Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಅಮ್ಮ ಹಚ್ಚಿದ ದೀಪಾವಳಿಯ ಹಣತೆ..!! ಬರಹ: ವಿಜೇತ್ ಪೂಜಾರಿ ಶಿಬಾಜೆ

27 Nov 2023
ಅಮ್ಮ ಹಚ್ಚಿದ ದೀಪಾವಳಿಯ ಹಣತೆ..!!  ಬರಹ: ವಿಜೇತ್ ಪೂಜಾರಿ ಶಿಬಾಜೆ
Advertiser
Advertisement · 728×90 px

ಬೆಳಗ್ಗೆ ಮಾಡಿದ್ದ ಒಣಗಿದ ರೊಟ್ಟಿಯ ತುಂಡನ್ನು ಸೂರ್ಯ ಇನ್ನೇನೋ ಮುಳುಗುವ ಹಂತಕ್ಕೆ ಬಂದಿದ್ದಾನೆ ಎನ್ನುವ ಅವಸರದಲ್ಲಿ ಕೈಯಲ್ಲಿ ಹಿಡಿದ ಮಗ,ಅದರ ಜೊತೆಗೆ ಬಿಟ್ಟು ಬಿಡದ ಹಾಳಾದ ತಲೆ ನೋವಿಗೆ ಇಳಿ ಸಂಜೆ ಮೂರರ ಹೊತ್ತಿಗೆ ಮಾಡಿದ ತಾಯಿಯ ಕರಿ "ಟೀ"ಯ ಉಳಿದ ಒಂದಿಷ್ಟನ್ನೂ ಕುಡಿಯುತ್ತಾ, ಸೊಟ್ಟಗಿನ ಪಾತ್ರೆಯ ತಳದಲ್ಲಿ ಇದ್ದ ಟೀ ಪುಡಿಯನ್ನು ಬಾಯಿಯಿಂದ ಉಫ್ ಉಫ್ ಎಂದು ಬದಿಗೆ ಸರಿಸಿ ತುಂಡು ರೊಟ್ಟಿಯ ಒಂದು ಭಾಗವನ್ನು ಇನ್ನೇನು ಅದರಲ್ಲಿ ಅದ್ದಿ ಬಾಯಿಗಿಡಬೇಕು ಎನ್ನುವಷ್ಟರಲ್ಲಿ ಅದೇ ಮರುಗಿದ ಧ್ವನಿಯ ಲಯದಲ್ಲಿ ಒಳಗಿಂದ ಕೇಳಿದ ಆ ಮಾತಿಗೆ ಇದ್ದ ರೊಟ್ಟಿಯನ್ನು ಮೂಲೆಯಲ್ಲಿ ಅರ್ಧ ಕಬ್ಬಿನ ಸರಪಳಿ ಮತ್ತು ಗೋಣಿ ಚೀಲದಲ್ಲಿ ಮಾಡಿದ ಹಗ್ಗದಲ್ಲಿ ಬಂಧಿಯಾದ ಟಾಮಿಗೆ ಕೂತಲ್ಲಿಂದ ಎಸೆದು ಬಿಟ್ಟ,ಆ ರೊಟ್ಟಿಯ ತುಂಡು ಪಕ್ಕದಲ್ಲಿ ಬೀಳದೆ ತನ್ನ ಕಾಲು ಮತ್ತು ಕೈಯಿಂದ ಹೇಗೋ ಮಾಡಿ ಮಣ್ಣಿನ ಮುದ್ದೆಯ ಜೊತೆಗೆ ಆ ರೊಟ್ಟಿಯ ತುಂಡನ್ನು ತಿಂದು ಬಿಟ್ಟ..!

ಮತ್ತೇ ಆ ಧ್ವನಿ ಬಿರುಸಾಗಿತ್ತು..

"ನಮ ನರಮನಿ ಲೆಕಾ ಏಪಾ ಆಪನ"(ನಾವು ಯಾವಾಗ ಮನುಷ್ಯರಂತೆ ಆಗುತ್ತಿವೋ).

ಇತ್ತ ಮಗ ಚಂದು ಅದೇನೋ ಟಾಮಿಯನ್ನು ನೋಡುತ್ತಿರುವಾಗ ಮುಂದಿನ ವಾರ ದೀಪಾವಳಿ ಅಲ್ಲವ ಎಂದು ಒಂದು ಸಲ ಆಲೋಚಿಸಿ,ಅಮ್ಮನಲ್ಲಿ "ಅಮ್ಮ ಬರ್ಪುನ ವಾರ ಪರ್ಬ ಅತ"(ಮುಂದಿನ ವಾರ ದೀಪಾವಳಿ ಅಲ್ಲವೇ) ಎಂದು ಬಳಲಿದ ಧ್ವನಿಯಲ್ಲಿ ಇತ್ತ ಹೇಳದಂತೆಯು ಇತ್ತ ಕಡೆ ಕೇಳದಂತೆಯು ಹೇಳಿ ಬಚ್ಚಲು ಮನೆಗೆ ಬಿಸಿ ನೀರು ಕಾಯಿಸಲು ನಿನ್ನೆ ಇಟ್ಟ ಚಿಮಿಣಿ ದೀಪದ ಕಡೆ ಕೈಯಾಡಿಸಿ ಮಸಿ ಬಳಿದ ಆ ದೀಪವನ್ನು ಎತ್ತಿಕೊಂಡು ಹೊರ ನಡೆದನು ಚಂದು..!

ಇತ್ತ ಕಡೆ ಚಂದುನ ಅಮ್ಮ ಒಲೆಯ ಮೇಲೆ ಮೂಲೆಯಲ್ಲಿ ಇದ್ದ ಮಣ್ಣಿನ ಪಾತ್ರೆ ಮಸಿಯಿಂದ ಕಪ್ಪಾಗಿದ್ದನ್ನು ತೊಳೆಯಲು ಎಟುಗದ ಕೈಯಿಂದ ಹೇಗೋ ಕೆಳಗೆ ಇಳಿಸಿ ಹೊರ ನಡೆದಳು.

ಬಚ್ಚಲು ಮನೆ ದಾಟಿ ಸಾಗುವಾಗ "ಒಂದು ಸಿಹಿ ಮಾಡಲು ಒಂದು ಬೆಲ್ಲ ಕೂಡ ಇಲ್ಲಿ ಇಲ್ಲ" ಎಂದು ಗೊಣಗುತ್ತಾ ಹಳೆಯ ಕಲ್ಲಿನ ಮೆಟ್ಟಿಲನ್ನು ದಾಟಿ ತೋಟದ ತೊರೆಯತ್ತ ಸಾಗಿದಳು.ಇತ್ತ ಕಡೆ ಚಂದು ಆ ಮಣ್ಣಿನ ಮಡಿಕೆಯನ್ನು ನೋಡುತ್ತಾ,ಕಳೆದ ಬಾರಿ ಅಕ್ಕ ಗಂಡನ ಮನೆಯಿಂದ ಬಂದಾಗ ರಫೀಕಜ್ಜನ ಅಂಗಡಿಯಿಂದ ತಂದ ಆ ಮಡಿಕೆಯ ಪಾತ್ರೆಗಳು,ಅದರ ಜೊತೆಗೆ ಒಂದಿಷ್ಟೂ ತಂದ ದಿನಸಿಯ ಹಣವನ್ನು ಮೊನ್ನೆ ಮೊನ್ನೆ ಇದ್ದ ಕರಿ ಮೆಣಸನ್ನು ಮಾರಿ ಕೊಟ್ಟು ಬಂದಾಗ,ಕೋಪದಿಂದ ಅಜ್ಜ ಬಾಯಿಗೆ ಬಂದ ಹಾಗೆ ಬೈದು ನೀನು ಇನ್ನು ಇಲ್ಲಿಗೆ ಬರಬೇಡ ಅಂದದ್ದು ಕೂಡ ನೆನಪಾಗಿ ಹೋಯಿತು..!

ಇಂತಹ ಕಷ್ಟದಿಂದ ಇನ್ಯಾವಾಗ ನಾವು ಬರುತ್ತೇವೆ ಎನ್ನುತ್ತಾ,ಈ ದೀಪಾವಳಿಗೂ ಅಕ್ಕಾ ಬರುವಳು ಎನ್ನುವ ಮಾಹಿತಿಯನ್ನೂ ಮೊನ್ನೆ ಮೊನ್ನೆ ಪಕ್ಕದ ಮನೆಯ ಗೌಡರು ಹೇಳಿದ್ದು ನೆನಪಾಯಿತು.!( ಅಲ್ಲಿ ಮಾತ್ರ ದೂರವಾಣಿಯ ಸಂಪರ್ಕ ಇತ್ತು.)

ಇತ್ತ ಕಡೆ ತಾಯಿ ಆ ಪಾತ್ರೆಯನ್ನು ಮೊದಲಿನಂತೆ ಸ್ವಚ್ಚ ಮಾಡಿ ಸುಸ್ತಾದ ದೇಹದಿಂದ ಮೆಟ್ಟಿಲು ಹತ್ತುತ್ತಾ ಮನೆಯ ಒಳಗಡೆ ನಡೆದಳು.

ಯಾವುದೋ ವಸ್ತುವನ್ನು ಹುಡುಕುತ್ತಾ ಸಾಗಿದ ಚಂದುನ ಅಮ್ಮನಿಗೆ ಎಂದೋ ಇಟ್ಟಿದ್ದ "ಹಣತೆ"ಯ ಕಟ್ಟು ಧೋಪ್ಪನೆ ಕೆಳಗೆ ಬಿದ್ದು ಬಿಡ್ತು..!
ಅದರಲ್ಲಿ ಒಡೆಯದೆ ಇದ್ದ ಎರಡೂ ಮೂರು ಹಣತೆಯನ್ನು ತೆಗೆದು ದೇವರ ಪಟದ ಹತ್ತಿರ ಇದ್ದ ನಿನ್ನೆ ಉಳಿದ ಬತ್ತಿಯ ತುಂಡನ್ನು ತೆಗೆದು ಎಣ್ಣೆ ಹಾಕಿ ಹಣತೆಯನ್ನು ಹಚ್ಚಿ ಬಿಟ್ಟಳು..!

ಇತ್ತ ಚಂದು ಆ ಹಣತೆಯ ಬೆಳಕನ್ನು ನೋಡಿ ಏನೋ ಖುಷಿಯಾಗಿ "ಅಮ್ಮ ಹಚ್ಚಿದ ದೀಪಾವಳಿಯ ಹಣತೆ "ಎಂದುಕೊಂಡು,ತೋಟದ ಬದಿಯಲ್ಲಿ ನೆಟ್ಟಿದ್ದ ಮರ ಗೆಣಸು ಎರಡು ಮೂರು ದಿನದಿಂದ ಹಂದಿ ಮತ್ತು ಹೆಗ್ಗಣದ ಬಾಯಿಗೆ ತುತ್ತಾಗಿದ್ದನು ಬೆಳಗ್ಗೆ ಕಂಡಿದ್ದನು.

ಸಿಕ್ಕಿದಷ್ಟು ಸಿಗಲಿ ಎಂಬ ಭಾವದಿಂದ ಹಳೆಯ ಹಾರೆಯನ್ನು ಕೊಟ್ಟಿಗೆಯ ಮೇಲಿಂದ ತೆಗೆದು ಹೆಗಲಿಗೆ ಇರಿಸಿ ಇನ್ನೇನೋ ಕತ್ತಲೆ ಆಗಬೇಕು ಎನ್ನುವ ಸಮಯದಲ್ಲೇ ಹೊರ ನಡೆದನು..

ಬರಹ: ವಿಜೇತ್ ಪೂಜಾರಿ ಶಿಬಾಜೆ

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್