಪ್ತರೊಂದಿಗೆ ಸೇರಿ ಎಂದಿಗಿಂತ ತುಸು ಹೆಚ್ಚೇ ಸಂಭ್ರಮಿಸಿದೆ.

ಊರಿನಲ್ಲಿದ್ದ ಹತ್ತು ದಿನಗಳಲ್ಲಿ ಸುತ್ತಾಡಿದ್ದು, ಸಂದರ್ಶಿಸಿದ್ದು ಹಚ್ಚ ಹಸಿರಿನ ರಮಣೀಯ ತಾಣಗಳನ್ನೇ. ಕಡಲಕೆರೆ, ಆಗುಂಬೆ ತಿರುವುಗಳು, ತೀರ್ಥಹಳ್ಳಿ, ರಿಪ್ಪನ್ ಪೇಟೆ, ಗೆಜ್ಜೆಗಿರಿ.... ಎಲ್ಲವೂ ಅವಿಸ್ಮರಣೀಯ ನೆನಪುಗಳೇ. ಪ್ರಕೃತಿಯ ಮಡಿಲಲ್ಲಿ ವಿಹರಿಸುವಾಗ ಸಮಾನ ಮನಸ್ಸುಗಳು ಜೊತೆಯಿದ್ದರೆ ಆ ಚೆಲುವಿನ ಆಸ್ವಾದನೆಯು ಇನ್ನಷ್ಟು ವೃದ್ಧಿಸುವುದಂತೂ ಸತ್ಯ.

 

 

 ಗೆಜ್ಜೆಗಿರಿ ರಮ್ಯ ಮನೋಹರವಾದ ಪ್ರಕೃತಿಯ ಚೆಲುವಿನ ವೈಭವವಿರುವ ಪುಣ್ಯಕ್ಷೇತ್ರ. ಬೆಟ್ಟದ ಮೇಲಿರುವ ಕೋಟಿ ಚೆನ್ನಯರ ಗರಡಿಗಳು. ನಾಗಬನ, ದೇಯಿ ಬೈದ್ಯೆತಿಯ ಸಮಾದಿ, ಕಲಾತ್ಮಕವಾದ ಕೆತ್ತನೆಯಿಂದ ಕೂಡಿರುವ ದೇಯಿ ಬೈದ್ಯೆತಿಯ ಸತ್ಯ ಧರ್ಮದ ಚಾವಡಿ, ವಿಶಿಷ್ಟ ರೀತಿಯಲ್ಲಿ ನವೀಕರಿಸಿದ ಬಾವಿ ಭಕ್ತಾದಿಗಳ ಜೊತೆಗೆ ಪ್ರಕೃತಿಯ ಆರಾಧಕರನ್ನೂ ಸೆಳೆಯುತ್ತದೆ. ಅಲ್ಲಿರುವ ಅರ್ಚಕರಿಂದ ಹಿಡಿದು ಪ್ರತಿಯೊಬ್ಬರೂ ನಮ್ಮನ್ನು ಉಪಚರಿಸುವ ರೀತಿಗೆ ನಿಜಕ್ಕೂ ಬೆರಗಾದೆ.

ಮೊದಲ ಬಾರಿ ನನ್ನ ಪರಿವಾರದವರೊಂದಿಗೆ ಗೆಜ್ಜೆಗಿರಿಯ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದ ಧನ್ಯತಾಭಾವದೊಂದಿಗೆ ಅಲ್ಲಿ ಕಳೆದ ಪ್ರತಿಕ್ಷಣಗಳೂ ನನ್ನೊಳಗೆ ಚಿರವಾಗಿದೆ.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್