Billava Warriors – Billava News Portal
Wednesday, 28 October 2026
General News

ಕೊಟ್ಟದನ್ನು ಪರರಿಗೆ ತಿಳಿಯದಂತೆ ಅದೆಷ್ಟೋ ಜನರ ಜೀವನಕ್ಕೆ ಆಸರೆಯಾದ ಮಹಾನ್ ಸಾಧಕರಲ್ಲೊಬ್ಬರು ನಮ್ಮ ಶೈಲೇಂದ್ರ ಸುವರ್ಣರು

27 Nov 2023
ಕೊಟ್ಟದನ್ನು ಪರರಿಗೆ ತಿಳಿಯದಂತೆ ಅದೆಷ್ಟೋ ಜನರ ಜೀವನಕ್ಕೆ ಆಸರೆಯಾದ ಮಹಾನ್ ಸಾಧಕರಲ್ಲೊಬ್ಬರು ನಮ್ಮ ಶೈಲೇಂದ್ರ ಸುವರ್ಣರು

ಕೊಟ್ಟದನ್ನು ಪರರಿಗೆ ತಿಳಿಯದಂತೆ ಅದೆಷ್ಟೋ ಜನರ ಜೀವನಕ್ಕೆ ಆಸರೆಯಾದ ಮಹಾನ್ ಸಾಧಕರಲ್ಲೊಬ್ಬರು ನಮ್ಮ ಶೈಲೇಂದ್ರಸುವರ್ಣರು

ಜೀವನದಲ್ಲಿ ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆ ಹಾದಿ ಸುಲಭ ಮತ್ತು ಯಶಸ್ಸು ಖಂಡಿತಾ ಸಾಧ್ಯ ಎಂಬುದನ್ನುಸಾಧಿಸಿ ತೋರಿಸಿದವರು ಶೈಲೇಂದ್ರ ವೈ. ಸುವರ್ಣರಬಡತನದ ಕುಟುಂಬದಲ್ಲಿ ಬೆಳೆದರೂ ಬಡತನ ಶಾಪವಲ್ಲ, ಕಠಿಣ ಪರಿಶ್ರಮದಿಂದ ಉನ್ನತಮಟ್ಟಕ್ಕೇರಬಹುದು ಎಂಬುದನ್ನು ಸಾಧಿಸಿಇತರರಿಗೆ ಮಾದರಿಯಾಗಿ ಬೆಳೆದವರು ಸುವರ್ಣರವರು.

ಹೌದು ಎಸ್ಆರ್‌ಆರ್ ಮಸಾಲೆ ಎನ್ನುವ ಮಸಾಲೆ ಪದಾರ್ಥಗಳ ಇಂಡಸ್ಟ್ರಿ ಸ್ಥಾಪಿಸಿ ಪ್ರತಿಷ್ಠಿತ ಉದ್ಯಮಗಳ ಸಾಲಿನಲ್ಲಿ ಬೆಳೆದ ಇವರಸಾಧನೆ ಖಂಡಿತವಾಗಿಯೂ ಅನುಕರಣೀಯ.

ಇದೀಗ ಭಾರತದ ಪ್ರತಿಷ್ಠಿತ ನಿಯತಕಾಲಿಕೆ ಔಟ್‌ಲುಕ್‌ನಲ್ಲಿ ಅವರ ಇಂಡಸ್ಟ್ರಿ ಬೆಳವಣಿಗೆ ಬಗ್ಗೆ ಮುಖಪುಟದಲ್ಲಿ ಲೇಖನಪ್ರಕಟವಾಗಬೇಕಾದರೆ ಅವರ ಸಾಧನೆ ಏನು ಎಂಬುದನ್ನು ನಾವು ಮನಗಾಣಬೇಕು.

ಕೇವಲ ಉದ್ದಿಮೆ ಮಾತ್ರವಲ್ಲದೇ, ಸಮಾಜಮುಖಿ ಕಾರ್ಯದಲ್ಲಿ ತೊಡಿಸಿಕೊಳ್ಳುತ್ತ, ತನ್ನ ಉದ್ಯಮದ ಒಂದಷ್ಟು ಪಾಲನ್ನುಸಮಾಜದ ಅಶಕ್ತರು, ಬಡವರು, ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಮೂಲಕ ಸಮಾಸೇವೆ ಜತೆಗೆ ಅನೇಕ ಸಮಾಜಮುಖಿ ಕಾರ್ಯಮಾಡುವ ಸಂಘಟನೆಗಳೊಂದಿಗೆ ಸಕ್ರಿಯರಾಗಿ ‌ತೊಡಗಿಸಿಕೊಂಡು, ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿರುವ ಇವರುನಿಜವಾಗಿಯೂ ಎಲ್ಲರಿಗೂ ಮಾದರಿ.

ಬ್ರಹ್ಮಶ್ರೀ ನಾರಾಯಣಗುರುಗಳ ತತ್ವದಂತೆ ಜೀವನ ರೂಪಿಸಿಕೊಂಡು, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರವ್ಯಕ್ತಿತವನ್ನು ಅಳವಡಿಸಿಕೊಂಡು, ಸಮಾಜದ ಹಿರಿಯರು ಮತ್ತು ಕಿರಿಯರೊಂದಿಗೆ ಆತ್ಮೀಯರಾಗಿದ್ದುಕೊಂಡು ಸ್ನೇಹಜೀವಿಎನಿಸಿಕೊಂಡವರು.

ಇವರ ಉದ್ದಿಮೆ ಇನ್ನಷ್ಟು ಉನ್ನತಮಟ್ಟಕ್ಕೇರಿ ಮತ್ತಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗುವಂತೆ ದೇವರು ಅನುಗ್ರಹ ಕರುಣಿಸಲಿಎಂದು ಆಶಿಸೋಣ.

ಪದ್ಮರಾಜ್ ಆರ್.

ಕೋಶಾಧಿಕಾರಿ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ

ಅಧ್ಯಕ್ಷರು ಗುರುಬೆಳದಿಂಗಳು ಫೌಂಡೇಶನ್

ನೋಟರಿ ಮತ್ತು ನ್ಯಾಯವಾದಿಗಳು ಮಂಗಳೂರು

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್