Billava Warriors – Billava News Portal
Wednesday, 28 October 2026
General News

ಉದಯ ಪೂಜಾರಿ ಅವರಿಗೆ ಅ.ಭಾ. ಹಿಂದೂ ಮಹಾ ಸಭಾ ದ.ಕ ಜಿಲ್ಲಾ ಘಟಕದ ವತಿಯಿಂದ ಅಭಿನಂದಿಸಲಾಯಿತು.

27 Nov 2023
ಉದಯ ಪೂಜಾರಿ ಅವರಿಗೆ  ಅ.ಭಾ. ಹಿಂದೂ ಮಹಾ ಸಭಾ ದ.ಕ ಜಿಲ್ಲಾ ಘಟಕದ ವತಿಯಿಂದ  ಅಭಿನಂದಿಸಲಾಯಿತು.

ದಕ್ಷಿಣ ಕನ್ನಡದ ಮಂಗಳೂರಿನ ಲೇಡಿಹಿಲ್ ವೃತ್ತದ ಹೆಸರನ್ನು ತೆಗೆದು ಹಾಕಿ ಅಲ್ಲಿಗೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ಮರುನಾಮಕರಣ ಮಾಡುವಲ್ಲಿ ಪ್ರಾಮಾಣಿಕವಾಗಿ ಸತತ ಪ್ರಯತ್ನ ಪಟ್ಟು ಹೋರಾಟ ನಡೆಸಿದ
ಬಿರುವೆರ್ ಕುಡ್ಲ ಫ್ರೆಂಡ್ಸ್ ಬಲ್ಲಾಳ್ ಬಾಗ್ (ರಿ) ಇದರ ಅಧ್ಯಕ್ಷರಾದ ಶ್ರೀಯುತ ಉದಯ ಪೂಜಾರಿ ಅವರಿಗೆ
ಅ.ಭಾ. ಹಿಂದೂ ಮಹಾ ಸಭಾ ದ.ಕ ಜಿಲ್ಲಾ ಘಟಕದ ವತಿಯಿಂದ
ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಘಟಕ ಅಧ್ಯಕ್ಷ ಡಾ. ಎಲ್ .ಕೆ ಸುವರ್ಣ
"ಬಿರುವೆರ್ ಕುಡ್ಲ ಫ್ರೆಂಡ್ಸ್ ಬಳ್ಳಾಲ್ಬಾಗ್ (ರಿ) ಇವರ ಕಾರ್ಯ ಶ್ಲಾಘನೀಯ.
ಮಾತ್ರವಲ್ಲದೆ ಕೆಲವು ಸ್ವಯಂ ಘೋಷಿತ ವ್ಯಕ್ತಿಗಳು ನಮ್ಮಿಂದ ಹೆಸರು ಬದಲಾವಣೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರು ..
ಬ್ರಿಟಿಷರು ಇಟ್ಟ ಲೇಡಿಹಿಲ್ ವೃತ್ತ ಎಂಬ ಹೆಸರನ್ನು ತೆಗೆದುಹಾಕಿ
" ಬ್ರಹ್ಮಶ್ರೀ ನಾರಯಣ ಗುರು ವೃತ್ತ" ಎಂದು ಮರುನಾಮಕರಣ ಮಾಡಿದ ಕೀರ್ತಿ ಶ್ರೀ ಉದಯ ಪೂಜಾರಿ ಬಿರುವೆರ್ ಕುಡ್ಲ ಫ್ರೆಂಡ್ಸ್ ಬಳ್ಳಾಳ್ಬಾಗ್ (ರಿ) ಮತು ಇದರ ಪದಾಧಿಕಾರಿಗಳಿಗೆ ಸಲ್ಲುತ್ತದೆ " ಎಂದು ಹೇಳಿ ಶುಭ ಹಾರೆೃಸಿದರು..
ಇದಕ್ಕೆ ಸಹಕರಿಸಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಪಾಲಿಕೆ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು...

ಈ ಕಾರ್ಯಕ್ರಮದಲ್ಲಿ
ಹಿಂದೂ ಮಹಾಸಭಾ
ರಾಜ್ಯ ಉಪಾಧ್ಯಕ್ಷ
ಪ್ರಮೋದ್ ಬಲ್ಲಾಳ್ಬಾಗ್,

ರಾಜ್ಯ ಪ್ರಭಾರಿ ರಾಜೇಶ್ ಪೂಜಾರಿ

ಆರ್ಯ ಲೋಕಾನಂದ

ಹಿಂದೂ ಮಹಾಸಭಾ ದ.ಕ ಜಿಲ್ಲಾ ಅಧ್ಯಕ್ಷ
ಲೋಕೇಶ್ ಉಳ್ಳಾಲ್,

ಹಿಂದೂ ಮಹಾಸಭಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ
ನಾಗೇಶ್ ತಡಂಬ್ಯೆಲ್ ,

ಹಿಂದೂ ಮಹಾಸಭಾ ಮಂಗಳೂರು
ದಕ್ಷಿಣ ವಿಧಾನಸಭಾ ಕ್ಷೇತ್ರ
ಪ್ರಧಾನಕಾರ್ಯದರ್ಶಿ
ನಾಗರಾಜ್ ಕೊಡಿಕಲ್,

ದ.ಕ ಜಿಲ್ಲಾ ಯುವ ಘಟಕ ಅಧ್ಯಕ್ಷ
ಚಿದಂಬರ ರಾವ್,

ಹಾಗೂ
ಪ್ರಶಾಂತ್ ಆಚಾರ್ಯ,
ಪವನ್ ಆಚಾರ್ಯ ಮೊದಲಾದವರು ಉಪಸ್ಥಿತಿಯಲ್ಲಿದ್ದರು...

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್