Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಎಂಆರ್‌ಪಿಎಲ್ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ವಿವೇಕ್‌ರಾಜ್ ಪೂಜಾರಿ

27 Nov 2023
ಎಂಆರ್‌ಪಿಎಲ್ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ವಿವೇಕ್‌ರಾಜ್ ಪೂಜಾರಿ
Advertiser
Advertisement · 728×90 px

ಮಂಗಳೂರು: ಎಂಆರ್‌ಪಿಎಲ್ ಸಂಸ್ಥೆಯು ಉದ್ಯೋಗ ನೀಡುವಲ್ಲಿ ಸ್ಥಳೀಯರಿಗೆ ಮಾಡಿರುವ ಅನ್ಯಾಯವನ್ನು ಜಿಲ್ಲೆಯ ಪ್ರತಿಯೊಬ್ಬರೂ ಖಂಡಿಸಬೇಕು ಹಾಗೂ ಅದರ ವಿರುದ್ಧ ಜಾತಿ, ಮತ, ರಾಜಕೀಯ ಭೇದ ಮರೆತು ಪ್ರಬಲ ಹೋರಾಟ ಸಂಘಟಿಸಬೇಕು ಎಂದು ಕಾಂಗ್ರೆಸ್‌ನ ಯುವ ನಾಯಕ ಹಾಗೂ ಪನಾಮ ಸಂಸ್ಥೆಯ ಮುಖ್ಯಸ್ಥ ವಿವೇಕ್‌ರಾಜ್ ಪೂಜಾರಿ ಹೇಳಿದ್ದಾರೆ.ಎಂಆರ್‌ಪಿಎಲ್ ಮಾಡಿರುವ ಅನ್ಯಾಯ ಇಡೀ ಜಿಲ್ಲೆಗೆ ಅವಮಾನವಾಗಿದೆ. ತುಳುನಾಡಿನವರೆಲ್ಲರೂ ಸಂಘಟಿತವಾದ ಹೋರಾಟ ನಡೆಸಿದರೆ ಇದರ ವಿರುದ್ಧ ಗೆಲುವು ಸಾಧಿಸಿ ನಮ್ಮವರಿಗೆ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಿದೆ. ನಾವು ಜಿಲ್ಲೆಯ ವರು ಮತ್ತು ಸ್ಥಳೀಯರು ಎಂಬ ಒಂದೇ ಬ್ಯಾನರ್‌ನಡಿಯಲ್ಲಿ ಈ ಹೋರಾಟ ನಡೆಸಬೇಕು. ನಮ್ಮ ನಡುವೆ ಆರೋಪ - ಪ್ರತ್ಯಾರೋಪ ಮಾಡದೆ ಒಗ್ಗಟ್ಟಿನಿಂದ ಎಂಆರ್‌ಪಿಎಲ್ ವಿರುದ್ಧ ಹೋರಾಡಿ ಜಯ ಸಾಧಿಸಿ ನಮ್ಮ ಶಕ್ತಿಯನ್ನು ತೋರಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ವಿವೇಕ್‌ರಾಜ್ ಪೂಜಾರಿ ಸಾಮಾಜಿಕ ಕಳಕಳಿ ಹೊಂದಿರುವ ಯುವ ನಾಯಕ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ಸಾಕಷ್ಟು ಸಹಾಯ ಮಾಡುತ್ತಾ ಸಾಮಾಜಿಕ ಬದ್ಧತೆಯನ್ನು ಮೆರೆದಿರುವ ಇವರು ಜನಪರ ವಿಷಯಗಳ ಮೂಲP ಸದಾ ಸುದ್ದಿಯಲ್ಲಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುವುದೇ ನಿಜವಾದ ಸಮಾಜಸೇವೆ ಎಂದು ಹೇಳುವ ಅವರು ನುಡಿದಂತೆ ನಡೆಯುವವರೂ ಆಗಿದ್ದಾರೆ. ಇವರು ಎಂಆರ್‌ಪಿಎಲ್ ವಿರುದ್ಧ ದನಿ ಎತ್ತಿರುವುದು ಒಂದು ದೊಡ್ಡ ಹೋರಾಟಕ್ಕೆ ಮುನ್ನುಡಿಯಾಗುವ ಸಾಧ್ಯತೆಯಿದೆ. ಇದರಲ್ಲಿ ಅವರ ಕೈಗಳನ್ನು ನಾವೆಲ್ಲರೂ ಗಟ್ಟಿಗೊಳಿಸಬೇಕಾಗಿದೆ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್