Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಇನ್ನು ಮುಂದೆ ಚೀನಾಗೆ ಸರಿಸಮನಾಗಿ ಭಾರತದಿಂದಲೇ ರವಾನೆಯಾಗಲಿದೆ ಆಪಲ್‌ ಐಫೋನ್‌

27 Nov 2023
ಇನ್ನು ಮುಂದೆ ಚೀನಾಗೆ ಸರಿಸಮನಾಗಿ ಭಾರತದಿಂದಲೇ ರವಾನೆಯಾಗಲಿದೆ ಆಪಲ್‌ ಐಫೋನ್‌
Advertiser
Advertisement · 728×90 px

ಐಫೋನ್‌ ಎಂಬ ಅಮೆರಿಕದ ಉತ್ಪನ್ನ ಜಾಗತಿಕವಾಗಿ ಪ್ರತಿಷ್ಠೆಯ ವಿಷಯವಾಗಿರುವುದು ಗೊತ್ತೇ ಇದೆ. ಇದನ್ನು ಹೆಚ್ಚಿನಪ್ರಮಾಣದಲ್ಲಿ ಚೀನಾ ತಯಾರು ಮಾಡುತ್ತದೆ. ಚೀನಾದಲ್ಲಿ ಹೆಚ್ಚಿನ ಐಫೋನ್‌ ಕಂಪನಿಗಳಿವೆ. ಭಾರತದಲ್ಲೂ ಕೂಡ ಐಫೋನ್‌ಉತ್ಪಾದನಾ ಪಾಲುದಾರ ಫಾಕ್ಸ್‌ಕಾನ್‌ ಅದನ್ನು ತಯಾರಿಸುತ್ತಿದೆ. ಆದರೆ ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಚೀನಾದಿಂದ ಜಗತ್ತಿನಮಾರುಕಟ್ಟೆಗೆ ರವಾನೆಯಾಗುವ ಐಫೋನ್‌ ಗಳ ಸಂಖ್ಯೆಗೆ ಸರಿಸಮನಾಗಿ ಭಾರತದಲ್ಲಿ ಉತ್ಪಾದನೆಯಾದ ಐಫೋನ್‌ ಗಳನ್ನುಜಗತ್ತಿನ ಮಾರುಕಟ್ಟೆಗೆ ರವಾನಿಸುವಷ್ಟರ ಮಟ್ಟಿಗೆ ಭಾರತದ ಬೆಳೆದು ನಿಂತಿದೆ.ಈ ಹಿನ್ನೆಲೆಯಲ್ಲಿ ಜಾಗತಿಕ ಟೆಕ್‌ ದಿಗ್ಗಜ ಆಪಲ್‌ ತನ್ನ ಹೊಸ ಐಫೋನ್‌ ಆವೃತ್ತಿಯನ್ನು ಚೀನಾಗೆ ಸರಿಸಮನಾಗಿ ಭಾರತದಿಂದಲೇರವಾನಿಸಲು ಸಜ್ಜಾಗಿದೆ. . ಇದಕ್ಕೆ ಪೂರಕವೆಂಬಂತೆ ಪ್ರಮುಖ ಸೆಕ್ಯುರಿಟೀಸ್ ವಿಶ್ಲೇಷಕ, ಮಿಂಗ್ ಚಿ ಕುವೊ ಅವರು ತಮ್ಮ ಟ್ವೀಟ್ವರ್ನಲ್ಲಿ “ಫಾಕ್ಸ್‌ಕಾನ್ ಶೀಘ್ರದಲ್ಲೇ ಚೀನಾದೊಂದಿಗೆ ಏಕಕಾಲದಲ್ಲಿ ಭಾರತದಿಂದ ಇತ್ತೀಚಿನ ಆವೃತ್ತಿಯ ಐಫೋನ್‌ಗಳನ್ನು ರವಾನಿಸಲುಪ್ರಾರಂಭಿಸಬಹುದು” ಎಂದಿದ್ದಾರೆ. ಮುಂದುವರೆದು “ಇತ್ತೀಚಿನ ಸಮೀಕ್ಷೆಯು ಭಾರತದಲ್ಲಿನ ಫಾಕ್ಸ್‌ಕಾನ್‌ನ ಐಫೋನ್ ಉತ್ಪಾದನಾಸೈಟ್ ಹೊಸ 6.1 ಐಫೋನ್ 14 ಅನ್ನು 2H22 ನಲ್ಲಿ ಮೊದಲ ಬಾರಿಗೆ ಚೀನಾದೊಂದಿಗೆ ಏಕಕಾಲದಲ್ಲಿ ಸಾಗಿಸುತ್ತದೆ ಎಂದುಸೂಚಿಸುತ್ತದೆ” ಎಂದಿದ್ದಾರೆ.

ಕೆಲ ವರದಿಗಳ ಪ್ರಕಾರ ಆಪಲ್‌ ಕಂಪನಿಯು ಮುಂದಿನ ಪ್ರಮುಖ ಬೆಳವಣಿಗೆಯ ಚಾಲಕನಾಗಿ ಭಾರತವನ್ನು ನೋಡುತ್ತಿದ್ದು ಈಬೆಳವಣಿಗೆಯು ಚೈನೀಸ್ ಅಲ್ಲದ ಐಫೋನ್ ಉತ್ಪಾದನಾ ತಾಣವನ್ನು ನಿರ್ಮಿಸುವಲ್ಲಿ ಆಪಲ್‌ಗೆ ಪ್ರಮುಖ ಮೈಲಿಗಲ್ಲಾಗಿಪರಿಣಮಿಸಲಿದೆ.. ತನ್ನ ಪೂರೈಕೆಯ ಮೇಲೆ ಜಾಗತಿಕ ರಾಜಕೀಯ ಪರಿಣಾಮಗಳನ್ನು ಕಡಿಮೆ ಮಾಡಲು ಆಪಲ್‌ ಪ್ರಯತ್ನಿಸುತ್ತಿದ್ದುಮುಂದಿನ ಮಾರುಕಟ್ಟೆ ಚಾಲಕನಾಗಿ ಭಾರತವನ್ನು ಅದು ಎದುರು ನೋಡುತ್ತಿದೆ ಎಂದು ಮಿಂಗ್ ಚಿ ಕುವೊ ಕೂಡ ಟ್ವೀಟ್‌ಮಾಡಿದ್ದಾರೆ.

Apple 2017 ರಲ್ಲಿ iPhone SE ಯೊಂದಿಗೆ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿತು. ಇದು ಪ್ರಸ್ತುತ iPhone 11, iPhone 12, ಮತ್ತು iPhone 13 ಸೇರಿದಂತೆ ಭಾರತದಲ್ಲಿ ತನ್ನ ಕೆಲವು ಅತ್ಯಾಧುನಿಕ ಐಫೋನ್‌ಗಳನ್ನು ತಯಾರಿಸುತ್ತಿದೆ. ಭಾರತದಲ್ಲಿ ಸುಮಾರು 20 ವರ್ಷಗಳ ಇತಿಹಾಸವನ್ನು ಆಪಲ್‌ ಹೊಂದಿದ್ದು 2020ರಲ್ಲಿ ಮೊದಲ ಆಪಲ್‌ ಆನ್‌ ಲೈನ್ ಸ್ಟೋರ್‌ಅನ್ನು ತೆರೆದಿದ್ದು ಮುಂದಿನ ದಿನಗಳಲ್ಲಿ ದೇಶದಲ್ಲಿ ಹೆಚ್ಚಿನ ಆನ್‌ ಲೈನ್‌ ಸ್ಟೋರ್‌ ಗಳನ್ನು ತೆರೆಯಲು ಕಂಪನಿ ಯೋಚಿಸುತ್ತದೆ ಎಂದುಕೆಲ ವರದಿಗಳು ಹೇಳಿವೆ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್