Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಕುಪ್ಪೆಪದವಿನಲ್ಲಿ ಜನಮೆಚ್ಚಿದ ಸೇವಕ... ಜಗದೀಶ್ ಪೂಜಾರಿ ದುರ್ಗಕೋಡಿ

27 Nov 2023
ಕುಪ್ಪೆಪದವಿನಲ್ಲಿ ಜನಮೆಚ್ಚಿದ ಸೇವಕ... ಜಗದೀಶ್ ಪೂಜಾರಿ ದುರ್ಗಕೋಡಿ
Advertiser
Advertisement · 728×90 px

ಕುಪ್ಪೆಪದವಿನಲ್ಲಿ ಜನಮೆಚ್ಚಿದ ಸೇವಕ..

ವ್ಯಕ್ತಿ ಹಣ‌ ಅಂತಸ್ತಿನಿಂದ ಶ್ರೀಮಂತನಾದರೆ, ಇಲ್ಲೊಬ್ಬರು ತನ್ನ  ಗುಣ, ಪರೋಪಕಾರ ಹೃದಯ ಶ್ರೀಮಂತಿಕೆಯಿಂದ ಜನ‌ಮೆಚ್ಚಿದಸೇವಕನಾಗಿ ತನ್ನ ಊರು ಮಾತ್ರವಲ್ಲದೆ ಅನೇಕ ಕ್ಷೇತ್ರಗಳಲ್ಲಿ ತನ್ನ ಹೆಸರಿಗೆ ಗುರುತು‌ಗಳಿಸಿದ್ದಾರೆ. ಯಾರಪ್ಪ ಈ ವ್ಯಕ್ತಿ ಎಂದಾಗನಮಗೆ ತಕ್ಷಣವೇ ನೆನಪಿಗೆ ಬರುವುದು

" ಕುಪ್ಪೆ ಪದವಿನ ಜಗ್ಗಣ್ಣ "..

ಜಗದೀಶ್ ಪೂಜಾರಿ ದುರ್ಗಕೋಡಿ ಇವರು ದಿ. ವಾಸು ಪೂಜಾರಿ ಹಾಗು ಮುತ್ತು‌ ಪೂಜಾರಿ ದಂಪತಿಗಳ ಪುತ್ರ, ತನ್ನ ಬಾಲ್ಯದಿಂದಲೇಜನಪರ‌ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುವ ಇವರು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ‌ ಕೈಜೋಡಿಸಿದವರು. ಇನ್ನು ಧಾರ್ಮಿಕ‌ಕಾರ್ಯಗಳಲ್ಲೂ ಇವರು  ನಿರಂತರವಾಗಿ ಸೇವೆಯನ್ನು ನೀಡಿ ರಾಮಕೃಷ್ಣ ಭಜನ ಮಂಡಳಿ‌ ಕುಪ್ಪೆ ಪದವಿನ ಕಾರ್ಯದರ್ಶಿ ಯಾಗಿ  ಸೇವೆ ನೀಡಿದವರು. ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿ ತನ್ನ ಬಿಡುವಿನ‌ ಸಮಯದಲ್ಲಿ ಶಾಲ ವಾಹನವನ್ನು ಚಲಾಯಿಸುವಶ್ರಮಜೀವಿಯೂ ಹೌದು. ಅನೇಕ ಜನಪರ ಕಾರ್ಯಗಳಲ್ಲಿ‌ ಗುರುತಿಸಿ ಸತತ ಮೂರು ಬಾರಿ 15 ವರುಷಗಳಿಂದ ಜನರೇಆಯ್ಕೆಮಾಡಿರುವ ಸೋಲಿಲ್ಲದ ಸರದಾರರು ಹೌದು. ತಾನು ಪಂಚಾಯತ್ ಸದಸ್ಯನಾಗಿ ಜನರ ಪ್ರತಿಯೊಂದು ಕಷ್ಟ ಗಳಿಗೂಹೆಗಲನ್ನು‌ ನೀಡುತ್ತಾ ಮುನ್ನಡೆಯುವ ಜೊತೆಗೆ‌ ಪಂಚಾಯತ್ ಮೂಲಕ‌ ದೊರಕುವ ಎಲ್ಲಾ ಸೌಲಭ್ಯಗಳನ್ನು ಜನರು ಸಮಗ್ರರೀತಿಯಲ್ಲಿ ತಲುಪಿಸುವ ಹೆಮ್ಮೆಯ‌ ಜನಪ್ರತಿನಿಧಿ. ಇನ್ನು ಬಿಲ್ಲವ ಸಮಾಜದ ಯುವವಾಹಿನಿ ರಿ. ಇದರ ಕುಪ್ಪೆಪದವು ಘಟಕದಮಾಜಿ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿರುತ್ತಾರೆ. ಪ್ರಸ್ತುತ(ಜಗ್ಗಣ್ಣ ರಿಕ್ಷಾ ) ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತ ಯುವಾಹಿನಿ ಕೇಂದ್ರ ಸಮಿತಿ(ರಿ.)ಮಂಗಳೂರು ಇದರ ಸಂಘಟನಕಾರ್ಯದರ್ಶಿ

ತನಗೆ ಎಷ್ಟೇ ಅಧಿಕಾರ ಅವಕಾಶಗಳಿದ್ದರೂ ಇಂದಿಗೂ ರಿಕ್ಷಾ ಚಾಲಕನಾಗಿ ತನ್ನ‌ ಮನೆಯನ್ನು ನಿಭಾಯಿಸುವ ಶ್ರಮಜೀವಿ ಮುಂದಿನದಿನಗಳಲ್ಲಿ ಜನರ ಆಶಿರ್ವಾದ ದಿಂದ ಇನ್ನಷ್ಟು ಎತ್ತರಕ್ಕೆ ಬೆಳೆಯುವ ನಾಯಕನಾಗಲಿ ಎಂಬುವುದು ನಮ್ಮೆಲ್ಲರ ಆಶಯ...
✍ ಬಿಲ್ಲವಾಸ್ ಗುರುಪುರ ಕೈಕಂಬ

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್