Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಏರ್ ಇಂಡಿಯಾದ 4,500 ನೌಕರರ ಸ್ವಯಂ ನಿವೃತ್ತಿ: ಹೊಸ ವ್ಯವಸ್ಥೆ ರೂಪಿಸೋದಕ್ಕೆ ಟಾಟಾ ಕಂಪನಿ ಮಾಡ್ತಿರೋದೇನು..?

27 Nov 2023
ಏರ್ ಇಂಡಿಯಾದ 4,500 ನೌಕರರ ಸ್ವಯಂ ನಿವೃತ್ತಿ: ಹೊಸ ವ್ಯವಸ್ಥೆ ರೂಪಿಸೋದಕ್ಕೆ ಟಾಟಾ ಕಂಪನಿ ಮಾಡ್ತಿರೋದೇನು..?
Advertiser
Advertisement · 728×90 px

ಏರ್‌ ಇಂಡಿಯಾದಲ್ಲಿ ಹೊಸ ಪ್ರತಿಭೆಗಳಿಗಳಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಟಾಟಾ ಗ್ರುಪ್‌ ಜೂನ್‌ 1ರಂದು ಸ್ವಯಂನಿವೃತ್ತಿ ಯೋಜನೆಯನ್ನು (VRS) ಪರಿಚಯಿಸಿದೆ. ಇದರಡಿಯಲ್ಲಿ ಸುಮಾರು 4,500 ಉದ್ಯೋಗಿಗಳು ನಿವೃತ್ತಿ ಆಯ್ದುಕೊಂಡಿದ್ದಾರೆಎಂದು ವರದಿಗಳು ಹೇಳಿವೆ. ಹೆಚ್ಚುವರಿಯಾಗಿ, ಮುಂದಿನ ಎರಡು ವರ್ಷಗಳಲ್ಲಿ ಇನ್ನೂ 4,000 ಜನರು ಕಂಪನಿಯಿಂದನಿವೃತ್ತರಾಗುತ್ತಾರೆ ಎನ್ನಲಾಗಿದೆ.

ಕೆಲ ವರದಿಗಳ ಪ್ರಕಾರ ಕಂಪನಿಯ ಉತ್ಪಾದಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಹಳೇ ವ್ಯವಸ್ಥೆಗಳನ್ನು ಡಿಜಿಟಲೀಕರಣಗೊಳಿಸಿಪುನರುಜ್ಜೀವನಗೊಳಿಸಲಾಗುತ್ತಿದೆ. ಅಲ್ಲದೇ ಹೊಸ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಟಾಟಾ ಗ್ರುಪ್‌ ಮೆಟ್ರೋ ನಗರಗಳಲ್ಲಿನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿದೆ. ತನ್ನ ಹಾರಾಟ ಸಾಮರ್ಥ್ಯವನ್ನು ನವೀಕರಿಸಲು ಏರ್‌ಬಸ್ A350 ಜೆಟ್‌ಗಳು ಮತ್ತುಬೋಯಿಂಗ್‌ನ ಕಿರಿದಾದ ದೇಹದ ವಿಮಾನಗಳನ್ನು ಖರೀದಿಸಲು ಕಂಪನಿ ಯೋಚಿಸುತ್ತಿದೆ ಎನ್ನಲಾಗಿದೆ.

ಏರ್ ಇಂಡಿಯಾವು ಕಾಲ್ ಸೆಂಟರ್‌ಗಳು, ವೆಬ್‌ಸೈಟ್ ಮತ್ತು ಗ್ರಾಹಕರ ಅನುಭವವನ್ನು ನಿರ್ವಹಿಸಲು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಮತ್ತು ಟಾಟಾ ಡಿಜಿಟಲ್ ಸೇರಿದಂತೆ ಟಾಟಾ ಗ್ರೂಪ್ ಕಂಪನಿಗಳಿಂದ ಜನರನ್ನು ನೇಮಿಸಿಕೊಳ್ಳುತ್ತಿದೆ. ಇದುಕಾರ್ಯಗತಗೊಳಿಸುವಿಕೆ ಮತ್ತು ಗ್ರಾಹಕ ಸೇವೆಯನ್ನು ಸುಧಾರಿಸುವ ಕೆಲಸ ಮಾಡುತ್ತಿದೆ ಎಂದು ವರದಿಗಳು ಹೇಳಿವೆ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್