Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಕುಂಬ್ರ :ಅಕ್ಷಯ ಗ್ರೂಪ್ ಸಮೂಹ ಸಂಸ್ಥೆಗಳ ಸುಸಜ್ಜಿತ ಅಕ್ಷಯ ಆರ್ಕೇಡ್ ಲೋಕಾರ್ಪಣೆ

27 Nov 2023
ಕುಂಬ್ರ :ಅಕ್ಷಯ ಗ್ರೂಪ್ ಸಮೂಹ ಸಂಸ್ಥೆಗಳ ಸುಸಜ್ಜಿತ ಅಕ್ಷಯ ಆರ್ಕೇಡ್ ಲೋಕಾರ್ಪಣೆ
Advertiser
Advertisement · 728×90 px

ಪುತ್ತೂರು, ಅ. 17: ಉದ್ಯಮಿ ಜಯಂತ್ ನಡುಬೈಲು ಮಾಲಕತ್ವದ ಅಕ್ಷಯ ಗ್ರೂಪ್ ಸಮೂಹ ಸಂಸ್ಥೆಗಳ ಸುಸಜ್ಜಿತ ಅಕ್ಷಯ ಆರ್ಕೇಡ್ ರವಿವಾರ ( ಅ 17) ಕುಂಬ್ರದಲ್ಲಿ ಲೋಕಾರ್ಪಣೆಗೊಂಡಿತು.ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಚೇರಿ ಉದ್ಘಾಟಿಸಿದರು, ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕುಂಬ್ರ ಜಂಕ್ಷನ್‌ನಲ್ಲಿ ನಿರ್ಮಾಣಗೊಂಡಿರುವ ಸುಂದರ ಹಾಗೂ ಸುಸಜ್ಜಿತ ಅರ್ಕೆಡ್‌  ವಾಣಿಜ್ಯ ಹಾಗೂ  ವಸತಿ  ಸಂಕೀರ್ಣವನ್ನು ಹೊಂದಿದೆ. ಅಲ್ಲದೆ 250 ಆಸನಗಳ ಹವಾನಿಯಂತ್ರಿತ ಸಭಾಭವನ, 200 ಆಸನಗಳ ಮಿನಿಹಾಲ್, 1000  ಆಸನ ವ್ಯವಸ್ಥೆಯಿರುವ ಕಲ್ಯಾಣ ಮಂಟಪ ಮತ್ತು ಡೈನಿಂಗ್ ಹಾಲ್ ವ್ಯವಸ್ಥೆಯನ್ನು ಹೊಂದಿದೆ.  ಈ ಸಂಕೀರ್ಣವೂ ವಿಶಾಲವಾದ ಪಾರ್ಕಿಂಗ್ ಸೌಕರ್ಯ ಹೊಂದಿದ್ದು,ಇಲ್ಲಿ   ಸ್ವಚ್ಛತೆಗೆ ವಿಶೇಷ  ಆದ್ಯತೆ ನೀಡಲಾಗುತ್ತಿದೆ.

ಪುತ್ತೂರಿನ ಬೆಳವಣಿಗೆಗೆ ಪೂರಕವಾಗಿ ನಿರ್ಮಾಣಗೊಂಡಿರುವ ಅಕ್ಷಯ ಆರ್ಕೇಡ್ ಯಶಸ್ಸು ಕಾಣಲಿ ಎಂದು ಸಚಿವ ಕೋಟ ಶುಭ ಹಾರೈಸಿದರು ಬೆಂಗಳೂರು ಸೋಲೂರು ಮಠದ ಆರ್ಯ ಮಹಾಸಂಸ್ಥಾನದ ವಿಖ್ಯಾತನಂದ ಸ್ವಾಮೀಜಿಯವರು ನೂತನ ಸಂಕೀರ್ಣ ಉದ್ಘಾಟಿಸಿ ಸ್ವಪ್ರಯತ್ನ ಶ್ರದ್ಧೆಯ ಪ್ರಯತ್ನದಿಂದ ಯಶಸ್ಸು ಸಾಧ್ಯ ಅನ್ನುವುದನ್ನು ಜಯಂತ ನಡುಬೈಲು ಅವರು ತೋರಿಸಿಕೊಟ್ಟಿದ್ದಾರೆ ಎಂದರು ವಿಟ್ಲ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ  ಶ್ರೀ ಮಹಾಬಲ ಸ್ವಾಮೀಜಿ ಮಾತನಾಡಿ, ಇಚ್ಛಾಶಕ್ತಿ, ಕ್ರಿಯಾ, ಜ್ಞಾನ ಶಕ್ತಿಯಿಂದ ಯಶಸ್ಸು ಸಾಧ್ಯ ಎನ್ನುವುದಕ್ಕೆ ನಡುಬೈಲು ಅವರು ಉದಾಹರಣೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಜಯಂತ ನಡುಬೈಲು ಅವರು ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.ಕುಕ್ಕುಟೋದ್ಯಮದಲ್ಲಿ ಬಾರೀ ಯಶಸ್ವಿ ಗಳಿಸಿರುವ ನೂತನ ಸಂಕೀರ್ಣದ ಮಾಲಕ ಜಯಂತ್ ನಡುಬೈಲು ಅವರು  ಪ್ರಾಸ್ತವಿಕವಾಗಿ ಮಾತನಾಡಿ “ ಕೇವಲ ನೂರು ಕೋಳಿಗಳಿಂದ  ವ್ಯವಹಾರ ಜೀವನವನ್ನು ಆರಂಭಿಸಿದ ನಾನು ಇಂದು ಒಂದು  ಲಕ್ಷಕ್ಕೂ ಮಿಕ್ಕಿ ಕೋಳಿಗಳನ್ನು ಸ್ವತಃ ಉತ್ಪಾದನೆ ಮಾಡುತ್ತಿದ್ದೇನೆ . ಅಲ್ಲದೇ 150 ಕ್ಕೂ ಹೆಚ್ಚು  ಕೋಳಿ ಬೆಳೆಗಾರ ರೈತರ ಜತೆ  ಇಂಟಿಗ್ರೇಶನ್, ಕಾಂಟ್ರಾಕ್ಟ್ ಮಾಡಿಕೊಂಡು ಕೋಳಿಯನ್ನು ಉತ್ಫಾಧಿಸಲಾಗುತ್ತಿದೆ. ಕೆಲ ವರ್ಷಗಳ ಹಿಂದೆ ಆರಂಭಿಸಿದ ಅಕ್ಷಯ ಗ್ರೂಪ್‌ ಶಿಕ್ಷಣ ಸಂಸ್ಥೆಯೂ ಜಾಬ್ ಗ್ಯಾರಂಟಿ ವಿಜ್ಞಾನ ಹಾಗೂ ವಾಣಿಜ್ಯ ಕೋರ್ಸ್‌ಗಳನ್ನು ನಡೆಸುತ್ತಿದ್ದೂ ವಿದ್ಯಾರ್ಥಿಗಳ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ರೀತಿ ಈ ನೂತನ ಅರ್ಕೇಡ್‌ ಗೂ ಗ್ರಾಹಕರ ಪ್ರೀತಿ ವಿಶ್ವಾಸ ಸಿಗಲಿ ಎಂದು ಹೇಳಿದರು.

 
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಕೆದಂಬಾಡಿ ಗ್ರಾ. ಪಂ.ಅಧ್ಯಕ್ಷ ರತನ್, ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಬ್ರಹಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ತಾಲೂಕು ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಸಂಪ್ಯ ಠಾಣೆಯ ಠಾಣಾಧಿಕಾರಿ ಎಂ. ವೈ. ಉದಯರವಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ| ರಾಜಾರಾಂ ಕೆ.ಬಿ, ಉದ್ಯಮಿ ಕೆ. ಸಿ. ಸಾದಿಕ್, ಪುತ್ತೂರು ರೋಟರಿ ಪೂರ್ವ ಅಧ್ಯಕ್ಷ ಪುರಂದರ ರೈ, ಕುಂಬ್ರ ಶ್ರೀರಾಮ ಭಜನ ಮಂದಿರದ ಅಧ್ಯಕ್ಷ ಬಾಬು ಪೂಜಾರಿ ಬಡಕ್ಕೋಡಿ, ಡಾ| ಯು. ಪಿ.ಶಿವಾನಂದ, ಅಕ್ಷಯ ಗ್ರೂಪ್‌ನ ಕಲಾವತಿ ಜಯಂತ್ ಉಪಸ್ಥಿತರಿದ್ದರು.

ಈ ಸಂದರ್ಭ ಉದ್ಯಮಿ ಸಂತೋಷ್ ಕುಮಾರ್ ಕೊಟ್ಟಿಂಜ ಅವರನ್ನು ಸಮ್ಮಾನಿಸಲಾಯಿತು. ಶಶಿಧರ್ ಕಿನ್ನಿಮಜಲು ಮತ್ತು ಭವ್ಯಶ್ರೀ ಕೋಟ್ಯಾನ್ ನಿರೂಪಿಸಿದರು.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್