Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಅಳಿವಿನಿಂದ ಉಳಿವಿನೆಡೆಗೆ - ರಶ್ಮಿ ಸನಿಲ್

27 Nov 2023
ಅಳಿವಿನಿಂದ ಉಳಿವಿನೆಡೆಗೆ - ರಶ್ಮಿ ಸನಿಲ್
Advertiser
Advertisement · 728×90 px

ಪ್ರತಿಯೊಂದು ಜೀವಿಯೂ ಈ ಸೃಷ್ಟಿಯ ಕೂಸು. ಬುದ್ಧಿಜೀವಿ ಮಾನವನಿಂದ ಹಿಡಿದು ಇತರ ಕೋಟ್ಯಾಂತರ ಜೀವ-ಜಂತುಗಳವರೆಗೆ, ಒಂದನ್ನೊಂದು ಅನುಸರಿಸಿಯೇ ಬಾಳುವುದು ಈ ಸೃಷ್ಟಿಯ ಮೂಲಭೂತ ಸಹಕಾರ ತತ್ವ. ಆದರೆ ಮಾನವ ತನ್ನ ಹಣದ ಹಸಿವಿಗಾಗಿ ಉಸಿರನ್ನು ಕೊಡುವ ಗಿಡ-ಮರಗಳನ್ನು ನಶಿಸಿ, ತನ್ನ ಕಾಲಿಗೆ ತಾನೇ ಕೊಡಲಿ ಏಟು ಹಾಕಿಕೊಂಡಿದ್ದಾನೆ.

ಇದರಿಂದಾಗಿ ಎಷ್ಟೋ ಪ್ರಾಣಿ ಸಂಕುಲಗಳು ಅಳಿವಿನ ಅಂಚಿನಲ್ಲಿವೆ. "ಹಸಿರೇ ಉಸಿರು" ಅನ್ನುವುದನ್ನು ಮರೆತು, ಉಸಿರನ್ನು ಕೊಂದು ಹಸಿವನ್ನು ನೀಗಿಸಲು ಹೊರಟಂತಿದೆ ಆತನ ಪರಿಸ್ಥಿತಿ. ಜಾಗತಿಕ ತಾಪಮಾನವೂ ವಿನಾಶದ ಅಂಚಿಗೆ ಕಾರಣವಾಗಿದೆ. ಈ ಶತಮಾನದ ಅಂತ್ಯದ ವೇಳೆಗೆ ಭೂಮಿಯ ಉಷ್ಣಾಂಶ ೪ ಡಿಗ್ರಿಯಷ್ಟು ಹೆಚ್ಚಾಗುತ್ತದೆಯೆಂದು ವಿಜ್ಞಾನಿಗಳು ಹಾಗೂ ವಿಶ್ವಸಂಸ್ಥೆಯ ವಾಯುಗುಣ ಬದಲಾವಣೆ ಕುರಿತಾದ ಅಂತರರಾಷ್ಟ್ರೀಯ ಸಂಸ್ಥೆಯು ತಿಳಿಸಿದೆ. ಆದರೆ, ಉಷ್ಣಾಂಶ ಇನ್ನೆರಡು ಡಿಗ್ರಿಯಷ್ಟು ಹೆಚ್ಚಾದರೂ ಮನುಷ್ಯರು ಬದುಕುವುದೂ ಕೂಡ ದುಸ್ತರ.

ಇಡೀ ಜೈವಿಕ ವ್ಯವಸ್ಥೆ ಹಾಳಾದ ಬಳಿಕವೂ ತಾನು ಉಳಿಯುತ್ತೇನೆ ಅನ್ನೋದು ಕೇವಲ ಭ್ರಮೆ. ನಮ್ಮ ಸಾವಿಗೆ ನಾವೇ ಮುನ್ನುಡಿ ಬರೆದಂತೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮ್ಮ ದುರಾಸೆಗಳಿಗೆ ಕಡಿವಾಣ ಹಾಕಿ, ಜೀವಿಗಳ ಅಳಿವು ಉಳಿವಿನ ಮಹತ್ವ ಹಾಗೂ ಪ್ರಕೃತಿಯ ಸಮತೋಲನದ ಅಗತ್ಯದ ಬಗ್ಗೆ ಅರಿತುಕೊಂಡು, ಪರಿಸರ ಸಂರಕ್ಷಣೆಯಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಳ್ಳೋಣ.

✍️ರಶ್ಮಿ ಸನಿಲ್
(ರಶ್ಮಿತಾ ಮಂಗಳೂರು)
ಲೆಕ್ಕ ಪರಿಶೋಧಕಿ

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್