Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಅನಂತಾಡಿಯಲ್ಲಿ ಕುದ್ರೋಳಿ ಗುರು ಬೆಳದಿಂಗಳು ಸಂಘಟನೆಯಿಂದ ‘ಗುರುವನ’ ಲೋಕಾರ್ಪಣೆ

27 Nov 2023
ಅನಂತಾಡಿಯಲ್ಲಿ ಕುದ್ರೋಳಿ ಗುರು ಬೆಳದಿಂಗಳು ಸಂಘಟನೆಯಿಂದ ‘ಗುರುವನ’ ಲೋಕಾರ್ಪಣೆ
Advertiser
Advertisement · 728×90 px

ಬದುಕಿನಲ್ಲಿ ಕನಸು ಕಾಣುವುದು ಸುಲಭ ಆದರೆ ಅದನ್ನು ನನಸು ಮಾಡುವುದು ಬಲುಕಷ್ಟ.  ತ್ಯಾಗ, ಪರಿಶ್ರಮ, ಇಚ್ಚಾಶಕ್ತಿ ಇರುವತಂಡವೊಂದಿದ್ದರೆ ಯಾವುದನ್ನು ಸಾಧಿಸಲು ಸಾಧ್ಯ ಎಂದು ಹಿಂದುಳಿದ ವರ್ಗ ಹಾಗೂ ಸಮಾಜಕಲ್ಯಾಣ ಸಚಿವರಾದ ಕೋಟಶ್ರೀನಿವಾಸ ಪೂಜಾರಿರವರು ಹೇಳಿದರು.

ಅವರು   ಗುರು ಬೆಳದಿಂಗಳು ರಿ. ಕುದ್ರೋಳಿ ಇದರ ವತಿಯಿಂದ ಅನಂತಾಡಿ ಬಾಕಿಲಗುತ್ತು ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ, ಶ್ರೀಬ್ರಹ್ಮಬೈದರ್ಕಳ ಗರಡಿಯಲ್ಲಿ  ಬ್ರಹ್ಮ ಶ್ರೀ ನಾರಾಯಣ ಗುರುಗಳ ೧೬೭ನೇ ಜನ್ಮದಿನಾಚರಣೆಯ ಪ್ರಯುಕ್ತ ೧೬೭ ಔಷದೀಯ ಸಸಿನೆಡುವ ಕಾರ್ಯಕ್ರಮ ಹಾಗೂ ನೂತನವಾಗಿ ನಿರ್ಮಿಸಿರುವ  ಗುರುವವನ್ನು ಲೋಕಾರ್ಪಣೆಗೊಳಿಸಿ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಬದುಕಿನ ಜೊತೆಗೆ ಪರಿಸರವನ್ನು ಉಳಿಸಿಬೆಳೆಸುವ ಕೆಲಸ ಎಲ್ಲರಿಂದ ಆಗಬೇಕಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿಸಮಾಜದಲ್ಲಿರುವ ಕಟ್ಟಕಡೇಯ ವ್ಯಕ್ತಿಗೂ ಸಹಕಾರ ಮಾಡಬೇಕೆನ್ನುವುದು ಆಶಯ ನನ್ನದಾಗಿದೆ. ಈ ಗುರುಬೆಳದಿಂಗಳು ಸಂಸ್ಥೆಯಯೋಜನೆ ಯೋಚನೆಗಳು ಹಲವಿದ್ದು ಅವೆಲ್ಲವೂ ಸಫಲವಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ  ಮಾಜಿ ಸಚಿವರಾದ ರಮಾನಾಥ ರೈರವರು ಮಾತನಾಡಿ ಗುರುಗಳು ನಡೆದು ಬಂದ ಹಾದಿಅವಿಸ್ಮರಣೀಯ. ಈಗಿನ ಪೀಳಿಗೆ ಹಿಂದಿನ ಪೀಳಿಗೆಯನ್ನು ಅರ್ಥಮಾಡಿಕೊಂಡು ಮುನ್ನಡೆಯ ಬೇಕಾದುದು ಅಗತ್ಯ. ಗುರುಬೆಳದಿಂಗಳು ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯುತ್ತಾ ಬರುತ್ತಿದೆ. ದೈವಗಳ ಸಾನಿಧ್ಯವಿರುವ ಈಬಾಕಿಲದ ಮಣ್ಣಿನಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಔಷದೀಯ ವನವನ್ನು ನಿರ್ಮಿಸಿರುವುದು ಒಂದು ಒಳ್ಳೆಯಬೆಳವಣಿಗೆಯಾಗಿದೆ ಎಂದರು.

ಗುರುಬೆಳದಿಂಗಳು ರಿ.ಕುದ್ರೋಳಿ ಇದರ ಅಧ್ಯಕ್ಷರಾದ ಪದ್ಮರಾಜ್ ಆರ್. ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನುಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ಜಿಲ್ಲೆಯ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಬ್ರಹ್ಮ ಶ್ರೀನಾರಾಯಣಗುರುಗಳ ೧೬೭ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡು ಬಂದಿದ್ದೇವೆ. ಬಾಕಿಲಗುತ್ತಿವಿನಲ್ಲಿ ೧೬೭ಔಷದೀಯಗಿಡಗಳನ್ನು‌ ನೆಟ್ಟು ಇದೀಗ  ಗುರುವನವನ್ನು ಲೋಕಾರ್ಪಣೆ ಗೊಳಿಸಲಾಗಿದೆ. ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಸಿದ್ದಂತವನ್ನುನಾವೆಲ್ಲರೂ ಸಾಧಿಸುತ್ತೇವೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಸಹಾಯ, ನಿರ್ಗತಿಕರಿಗೆ ಆಸರೆ, ಅನಾರೋಗ್ಯದಿಂದಿರುವ ಬಡವರನ್ನುಚಿಕಿತ್ಸೆಗೆ ಸಹಕಾರ ನೀಡುತ್ತಾ ಬಂದಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಹಲವಾರು ಸಮಾಜ ಮುಖಿ‌ಕಾರ್ಯವನ್ನು ನಡೆಸುವ ಇರಾದೆಇದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ  ಬಂದರು ಹಾಗೂ ಮೀನುಗಾರಿಕ ಸಚಿವರಾದ ಅಂಗಾರ ಎಸ್., ಬಂಟ್ವಾಳ ಶಾಸಕರಾದ ರಾಜೇಶ್ನಾಯ್ಕ್,ರವರು ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿಅಧ್ಯಕ್ಷರಾದ ದೇವೇಂದ್ರ ಪೂಜಾರಿ, ಅನಂತಾಡಿ ಬಾಕಿಲಗುತ್ತು ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ ಕ್ಷೇತ್ರದ ಆಡಳಿತ ಅಧ್ಯಕ್ಷ ವಸಂತಪೂಜಾರಿ, ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಜಯಾನಾಂದ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಡಾ. ರಾಜಾರಾಮ್ಕೆ.ಬಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು‌.

ಇಂತಹ ಕಾರ್ಯಕ್ರಮ ರಾಜ್ಯದ್ಯಂತ ನಡೆಯಬೇಕು:

ಎಸ್. ಅಂಗಾರ

ಕಾರ್ಯಕ್ರಮಕ್ಕೆ ಆಗಮಿಸಿದ ಬಂದರು ಹಾಗೂ ಮೀನುಗಾರಿಕ ಸಚಿವರಾದ ಎಸ್ ಅಂಗಾರರವರು ಪತ್ರಕರ್ತರೊಂದಿಗೆ ಮಾತನಾಡಿ

ಗಿಡಮೂಲಿಕೆಗಳ ಸಸಿಗಳನ್ನು ನೆಟ್ಟು ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಬಾಕಿಲದಲ್ಲಿ ಔಷದೀಯ ವನವನ್ನುನಿರ್ಮಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಅಳಿವಿನಂಚಿನಲ್ಲಿರುವ ಗಿಡಮೂಲಿಕೆ ಗಿಡಗಳನ್ನು ನೆಟ್ಟುಬೆಳೆಸುವುದು ಅಗತ್ಯವಾಗಿದೆ. ಇಂತಹ ಮಹತ್ಕಾರ್ಯಗಳಿಗೆ ಸರಕಾರದ ಭಾಗದಿಂದ ಸಹಕಾರವನ್ನು ನೀಡಲು ಶ್ರಮಿಸುತ್ತೇನೆ. ಇಂತಹಕಾರ್ಯಕ್ರಮಗಳು ನಮ್ಮ ಜಿಲ್ಲೆಗೆ ಮಾತ್ರ ಸೀಮಿತವಾಗದೆ  ರಾಜ್ಯಾದ್ಯಾಂತ ಔಷದೀಯ ಸಸಿಗಳನ್ನು ನೆಟ್ಟು ಬೆಳೆಸುವಕಾರ್ಯವಾಗಬೇಕು ಎಂದರು

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್