Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಕಾರು ಅಪಘಾತವಾದರು, ಬೆಳಿಗ್ಗೆ ಮನೆಯಲ್ಲಿ ಸಾರ್ವಜನಿಕರ ಭೇಟಿಗೆ ಹಾಜರ್- ಇದು ಕೋಟಾ ಶ್ರೀನಿವಾಸ ಪೂಜಾರಿಯವರ ಪವರ್

27 Nov 2023
ಕಾರು ಅಪಘಾತವಾದರು, ಬೆಳಿಗ್ಗೆ ಮನೆಯಲ್ಲಿ ಸಾರ್ವಜನಿಕರ ಭೇಟಿಗೆ ಹಾಜರ್- ಇದು ಕೋಟಾ ಶ್ರೀನಿವಾಸ ಪೂಜಾರಿಯವರ ಪವರ್
Advertiser
Advertisement · 728×90 px

ರಾತ್ರಿ ಬೆಂಗಳೂರಿನಲ್ಲಿ ಕಾರು ಅಪಘಾತ, ಬೆಳಿಗ್ಗೆ ಮನೆಯಲ್ಲಿ ಸಾರ್ವಜನಿಕರ ಭೇಟಿಗೆ ಹಾಜರ್-ಇದು ಕೋಟಾ ಶ್ರೀನಿವಾಸ ಪೂಜಾರಿಯವರ ಪವರ್

ಇತ್ತೀಚಿಗೆ ಖ್ಯಾತ ಮಹರ್ಷಿ ಆನಂದ ಗುರೂಜಿಯವರು ಕೋಟ ಶ್ರೀನಿವಾಸ ಪೂಜಾರಿಯವರ ಬಗ್ಗೆ ಒಂದು ಮಾತು ಹೇಳಿದ್ದರು. "ಬೆಳಿಗ್ಗೆ ಎದ್ದು ಸಚಿವರ ಮನೆಯ ಮುಂದೆ ಹೋದರೆ ಅಲ್ಲಿರುವ ಜನರ ಜಂಗುಳಿಯೇ ಅವರ ಕಾರ್ಯವೈಖರಿಯನ್ನು ಸಾರುತ್ತದೆ.

ಇಂತಹ ಸಚಿವರು ಟಾರ್ಚ್ ಹಾಕಿ ಹುಡುಕಿದರೂ ಸಿಗಲ್ಲ" ಎಂದು. ಈ ಬಾರಿ ಒಂದು ಅಹಿತಕರ ಘಟನೆಯೊಂದಿಗೆ ಅದು ಮತ್ತೆ ಸಾಬೀತಾಗಿದೆ. ನಿನ್ನೆ ಬೆಂಗಳೂರಿನಲ್ಲಿ ಅವಿರತ ಸರ್ಕಾರಿ ಸಭೆಗಳನ್ನು ಮುಗಿಸಿ ಊರಿನತ್ತ ಪ್ರಯಾಣ ಬೆಳೆಸುತ್ತಿರುವ ಸಂದರ್ಭದಲ್ಲಿ ತಮ್ಮ ಕಾರು ಅಪಘಾತಕ್ಕೀಡಾಗಿತ್ತು. ಅಪಘಾತ ಎಂದಮೇಲೆ ಅಲ್ಲಿ ನಂತರ ನಡೆಯುವ ಬೆಳವಣಿಗಳು ಗೊತ್ತೇ ಇದೆ. ‌ಪ್ರಕರಣ, ಸಮಾಧಾನ ಅದು ಇದು ಎಂದು ಕೆಲವೊಂದು ಫಾರ್ಮಲಿಟೀಸ್ ಇದೆ. ಎಲ್ಲಾ ಮುಗಿಸಿ ಬೇರೆ ಕಾರು ತರಿಸಿ ಕೋಟಾ ದ ತಮ್ಮ ಮನೆಗೆ ತಲುಪುವಾಗ ಮುಂಜಾನೆ 4 ಗಂಟೆ.

ಇಂದಿನ ದಿನಚರಿಯಲ್ಲಿ ಮನೆಯಲ್ಲಿ ಸಾರ್ವಜನಿಕ ಭೇಟಿ ಎಂದಿತ್ತು. ಬಹುಶಃ ಎಲ್ಲರೂ ಇದು ಅಸಾಧ್ಯ ಎಂದೆನಿಸಿರಬಹುದು.ಆದರೆ ಅವರು ಅದನ್ನೂ ಸಾಧಿಸಿ ತೋರಿಸಿದ್ದಾರೆ. ತಮ್ಮ ವೇಳಾಪಟ್ಟಿಯಂತೆ ಬೆಳಿಗ್ಗೆ 7 ಗಂಟೆಗೆ ಸಾರ್ವಜನಿಕರ ಭೇಟಿಗೆ ಹಾಜರಾಗಿದ್ದಾರೆ. 10 ಗಂಟೆಗೆ ಮಲಗಿ 7 ಗಂಟೆಗೆ ಏಳಲೂ ಕಷ್ಟವಾಗುವ ಈಗಿನ ಕಾಲದಲ್ಲಿ ಪ್ರತಿದಿನ ತಡರಾತ್ರಿ ಮಲಗಿ ಬೆಳಗೆದ್ದು ಸಾರ್ವಜನಿಕರ ಸಮಸ್ಯೆ ಆಲಿಸುವ ಸಚಿವರು ವಿಶೇಷವಾಗಿಯೇ ಕಾಣುತ್ತಾರೆ. ರಾಜ್ಯದಲ್ಲಿ ಅದೆಷ್ಟೇ ಸಜ್ಜನ ಸಚಿವರು ಇರಬಹುದು.

ಆದರೆ ಕೋಟ ಶ್ರೀನಿವಾಸ ಪೂಜಾರಿ ಎಲ್ಲರಿಗಿಂತಲೂ ಭಿನ್ನ ಅವರಿಗೆ ಅವರೇ ಸಾಟಿ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್